ಸೂಪರ್ ಡ್ಯಾನ್ಸ್ ಸೀಸನ್ 4 ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವೀಕೆಂಡ್‌ನಲ್ಲಿ ಅದ್ಭುತ ಯುವ ನೃತ್ಯ ಪ್ರತಿಭೆಯನ್ನು ವೀಕ್ಷಕರು ಎಂಜಾಯ್ ಮಾಡಿದ್ದಾರೆ. ಮಕ್ಕಳ ನೃತ್ಯ ರಿಯಾಲಿಟಿ ಶೋನ ಈ ಸೀಸನ್‌ನಲ್ಲಿ ಜಡ್ಜ್ ಶಿಲ್ಪಾ ಶೆಟ್ಟಿ ಕುಂದ್ರಾ, ಅನುರಾಗ್ ಬಸು ಮತ್ತು ಗೀತಾ ಕಪೂರ್ ಅವರು ಮಕ್ಕಳ ಟ್ಯಾಲೆಂಟ್ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಅಂತಹ ಒಬ್ಬ ಸ್ಪರ್ಧಿ ತನ್ನ ಮುಗ್ಧ ಅಭಿನಯದಿಂದ ಬೆರಗುಗೊಳಿಸಿದ ಘಟನೆ ನಡೆದಿದೆ. ಆರು ವರ್ಷದ ಫ್ಲೋರಿನಾ ಗೊಗೊಯ್, ಅಸ್ಸಾಂನ ಜೋರ್ಹಾಟ್ ಮೂಲದವಳು.  ಅಸ್ಸಾಂನ ಯುವತಿ ತನ್ನ ತಂದೆ ತನ್ನ ಅದೃಷ್ಟ ಎಂದು ತಂದೆಯ ಟೀ ಶರ್ಟ್ ಧರಿಸಿ ಪ್ರದರ್ಶನ ನೀಡಿದ್ದಾರೆ.

ಮಗಳು ಸಮೀಶಾ ಜೊತೆ ಮೊದಲ ಹೋಳಿ..! ಶಿಲ್ಪಾ ಶೆಟ್ಟಿ ಖುಷ್

ಮೂವರು ಜಡ್ಜ್ ಶಿಲ್ಪಾ ಶೆಟ್ಟಿ ಕುಂದ್ರಾ, ಗೀತಾ ಕಪೂರ್, ಮತ್ತು ಅನುರಾಗ್ ಬಸು ಫ್ಲೋರಿನಾ ಅವರ ಡ್ಯಾನ್ಸ್ ನೋಡಿ ಆಶ್ಚರ್ಯಚಕಿತರಾದರು. ಇದಲ್ಲದೆ ನರ್ತಕಿಯ ಸಮರ್ಪಣೆ ಮತ್ತು ದೃಢ ನಿಶ್ಚಯದ ಮಟ್ಟವನ್ನು ನಿರ್ಧರಿಸಲು ಸದಾ ಕಟ್ಟುನಿಟ್ಟಾಗಿ ಜಡ್ಜ್ ಮಾಡುವ ಗೀತಾ ಕಪೂರ್, ಫ್ಲೋರಿನಾಳ ಕೃತ್ಯವನ್ನು ನೋಡಿ ಬೆರಗಾಗಿದ್ದಾರೆ.

ಅವರು ನಿಂತುಕೊಂಡು 6 ವರ್ಷದ ಬಾಲೆಗೆ ಗೌರವ ಸೂಚಿಸಿದ್ದಾರೆ. ಶಿಲ್ಪಾ ಶೆಟ್ಟಿ ಕುಂದ್ರಾ ಅವರು ವೇದಿಕೆಯತ್ತ ನಡೆದು ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಕಪ್ಪು ಚುಕ್ಕೆ ಇಟ್ಟಿದ್ದಾರೆ.