ಮಗಳ ಜೊತೆ ಶಿಲ್ಪಾ ಪತಿಯ ಮುದ್ದು ತುಂಟಾಟ: ಕ್ಯೂಟ್ ಅನ್ನೋ ಬದ್ಲು ಪೋರ್ನ್ ವಿಷ್ಯನೇ ಕೆದಕೋದಾ ನೆಟ್ಟಿಗರು?
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮಗಳನ್ನು ಕುಳ್ಳರಿಸಿಕೊಂಡು ಟ್ರಾಲಿ ಬ್ಯಾಗ್ನಲ್ಲಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲೂ ಪೋರ್ನ್ ವಿಷ್ಯ ಕೆದಕ್ತಿದ್ದಾರೆ ನೆಟ್ಟಿಗರು!
ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರು ಸದ್ಯ ನಿರಾಳರಾಗಿದ್ದಾರೆ. ಅಷ್ಟಕ್ಕೂ, 2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಇವರ ಪತಿ, ರಾಜ್ ಕುಂದ್ರಾ ನೀಲಿ ಚಿತ್ರ (porn film) ಕೇಸ್ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು. ಬ್ಲೂ ಫಿಲ್ಮ್ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.
ಈ ಕೇಸ್ನಲ್ಲಿ ರಾಜ್ ಕುಂದ್ರಾ ಜೈಲುವಾಸ ಅನುಭವಿಸಿದ್ದರು. ಇದಾದ ಬಳಿಕ ಕೆಲ ತಿಂಗಳು ರಾಜ್ ಕುಂದ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ನಂತರ ಗಣೇಶೋತ್ಸವದ ವೇಳೆ ಕಾಣಿಸಿಕೊಂಡರೂ ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದರು. ಇದೀಗ ಮೊದಲೇ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಆಗಲೂ ಮಾಸ್ಕ್ ಧರಿಸಿ ಬಂದಿದ್ದಾರೆ. ಈ ವಿಡಿಯೋದಲ್ಲಿ ಅವರು ಸ್ಟ್ಯಾಂಡ್-ಅಪ್ ಕಾಮಿಡಿ ಮಾಡುತ್ತಿದ್ದಾರೆ. ಕಪ್ಪು ಬಣ್ಣದ ಜಂಪ್ಸ್ಯೂಟ್ ಹಾಕಿ ಶೋಗೆ ಬಂದ ರಾಜ್ ಕುಂದ್ರಾ ಜೊತೆ ಸಾಕಷ್ಟು ಬಾಡಿಗಾರ್ಡ್ಸ್ ಇದ್ದರು. ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ತಮ್ಮನ್ನು ತಾವು ಅವರು ಪರಿಚಯಿಸಿಕೊಂಡರು. ‘ನಾನು ರಾಜ್ ಕುಂದ್ರಾ. ಮಾಸ್ಕ್ ಮ್ಯಾನ್ ಎಂದೇ ಫೇಮಸ್. ಶಿಲ್ಪಾ ಶೆಟ್ಟಿ ಪತಿ ಅಂತಲೂ ಜನಪ್ರಿಯತೆ ಪಡೆದಿದ್ದೇನೆ’ ಎಂದಿದ್ದರು.
ಬ್ಲೂ ಫಿಲ್ಮ್ಂ ಕೇಸ್ನಲ್ಲಿ ಸಿಕ್ಕಿಬಿದ್ದ ಶಿಲ್ಪಾ ಪತಿ ರಾಜ್ ಕುಂದ್ರಾರ ತನಿಖಾಧಿಕಾರಿಗಳಿಂದ ಹೊಸ ವಿಷಯ ಬಯಲು!
