ಶೂಸ್ ಧರಿಸಿ ಧ್ವಜ ಹಾರಿಸಿದ ನಟಿ ಶಿಲ್ಪಾ ಶೆಟ್ಟಿ: ಟ್ರೋಲ್ ಆಗ್ತಿದ್ದಂತೆಯೇ ಕೊಟ್ಟ ಉತ್ತರವೇನು ನೋಡಿ!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿನ್ನೆ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಶೂಸ್ ಧರಿಸಿ ಟ್ರೋಲ್ಗೆ ಒಳಗಾಗಿದ್ದಾರೆ. ಇದಕ್ಕೆ ನಟಿ ಕೊಟ್ಟು ತಿರುಗೇಟು ಏನು ನೋಡಿ...
ಬಾಲಿವುಡ್ನ ಕ್ಯೂಟ್ ನಟಿಯರಲ್ಲಿ ಒಬ್ಬರು ಕನ್ನಡದ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) . ವಯಸ್ಸು 48 ಆದರೂ 20ರ ಯುವತಿಯರಂತೆ ಮೆಂಟೇನ್ ಮಾಡಿದ್ದಾರೆ ನಟಿ. ಯೋಗ, ಧ್ಯಾನದ ಮೂಲಕ ಶರೀರವನ್ನು ಫಿಟ್ ಆಗಿಟ್ಟುಕೊಂಡಿದ್ದಾರೆ. ಅದೇ ರೀತಿ, ಬಹುತೇಕ ಎಲ್ಲ ಹಬ್ಬ -ಹರಿದಿನಗಳನ್ನು ನಟಿ ಶಾಸ್ತ್ರೋಕ್ತವಾಗಿಯೇ ಆಚರಿಸುತ್ತಾರೆ. ಅದೇ ರೀತಿ ನಿನ್ನೆ ಸ್ವಾತಂತ್ರ್ಯ ದಿನವನ್ನೂ ಮನೆಯಲ್ಲಿ ಕುಟುಂಬಸ್ಥರ ಸಹಿತ ಆಚರಿಸಿದ್ದಾರೆ. ಧ್ವಜಾರೋಹಣ ಮಾಡಿ ರಾಷ್ಟ್ರಭಕ್ತಿಯನ್ನೂ ಮೆರೆದಿದ್ದಾರೆ. ಆದರೆ ಅಲ್ಲೊಂದು ಎಡವಟ್ಟು ಆಗಿದೆ. ಅದೇನೆಂದರೆ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಶೂಸ್ ಧರಿಸಿದ್ದಾರೆ. ಸಾಮಾನ್ಯವಾಗಿ ಶುಭ ಕಾರ್ಯಕ್ರಮಗಳಲ್ಲಿ ಚಪ್ಪಲಿ, ಶೂಸ್ಗಳನ್ನು ಧರಿಸುವುದಿಲ್ಲ. ಅದಕ್ಕೆ ಕೊಳಕು ಅಂಟಿರುತ್ತದೆ ಎನ್ನುವ ಕಾರಣಕ್ಕಾಗಿ ಯಾವುದೇ ಶುಭ ಸಮಾರಂಭಗಳಲ್ಲಿಯೂ ಬರಿಗಾಲಿನಲ್ಲಿಯೇ ಕಾರ್ಯ ನೆರವೇರಿಸುವುದು ಇದೆ. ಅದೇ ರೀತಿ ಧ್ವಜಾರೋಹಣ ಕೂಡ ಅತ್ಯಂತ ಶುಭ ಕಾರ್ಯಗಳಲ್ಲಿ ಒಂದು ಎಂದು ಬಗೆಯುವ ಹಿನ್ನೆಲೆಯಲ್ಲಿ ಶೂಸ್ ಧರಿಸಿದ ನಟಿ ಸಕತ್ ಟ್ರೋಲ್ಗೆ ಒಳಗಾಗಿದ್ದಾರೆ.
