ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆಭರಣಗಳ ಬಗ್ಗೆ ಹೆಚ್ಚು ಇಂಟ್ರೆಸ್ಟ್ ಇದೆ. ಒಂದಕ್ಕಿಂತ ಒಂದು ಸುಂದರವಾದ ಆಭರಣಗಳ ಕಲೆಕ್ಷನ್‌ ಇಟ್ಟುಕೊಂಡಿದ್ದಾರೆ ನಟಿ. ಆದ್ರೆ ತಮ್ಮ ಬೆಲೆಬಾಳೋ 20 ಕ್ಯಾರೆಟ್ ವಜ್ರವನ್ನು ಮಗನ ಪತ್ನಿಗೆ ಗಿಫ್ಟ್ ಮಾಡೋಕೆ ರೆಡಿ ಇದ್ದಾರೆ ಶಿಲ್ಪಾ. ಆದರೆ ಒಂದು ಕಂಡೀಷನ್ ಇದೆ.

ನಿನ್ನ ಹೆಂಡತಿ ನನಗೆ ಒಳ್ಳೆಯವನಾಗಿದ್ದರೆ ಅವಳಿಗೆ ನನ್ನ 20 ಕ್ಯಾರೆಟ್ ವಜ್ರವನ್ನು ನೀಡುತ್ತೇನೆ ಎಂದು ನಾನು ಯಾವಾಗಲೂ ನನ್ನ ಮಗನಿಗೆ ಹೇಳುತ್ತೇನೆ. ಇಲ್ಲದಿದ್ದರೆ ಏನಾದರೂ ಚಿಕ್ಕ ಗಿಫ್ಟ್ ಕೊಡುತ್ತೇನೆ ಎಂದಿದ್ದಾರೆ ನಟಿ.

'ನಗ್ನತೆ ಅಪರಾಧವಾದರೆ ನಾಗಾ ಸಾಧುಗಳನ್ನು ಬಂಧಿಸಿ' ಮಿಲಿಂದ್‌ಗೆ ಪೂಜಾ ಬೆಂಬಲ!

ನನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ನೀವು ನೋಡಿದರೆ, ನಾನು ಮೊದಲು ನನ್ನನ್ನು ತಾಯಿ ಎಂದೇ ಗುರುತಿಸುತ್ತೇನೆ.  ಏಕೆಂದರೆ ತಾಯಿಯ ಸ್ಥಾನ ಯಾವಾಗಲೂ ನನ್ನ ಆದ್ಯತೆ ಎಂದಿದ್ದಾರೆ.

ಆಭರಣ ನನ್ನ ಮುಂದಿನವರಿಗಾಗಿ ಒಂದು ಸಂಪತ್ತಾಗಬಹುದೆಂದುಕೊಂಡು ನಾನು ಆಭರಣ ಕೊಳ್ಳುತ್ತೇನೆ. 5 ಕ್ಯಾರೆಟ್ ವಜ್ರದ ಉಂಗುರದ ಮೂಲಕ ರಾಜ್‌ಕುಂದ್ರಾ ಹೇಗೆ ಪ್ರಪೋಸ್ ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ ನಟಿ.