Asianet Suvarna News Asianet Suvarna News

ಮಗಳ ಪಾದ ತೊಳೆದು ಪೂಜೆ ಮಾಡಿದ ಶಿಲ್ಪಾಶೆಟ್ಟಿ- ರಾಜ್​ ಕುಂದ್ರಾ: ವಿಡಿಯೋ ವೈರಲ್​

ಮಗಳು ಸಮೀಷಾಳ ಪಾದ ತೊಳೆದು ಪೂಜೆ ಮಾಡಿದ್ದಾರೆ  ಶಿಲ್ಪಾಶೆಟ್ಟಿ- ರಾಜ್​ ಕುಂದ್ರಾ ದಂಪತಿ: ವಿಡಿಯೋ ಆಗಿದೆ ವೈರಲ್​
 

Shilpa shetty Raj Kundra  washed her daughters feet and worshiped her suc
Author
First Published Oct 22, 2023, 6:20 PM IST

ಸದ್ಯ ಬಾಲಿವುಡ್​​ನ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್​ ಕುಂದ್ರಾ ಜೋಡಿ ಸಕತ್​ ಹಾಟ್​ ಟಾಪಿಕ್​ ಆಗಿದೆ. ರಾಜ್​ ಕುಂದ್ರಾ ಅವರು ಪೋರ್ನ್​ ವಿಡಿಯೋ ಕೇಸ್​ನಲ್ಲಿ ಸಿಲುಕಿ ಜೈಲಿನಿಂದ ಹೊರಬಂದ ಮೇಲೆ ಮಾಸ್ಕ್​ ಹಾಕಿಕೊಂಡು ತಿರುಗುವುದರಿಂದ ಹಿಡಿದು, ಮೊನ್ನೆ ತಾನೇ ಮಾಸ್ಕ್​ನಿಂದ ಪ್ರತ್ಯೇಕವಾಗಿರುವವರೆಗಿನ ಸ್ಟೋರಿ ಸಕತ್​ ಇಂಟರೆಸ್ಟಿಂಗ್​ ಆಗಿಯೇ ಇದೆ. ಈಗ ತಾವು ಜೈಲಿನಲ್ಲಿ ಇದ್ದ ಘಟನೆಗಳನ್ನೇ ಆಧರಿಸಿದ UT 69 ಚಿತ್ರದಲ್ಲಿ ರಾಜ್​ ಕುಂದ್ರಾ ಅವರೇ ನಟಿಸಿದ್ದು, ಅದರ ಟ್ರೇಲರ್​ ಈಚೆಗೆ ಬಿಡುಗಡೆಯಾಗಿದೆ. ಈಗ ಆ ಚಿತ್ರದತ್ತ ರಾಜ್​ ಕುಂದ್ರಾ ದಂಪತಿ ಕಣ್ಣು ನೆಟ್ಟಿದ್ದಾರೆ. ಇದರ ನಡುವೆಯೇ ಈ ದಂಪತಿ ತಮ್ಮ ಮಗಳು ಸಮೀಷಾದ ಪಾದ ತೊಳೆದು ವಿಶೇಷ ಪೂಜೆ ಸಲ್ಲಿಸಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ನಟಿ ಶಿಲ್ಪಾ ಶೆಟ್ಟಿ 2020ರಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ.  2009 ರಲ್ಲಿ ಉದ್ಯಮಿ ರಾಜ್ ಕುಂದ್ರಾರನ್ನು ಶಿಲ್ಪಾ ಶೆಟ್ಟಿ ವಿವಾಹವಾದರು. ಈ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಇದಾದ ಬಳಿಕ,  ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅವರು, 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ. ಈಗ ಮಗಳಿಗೆ ಮೂರುವರೆ ವರ್ಷ. ಕಳೆದ ಫೆಬ್ರುವರಿಯಲ್ಲಿ ಮೂರನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕೋವಿಡ್​​ ಹಿನ್ನೆಲೆಯಲ್ಲಿ ಕಳೆದ ವರ್ಷಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಈ ಬಾರಿ ಸಕತ್​ ಗ್ರ್ಯಾಂಡ್ ಆಗಿ ಆಚರಿಸಿದ್ದರು. ಇದೀಗ ಮಗಳಿಗಾಗಿ ವಿಶೇಷ ಪೂಜೆ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಪತಿ ಸಪರೇಟ್‌ ಆಗಿದ್ದು ಯಾಕೆ? ವಿಡಿಯೋ ಮೂಲಕ ಮೌನ ಮುರಿದ ರಾಜ್‌ ಕುಂದ್ರಾ!

