ನಟಿ ಶೆರ್ಲಿನ್‌ ಚೋಪ್ರಾ ಎಡವಿ ಬಿದ್ರೆ ಪ್ಲಾಸ್ಟಿಕ್‌ ಬೀಳೋದಮ್ಮಾ ಹುಷಾರ್‌ ಅನ್ನೋದಾ ನೆಟ್ಟಿಗರು? ಮತ್ತಿನ್ನೇನು ಹೇಳಿದ್ರು ನೋಡಿ... 

ನಟಿ ಶೆರ್ಲಿನ್​ ಚೋಪ್ರಾ ತಮ್ಮ ಅಂಗಾಂಗ ಪ್ರದರ್ಶನಗಳಿಂದಲೇ ಖ್ಯಾತಿ ಗಳಿಸಿದ ತಾರೆ. ಈಕೆ (Sherlyn Chopra) ಆಗಾಗ ಶಾಕಿಂಗ್‌ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ದೇಹ ಪ್ರದರ್ಶನ ಮಾಮೂಲಾಗಿಬಿಟ್ಟಿದೆ. ಎದೆಯ ಪ್ರದರ್ಶನ ಮಾಡಿದರಷ್ಟೇ ಸಿನಿಮಾದಲ್ಲಿ ತಮಗೆ ಉಳಿಗಾಲ ಎಂದು ಹೆಚ್ಚಿನ ನಟಿಯರು ಅಂದುಕೊಂಡಂತಿದೆ. ಇದಕ್ಕಾಗಿಯೇ ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಇವರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು. ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿಯರ ಪೈಕಿ ಇವರು ಕೂಡ ಒಬ್ಬರು. ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್‌ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಅವರಿಂದ ಮತ್ತಷ್ಟು ಪ್ರಚಾರಕ್ಕೆ ಬಂದಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲ ತಿಂಗಳ ಹಿಂದೆ ನಟಿ ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು. 'ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳಿದ್ದರು. ಅದಾದ ಬಳಿಕ, ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು.

ಮೂರು ಪತ್ನಿಯರ ಮೇಲೆ ಕ್ರೌರ್ಯ ಮೆರೆದಿದ್ದು ತಪ್ಪಲ್ಲ: ಅಬ್ರಾರ್​ ಹಖ್ ರೊಮ್ಯಾಂಟಿಕ್​ ವ್ಯಕ್ತಿ ಎಂದ ಬಾಬಿ ಡಿಯೋಲ್​!

ಇದೀಗ ಕಾರಿನಿಂದ ಇಳಿದು ಹೋಗುತ್ತಿರುವ ಸಂದರ್ಭದಲ್ಲಿ ಮಾಮೂಲಿನಂತೆ ಧಾರಾಳವಾಗಿ ದೇಹ ಪ್ರದರ್ಶನ ಮಾಡುವ ಬಟ್ಟೆ ಧರಿಸಿದ್ದರು. ಉದ್ದನೆಯ ಬೂಟ್‌ ಧರಿಸಿ ಹೋಗುತ್ತಿದ್ದರು. ಆದರೆ ನಟಿ ಎಡವಿ ಬಿಟ್ಟಿದ್ದಾರೆ. ಕಾಲಿಗೆ ಏಟು ಆದವಂತೆ ಉಫ್‌ ಏನಾಗ್ತಿದೆ ಇಲ್ಲಿ ಎಂದು ಕೇಳಿದ್ದಾರೆ. ಇದಕ್ಕೆ ನೂರಾರು ಮಂದಿ ಕಮೆಂಟ್‌ ಮಾಡುತ್ತಿದ್ದು, ಯಾರೊಬ್ಬರೂ ಪಾಪ ಎನ್ನುತ್ತಿಲ್ಲ. ಮೊದಲೇ ಬಿದ್ದೋಗಿರೋ ಹೆಣ್ಣು ನೀನು. ಇನ್ನೇನು ಬೀಳೋದು ಎಂದು ಪ್ರಶ್ನಿಸಿದ್ದಾರೆ. ಆಕೆಯ ಪ್ಲಾಸ್ಟಿಕ್‌ ಸರ್ಜರಿ ದೇಹವನ್ನು ಎಳೆದುತಂದಿರೋ ಹಲವು ನೆಟ್ಟಿಗರು, ನೀನು ಬಿದ್ರೆ ಪರವಾಗಿಲ್ಲಮ್ಮಾ, ನಿನ್ನ ಪ್ಲಾಸ್ಟಿಕ್‌ ಬಿದ್ದೋದ್ರೆ ಕಷ್ಟ ಎಂದು ಕಾಲೆಳೆದಿದ್ದಾರೆ.

ನಾಟಕ ಮಾಡಿದ್ದು ಸಾಕು, ಏನೂ ಆಗಿಲ್ಲ ಬೇರೇನೂ ಮುಚ್ಚಿಕೋ ಎಂದ್ರೆ ಮುಚ್ಚಿಕೊಳ್ಳಲ್ಲ. ಸದ್ಯ ಆ ಊಂ ಎನ್ನದೇ ಬಾಯಿ ಮುಚ್ಚಿಕೊಂಡು ಹೋಗು ಸಾಕು ಎಂದಿದ್ದಾರೆ. ಕೆಲ ದಿನಗಳ ಹಿಂದೆ ಈಕೆ, ರೋಡ್​ಸೈಡ್​ನಲ್ಲಿ ಉಚಿತವಾಗಿ ಕೋನ್​ ಐಸ್​ಕ್ರೀಂ ತಿಂದಿದ್ದು, ಸಕತ್​ ಟ್ರೋಲ್​ ಆಗಿದ್ದರು. ಐಸ್‌ಕ್ರೀಂ ಖರೀದಿ ಮಾಡಿದ ಬಳಿಕ ಅಂಗಡಿಯವ ದುಡ್ಡಿಯಾಗಿ ನೋಡಿದ್ದಾಗ, ಆಗ ನನ್ನ ಬಳಿ ದುಡ್ಡು ತಗೋತೀಯಾ? ಇಲ್ವಲ್ಲಾ ಎಂದು ಶೆರ್ಲಿನ್​ ಕೇಳಿದ್ದರು. ಅದಕ್ಕೆ ಏನು ಹೇಳಬೇಕು ಎಂದು ತಿಳಿಯದ ಐಸ್​ಕ್ರೀಂವಾಲಾ ಇಲ್ಲ ಎಂದಿದ್ದಾನೆ. ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದರು.

ಅರೆಬರೆ ಬೆತ್ತಲಾದ ರಶ್ಮಿಕಾಗಿಂತ ಪೂರ್ತಿ ನಗ್ನಳಾದ ತೃಪ್ತಿಗೆ ಇಷ್ಟು ಕಮ್ಮಿ ದುಡ್ಡಾ? ಮೋಸ ಅಂತಿದ್ದಾರೆ ಫ್ಯಾನ್ಸ್​

View post on Instagram