ಕೆಲ ದಿನಗಳ ಹಿಂದೆ ಜಾರಿ ನಿರ್ದೇಶನಲಾಯದ (ಇಡಿ) ಅಧಿಕಾರಿಗಳು ಹೊಸ ವಿಷಯ ತಿಳಿಸಿದ್ದರು. ಅದೇನೆಂದರೆ, ಜುಲೈ 2021 ರಲ್ಲಿ ಅಶ್ಲೀಲ ದಂಧೆಯಲ್ಲಿ ತೊಡಗಿರುವ ಮೂಲಕ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಕೇಸ್ನಲ್ಲಿ ಸಿಲುಕಿರುವ ರಾಜ್ ಕುಂದ್ರಾ ಹಾಗೂ ಅಶ್ಲೀಲ ದಂಧೆಗೆ ಯಾವುದೇ ನೇರ ಸಂಪರ್ಕ ಇರುವುದು ಇದುವರೆಗೆ ತಿಳಿದುಬಂದಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದರು. ಬ್ರಿಟನ್ ಮೂಲದ ಕೆನ್ರಿನ್ ಕಂಪನಿಯ ವಿವಿಧ ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿದ ಹಣದ ಜಾಡುಗಳ ಮೇಲೆ ಇಡಿ ಗಮನಹರಿಸುತ್ತಿದ್ದು, ಸದ್ಯ ಯಾವುದೇ ನೇರ ವಹಿವಾಟು ನಡೆದಿರುವುದು ತಿಳಿದುಬಂದಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ, ಪೋರ್ನ್ ವಿಡಿಯೋ ಕೇಸ್ನಲ್ಲಿ ರಾಜ್ ಕುಂದ್ರಾ ಅವರು ನೇರವಾಗಿ ಪಾಲ್ಗೊಂಡಿಲ್ಲ ಎನ್ನುವುದು ಸದ್ಯದ ಮಟ್ಟಿಗೆ ತಿಳಿದುಬಂದಿದೆ. ಇದರ ಬೆನ್ನಲ್ಲೇ ರಾಜ್ ಕುಂದ್ರಾ ಅವರು ತಮ್ಮ ಇಬ್ಬರು ಮಕ್ಕಳ ಜೊತೆ ತಾವೂ ಮಕ್ಕಳಾಗಿ ಏರ್ಪೋರ್ಟ್ನಲ್ಲಿ ಕಂಡು ಬಂದಿದ್ದಾರೆ.
ಅಷ್ಟಕ್ಕೂ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿಗೆ ಇಬ್ಬರು ಮಕ್ಕಳು. 2009ರಲ್ಲಿ ಈ ಜೋಡಿ ಮದುವೆಯಾದರೆ, 2012 ರಲ್ಲಿ ತಮ್ಮ ಮೊದಲ ಮಗು ವಿಯಾನ್‌ಗೆ ಅಪ್ಪ-ಅಮ್ಮ ಆದರು. 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸಮೀಶಾ ಎಂಬ ಮಗಳನ್ನು ದಂಪತಿ ಪಡೆದುಕೊಂಡಿದ್ದಾರೆ. ಇದೀಗ ಏರ್ಪೋರ್ಟ್ನಲ್ಲಿ ಸೂಟ್ಕೇಸ್ಗೆ ಇರುವ ಸೈಕಲ್ನಲ್ಲಿ ತಾವೂ ಕುಳಿತು ಮಗಳನ್ನು ಕುಳ್ಳರಿಸಿಕೊಂಡು ಜಾಲಿ ರೈಡ್ ಮಾಡಿದ್ದಾರೆ ರಾಜ್ ಕುಂದ್ರಾ. ಇದರ ವಿಡಿಯೋ ವೈರಲ್ ಆಗಿದೆ. ಚಿಕ್ಕಮಗುವಿನ ಮನಸ್ಸು ಇದ್ದವರಿಗೆ ಮಾತ್ರ ಇಂಥದ್ದೆಲ್ಲಾ ಸಾಧ್ಯ ಎಂಬ ಕ್ಯಾಪ್ಷನ್ ಇದಕ್ಕೆ ನೀಡಲಾಗಿದೆ. ಆದರೆ ಹಲವರು ರಾಜ್ ಕುಂದ್ರಾ ಕಾಲು ಎಳೆಯುವುದನ್ನು ಮಾತ್ರ ಬಿಟ್ಟಿಲ್ಲ. ಪೋರ್ನ್ ವಿಡಿಯೋದಲ್ಲಿ ಪಾತ್ರ ಇಲ್ಲ ಎಂದು ಸದ್ಯ ಸಾಬೀತಾಗಿದ್ದರೂ ಅದೇ ವಿಷಯವನ್ನು ಕೆದಕುತ್ತಿದ್ದಾರೆ. ದಂಪತಿ ಇಬ್ಬರೂ ಓವರ್ ಆ್ಯಕ್ಟಿಂಗ್ ಎಂದು ಇನ್ನು ಕೆಲವರು ಹೇಳಿದರೆ, ಮಕ್ಕಳಾಟ ನಿಲ್ಲಿಸಿ ಸಾಕು ಎಂದು ಮತ್ತೆ ಕೆಲವರು ಟ್ರೋಲ್ ಮಾಡಿದ್ದಾರೆ.