ವೈರಲ್​ ವಿಡಿಯೋದಲ್ಲಿ ರಾಜ್​ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರು ಮಗಳ ಪಾದವನ್ನು ತೊಳೆದು ಕುಂಕುಮವನ್ನು ಇಟ್ಟು ಪೂಜೆ ಸಲ್ಲಿಸುವುದನ್ನು ನೋಡಬಹುದು. ಇಂದು ಅಷ್ಟಮಿಯ ಶುಭ ಸಂದರ್ಭದಲ್ಲಿ ನಾವು ನಮ್ಮದೇ ಆದ ದೇವಿಯಾದ ಸಮೀಷದೊಂದಿಗೆ ಕನ್ಯಾ ಪೂಜೆಯನ್ನು ಮಾಡಿದ್ದೇವೆ. ಇದು ಪರಮ ದೇವಿ ಮಹಾ ಗೌರಿಗೆ ಮತ್ತು ಆಕೆಯ ಒಂಬತ್ತು ದೈವಿಕ ರೂಪಗಳಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ವಿಧಾನ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.  ಪೂಜೆ ಮಾಡಿರುವ ವಿಡಿಯೋ ಅಷ್ಟೇ ವೈರಲ್​ ಆಗಿದೆ. ಅಷ್ಟಕ್ಕೂ ಈ ಮಗಳನ್ನು ಕಂಡರೆ ದಂಪತಿಗೆ ಎಲ್ಲಿಲ್ಲದ ಪ್ರೀತಿ. ಈಚೆಗಷ್ಟೇ ಅವರು ಮಗಳ ಕೋಣೆಯನ್ನು  ಹಲವಾರು ಪ್ರಾಣಿಗಳ ಚಿತ್ರದೊಂದಿಗೆ ತಯಾರು ಮಾಡಿಸಿದ್ದರು. ಅದರ ವಿಡಿಯೋವನ್ನು ಖುದ್ದು  ಶಿಲ್ಪಾ ಶೆಟ್ಟಿ ಇನ್‌ಸ್ಟಾ ಸ್ಟೋರಿಯಲ್ಲಿ  ಹಂಚಿಕೊಂಡಿದ್ದರು. ನೀಲಿ, ಗುಲಾಬಿ ಮತ್ತು ಬಿಳಿ ಬಣ್ಣಗಳಿಂದ ಕೋಣೆ ಅಲಂಕರಿಸಿದ್ದರು.  ಗೋಡೆಗಳ ಒಂದು ಬದಿಯಲ್ಲಿ ಆನೆ ಮತ್ತು ಜಿರಾಫೆ ಮತ್ತು ಚಿಟ್ಟೆಗಳು ಸೇರಿದಂತೆ ಹಲವಾರು ಪ್ರಾಣಿಗಳನ್ನು ಚಿತ್ರಿಸಲಾಗಿದೆ.  ಹಾಸಿಗೆಯಲ್ಲಿ ಹಲವಾರು ಆಟ ಸಾಮಾನುಗಳು ಚೆಂದವಾಗಿ ಕಂಗೊಳಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿತ್ತು.   

 ಮೊನ್ನೆಯಷ್ಟೇ ರಾಜ್​ ಕುಂದ್ರಾ ಅವರು,  ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿಲ  ನಾವು ಪ್ರತ್ಯೇಕಗೊಳ್ಳುತ್ತಿದ್ದೇವೆ. ನೀವೆಲ್ಲರೂ ಹರಿಸಿ ಎಂದು  ಪೋಸ್ಟ್‌ ಹಾಕಿ ಹಲ್​ಚಲ್​ ಸೃಷ್ಟಿಸಿದ್ದರು. ಈ ಪೋಸ್ಟ್​ ನೋಡಿದ ಹಲವರು ದಂಪತಿ ಡಿವೋರ್ಸ್​ ಪಡೆಯುತ್ತಿದ್ದಾರೆ ಎಂದೇ ಎಂದುಕೊಂಡಿದ್ದರು. ನಂತರ ಅವರು ತಾವು ಪ್ರತ್ಯೇಕಗೊಳ್ತಿರೋದು ಕೆಲವು ತಿಂಗಳುಗಳಿಂದ ಧರಿಸುತ್ತಿದ್ದ ಮಾಸ್ಕ್​ನಿಂದ ಎಂದು ಸಮಜಾಯಿಷಿ ಕೊಟ್ಟರು. ಮಾಸ್ಕ್​ ತೆಗೆದು ಮೊದಲ ಬಾರಿಗೆ ತಮ್ಮ ಚಿತ್ರದ ಕುರಿತು ಪತ್ರಿಕಾಗೋಷ್ಠಿ ಮಾಡಿದರು. 

ಇಂಡಿಯಾ ಅಂದ್ರೆ ಶಿಲ್ಪಾ ಪತಿ ರಾಜ್​ಕುಂದ್ರಾ ದೃಷ್ಟಿಯಲ್ಲಿ ಹೀಗಂತೆ! ವಿಡಿಯೋ ಕೇಳಿ ಛೀಮಾರಿ ಹಾಕ್ತಿದ್ದಾರೆ ನೆಟ್ಟಿಗರು

 

Follow Us:
Download App:
  • android
  • ios