ತಮ್ಮ ಮನೆಯಲ್ಲಿ ಪತಿ, ತಾಯಿ ಹಾಗೂ ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಆಚರಿಸಿದ ಸಂದರ್ಭದಲ್ಲಿ ಈ ಎಡವಟ್ಟು ನಡೆದಿದೆ. ಧ್ವಜಾರೋಹಣ ಮಾಡಿ ಸೆಲ್ಯೂಟ್ ಮಾಡಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ತಾಯಿ ಹಾಗೂ ಮಗ ವಿಯಾನ್ ಕುಂದ್ರಾ ಜೊತೆ ಧ್ವಜಾರೋಹಣ ಮಾಡುವುದನ್ನು ಕಾಣಬಹುದು. ಅವರು ರಾಷ್ಟ್ರಗೀತೆಯನ್ನು ಹಾಡುವುದನ್ನೂ ಕೇಳಬಹುದು. ಆದರೆ ಜನರು ಶಿಲ್ಪಾ ಮಾತ್ರವಲ್ಲದೇ ಕುಟುಂಬಸ್ಥರೆಲ್ಲರ ಕಾಲಿನಲ್ಲಿ ಚಪ್ಪಲಿ, ಶೂಸ್ ಇರುವುದನ್ನು ನೋಡಿದ್ದಾರೆ. ಅದರಲ್ಲಿಯೂ ಧ್ವಜಾರೋಹಣ ಮಾಡಿದ್ದ ಶಿಲ್ಪಾ ಅವರೇ ಶೂಸ್ ಧರಿಸಿದ್ದು, ಸಕತ್ ಟ್ರೋಲ್ ಆಗುತ್ತಿದೆ. ನಟಿಯನ್ನು ತೀವ್ರ ಟೀಕೆ ಮಾಡಿದ್ದಾರೆ. ನೀವು ಶೂಸ್ ಕಳಚಿ ಧ್ವಜಾರೋಹಣ ಮಾಡಿದ್ದು ಸರಿಯಲ್ಲ ಎಂದಿದ್ದರೆ, ದೇಶಕ್ಕೆ ಧ್ವಜಕ್ಕೆ ನೀವು ಕೊಡುವ ಮರ್ಯಾದೆ ಇದೇನಾ ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಪೂರ್ತಿ ಇದೇ ವಿಷಯಕ್ಕೆ ನಟಿ ಟ್ರೋಲ್ (Troll) ಆಗಿದ್ದು, ಇಂದು ಟ್ರೋಲಿಗರಿಗೆ ಶಿಲ್ಪಾ ಶೆಟ್ಟಿ ಖಡಕ್ ತಿರುಗೇಟು ನೀಡಿದ್ದಾರೆ. ಗೂಗಲ್ನಲ್ಲೆಲ್ಲಾ ತಡಕಾಡಿ ಕೊನೆಗೆ ಇದರ ಸ್ಕ್ರೀನ್ಶಾಟ್ ಹಂಚಿಕೊಂಡಿರುವ ನಟಿ, ಧ್ವಜಾರೋಹಣ ಮಾಡುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ನನಗೆ ಅರಿವಿದೆ. ದೇಶ ಹಾಗೂ ಧ್ವಜಕ್ಕೆ ನನ್ನ ಅಪಾರ ಗೌರರವಿದೆ. ನಾನು ಹೆಮ್ಮೆಯ ಭಾರತೀಯಳು ಎಂಬ ಹೆಮ್ಮ ಕೂಡ ಇದೆ ಎಂದಿದ್ದಾರೆ. ಇಂದಿನ ಪೋಸ್ಟ್ ಇವತ್ತಿನ ದಿನವನ್ನು ಸಂಭ್ರಮಿಸಲು ಹಾಗೂ ಈ ಭಾವನೆಯನ್ನು ಶೇರ್ ಮಾಡಲು ಇರುವುದು. ನಾನು ಸಾಮಾನ್ಯವಾಗಿ ಟ್ರೋಲ್ಗಳನ್ನು ನಿರ್ಲಕ್ಷಿಸುತ್ತೇನೆ. ಆದರೆ ಈ ದಿನವೂ ಟ್ರೋಲ್ ಮಾಡಿದ್ದು ಸರಿಯಲ್ಲ ಎಂದು ಗರಂ ಆಗಿದ್ದಾರೆ.
ಚಿರತೆ ಔಟ್ಫಿಟ್ನಲ್ಲಿ ಶಿಲ್ಪಾ ಶೆಟ್ಟಿ: ಮುಖ ಮುಚ್ಕೊಂಡ್ ಬಂದ ಪತಿ; ಟ್ರೋಲಿಗರು ಬಿಡ್ತಾರಾ?
ಕೊನೆಗೆ ಗೂಗಲ್ ಸ್ಕ್ರೀನ್ಶಾಟ್ ಶೇರ್ ಮಾಡಿಕೊಂಡಿರುವ ನಟಿ, ಗೂಗಲ್ ಸರ್ಚ್ ಪೇಜ್‌ನ (Google Search Page) ಮಾಹಿತಿ ಇಲ್ಲಿದೆ ನೋಡಿ ಎಂದಿದ್ದಾರೆ. ಅದರಲ್ಲಿ ಭಾರತದ ಧ್ವಜಾರೋಹಣದ ಕೋಡ್ ಬಗ್ಗೆ ಉಲ್ಲೇಖವಾಗಿದ್ದು, ಅದರಲ್ಲಿ ಶೂಸ್ಗಳೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವುದನ್ನು ನಿರ್ಬಂಧಿಸುವುದಿಲ್ಲ ಎಂದು ಹೇಳಿದೆ. ಇದನ್ನು ಶೇರ್ ಮಾಡಿಕೊಂಡಿರುವ ನಟಿ, ಧ್ವಜಾರೋಹಣದ ನಿಯಮ ನನಗೆ ಅರಿವಿದೆ. ನಿಮಗೆ ಅರಿವಿಲ್ಲದಿದ್ದರೆ ಇಲ್ಲಿ ನೋಡಿ, ಭಾರತದ ಧ್ವಜವನ್ನು ಶೂಸ್ ಧರಿಸಿ ಹಾರಿಸಬಾರದು ಎಂಬ ನಿಯಮ ನಮ್ಮಲ್ಲಿ ಇಲ್ಲ ಎಂದಿದ್ದಾರೆ. ಇದಕ್ಕೂ ಟ್ರೋಲಿಗರು ಬಿಡುತ್ತಿಲ್ಲ. ಭಾರತೀಯಳೆಂಬ ಹೆಮ್ಮೆ ಇದ್ದರೆ, ಹಿಂದೂ ಸಂಪ್ರದಾಯಸ್ಥಳಾಗಿದ್ದರೆ, ಈ ರೀತಿ ಶೂಸ್ ಧರಿಸುತ್ತಿರಲಿಲ್ಲ ಎನ್ನುತ್ತಿದ್ದಾರೆ.