* ನನ್ನ ಪತಿ ಮುಗ್ಧ: ಶಿಲ್ಪಾ ಶೆಟ್ಟಿ* ‘ಕಾಮೋತ್ತೇಜಕ ಚಿತ್ರ’ ತೆಗೆಯುತ್ತಿದ್ದರು, ಬ್ಲೂಫಿಲ್ಮ್‌ ಅಲ್ಲ* ಅವರ ವ್ಯವಹಾರದಲ್ಲಿ ನಾನು ಭಾಗೀದಾರಳಲ್ಲ* ಪೊಲೀಸರ ಮುಂದೆ ಬಾಲಿವುಡ್‌ ನಟಿ ಹೇಳಿಕೆ

ಮುಂಬೈ(ಜು.25): ಬ್ಲೂ ಫಿಲಂ ದಂಧೆ ನಡೆಸುತ್ತಿದ್ದ ಆರೋಪ ಸಂಬಂಧ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ತಮ್ಮ ಪತಿ ರಾಜ್‌ ಕುಂದ್ರಾ ಮುಗ್ಧ. ಅವರು ಕಾಮೋತ್ತೇಜಕ ಚಿತ್ರಗಳನ್ನು ತೆಗೆಯುತ್ತಿದ್ದರೇ ವಿನಾ ಬ್ಲೂಫಿಲಂ ಅಲ್ಲ ಎಂದು ಅವರ ಪತ್ನಿ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಹೇಳಿಕೆ ನೀಡಿದ್ದಾರೆ. ಅಲ್ಲದೆ ಇದಕ್ಕೆಲ್ಲಾ ರಾಜ್‌ ಕುಂದ್ರಾ ಅವರ ಲಂಡನ್‌ ಮೂಲದ ಭಾವ ಕಾರಣ ಎಂದು ಆರೋಪಿಸಿದ್ದಾರೆ.

ರಾಜ್‌ ಕುಂದ್ರಾ ಬಂಧನ ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿಅವರನ್ನು ಶುಕ್ರವಾರ ಮುಂಬೈ ಪೊಲೀಸರು ಅವರ ಮನೆಯಲ್ಲಿ ಸುಮಾರು 6 ತಾಸು ವಿಚಾರಣೆಗೆ ಒಳಪಡಿಸಿದ್ದಾರೆ. ‘ಬ್ಲೂ ಫಿಲಂಗಳನ್ನು ಪ್ರಸಾರ ಮಾಡಲು ರಾಜ್‌ ಕುಂದ್ರಾ ಬಳಸುತ್ತಿದ್ದರು ಎನ್ನಲಾದ ಹಾಟ್‌ಶಾಟ್ಸ್‌ ಆ್ಯಪ್‌ನಲ್ಲಿ ಏನಿರುತ್ತಿತ್ತು ಎಂಬುದು ನನಗೆ ಗೊತ್ತಿಲ್ಲ. ಆ ಆ್ಯಪ್‌ನಲ್ಲಿ ನನ್ನ ಪಾತ್ರ ಯಾವುದೂ ಇಲ್ಲ. ನಾನು ಭಾಗೀದಾರಳೂ ಅಲ್ಲ’ ಎಂದು ತಿಳಿಸಿದ್ದಾರೆ.

ಇದೇ ವೇಳೆ, ‘ಕಾಮೋತ್ತೇಜಕ ಚಿತ್ರಗಳಿಗೂ ಅಶ್ಲೀಲ ಚಿತ್ರಗಳಿಗೂ ವ್ಯತ್ಯಾಸವಿದೆ. ರಾಜ್‌ ಕುಂದ್ರಾ ಅವರು ಅಶ್ಲೀಲ ಚಿತ್ರಗಳ ನಿರ್ಮಾಪಕರಾಗಿರಲಿಲ್ಲ. ಕಾಮೋತ್ತೇಜಕ ಚಿತ್ರಗಳನ್ನು ಚಿತ್ರೀಕರಿಸುತ್ತಿದ್ದರು. ಆದರೆ ಒಟಿಟಿ ಪ್ಲಾಟ್‌ಫಾಮ್‌ರ್‍ಗಳು ಹಾಗೂ ವೆಬ್‌ಸೀರೀಸ್‌ನಲ್ಲಿರುವ ದೃಶ್ಯಗಳು ರಾಜ್‌ ಅವರ ಆ್ಯಪ್‌ನಲ್ಲಿನ ಚಿತ್ರಗಳಿಗಿಂತ ಹೆಚ್ಚು ಅಶ್ಲೀಲವಾಗಿರುತ್ತವೆ’ ಎಂದು ಶಿಲ್ಪಾ ಹೇಳಿದ್ದಾರೆ.

ಅಲ್ಲದೆ, ‘ಹಾಟ್‌ಶಾಟ್ಸ್‌ ಆ್ಯಪ್‌ನಲ್ಲಿ ರಾಜ್‌ ಕುಂದ್ರಾ ಭಾವ ಪ್ರದೀಪ್‌ ಬಕ್ಸಿ ಭಾಗೀದಾರರಾಗಿದ್ದಾರೆ’ ಎಂದು ದೂರಿದ್ದಾರೆ.

ರಾಜ್‌ ಕುಂದ್ರಾ ಅವರು ಬ್ಲೂ ಫಿಲಂ ದಂಧೆಯಲ್ಲಿ ತೊಡಗಿರುವ ವಿಷಯ ಶಿಲ್ಪಾ ಅವರಿಗೆ ಗೊತ್ತಿದೆಯೇ ಎಂಬುದನ್ನು ಅರಿಯುವ ಉದ್ದೇಶದಿಂದ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ಬ್ಲೂಫಿಲಂ ಹಣ ಆನ್‌ಲೈನ್‌ ಬೆಟ್ಟಿಂಗ್‌ಗೆ ಬಳಕೆ ಶಂಕೆ

ರಾಜ್‌ ಕುಂದ್ರಾ ಅವರು ಯಸ್‌ ಬ್ಯಾಂಕಿನಲ್ಲಿ ಹೊಂದಿರುವ ಖಾತೆಯಿಂದ ಯುನೈಟೆಡ್‌ ಬ್ಯಾಂಕ್‌ ಆಫ್ರಿಕಾದ ಖಾತೆಯೊಂದಕ್ಕೆ ಹಣ ವರ್ಗಾವಣೆಯಾಗಿದೆ. ಇದಕ್ಕೆ ದಾಖಲೆ ಸಿಕ್ಕಿದೆ. ಹೀಗಾಗಿ ಬ್ಲೂ ಫಿಲಂ ಮಾರಾಟದಿಂದ ಬಂದ ಹಣವನ್ನು ಆನ್‌ಲೈನ್‌ ಬೆಟ್ಟಿಂಗ್‌ಗೆ ಬಳಸಲಾಗುತ್ತಿತ್ತೆ ಎಂಬ ಶಂಕೆ ಪೊಲೀಸರನ್ನು ಕಾಡುತ್ತಿದೆ.