ನೋ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದ ಕಾರ್ತಿಕ್ ಆರ್ಯನ್; ವ್ಯಂಗ್ಯವಾಡಿದ ಮುಂಬೈ ಪೊಲೀಸ್
ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಾರ್ತಿಕ್ ಆರ್ಯನ್. ಮುಂಬೈ ಪೊಲೀಸರು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್ ಖ್ಯಾತ ನಟ ಕಾರ್ತಿಕ್ ಆರ್ಯನ್ ಸದ್ಯ ಶೆಹಜಾದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಶೆಹಜಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಕಾರ್ತಿಕ್ ಆರ್ಯನ್ ಇಂದು (ಫೆ.19) ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ತಾಯಿ ಜೊತೆ ದೇವಸ್ಥಾನಕ್ಕೆ ಬಂದಿದ್ದ ಕಾರ್ತಿಕ್ ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿ ತೊಂದರೆಗೆ ಸಿಲುಕಿದರು. ANI ವರದಿಯ ಪ್ರಕಾರ, ಕಾರ್ತಿಕ್ ಐಷಾರಾಮಿ ಕಾರನ್ನು ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದಕ್ಕಾಗಿ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ. ಕಾರ್ತಿಕ್ ಆರ್ಯನ್ ತನ್ನ ಕಪ್ಪು ಬಣ್ಣದ ಲಂಬೋರ್ಗಿನಿ ಕಾರಿನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಶೆಹಜಾದ ಸ್ಟಾರ್ ಕಾರ್ತಿಕ್ ಆರ್ಯನ್ ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದ ಫೋಟೋವನ್ನು ಕ್ಲಿಕ್ಕಿಸಿ ಮುಂಬೈ ಪೊಲೀಸ್ ಟೀಂ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. 'ಸಮಸ್ಯೆ, ಕಾರನ್ನು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದೆ. ಶೆಹಜಾದ ಸಂಚಾರ ನಿಯಮಗಳನ್ನು ಉಲ್ಲಂಘಿಸಬಹುದು ಎಂದು ತಪ್ಪಾಗಿ ಯೋಚಿಸಬೇಡಿ' ಎಂದು ಕಾರ್ತಿಕ್ ಸಿನಿಮಾದ ಹೆಸರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಸ್ಟಾರ್ ಗಳಾಗಲಿ, ಸೆಲೆಬ್ರಿಟಿಗಳಾಗಲಿ ಯಾರೇ ಆದರೂ ಸಂಚಾರ ನಿಯಮ ಅನುಸರಿಸಬೇಕು. ಇಲ್ಲದಿದ್ದರೆ ಫೈನ್ ಬೀಳುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇದೂ ಕೂಡ ಶೆಹಜಾದ ಪ್ರಮೋಷನ್ ಆಗಿದೆ ಎಂದು ಹೇಳುತ್ತಿದ್ದಾರೆ.
ಶೆಹಜಾದ ಬಗ್ಗೆ
ಕಾರ್ತಿಕ್ ಆರ್ಯನ್ ನಟನೆಯ ಶೆಹಜಾದ ತೆಲುಗಿನ ಸೂಪರ್ ಹಿಟ್ ಅಲಾ ವೈಕುಂಠಪುರಮುಲೂ ಸಿನಿಮಾದ ರಿಮೇಕ್ ಆಗಿದೆ. ಹಿಂದಿಯಲ್ಲೂ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆ ಇಡಲಾಗಿತ್ತು. ಆದರೆ ಅಭಿಮಾನಿಗಳನ್ನು ಸೆಳೆಯುವಲ್ಲಿ ಕಾರ್ತಿಕ್ ಆರ್ಯನ್ ವಿಫಲವಾಗಿದೆ. ಶಿವರಾತ್ರಿ ಇದ್ದರೂ ಶೆಹಜಾದ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಕಲೆಕ್ಷನ್ ದಿನದಿಂದ ದಿನಕ್ಕೆ ಕಡಿಮೆಯಾಗಿದೆ. ಪಠಾಣ್ ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳಾದರೂ ಬಾಕ್ಸ್ ಆಫೀಸ್ ನಲ್ಲಿ ತನ್ನ ಓಟ ಮುಂದುವರೆಸಿದೆ. ಪಠಾಣ್ ಅಬ್ಬರಕ್ಕೆ ಶೆಹಜಾದ ತತ್ತರಿಸಿದೆ.
Kartik Aaryan: 10 ದಿನಗಳ ಶೂಟಿಂಗ್ಗೆ 20 ಕೋಟಿ ಪಡೆದ ಬಾಲಿವುಡ್ ಚಾಕೊಲೇಟ್ ಬಾಯ್!
ರೋಹಿತ್ ಧವನ್ ನಿರ್ದೇಶನದ ಶೆಹಜಾದಾ ಚಿತ್ರಕ್ಕೆ ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಮುಲೂ ಸಿನಿಮಾದ ರಿಮೇಕ್ ಆಗಿದೆ. 2020ರಲ್ಲಿ ಬಂದ ತೆಲುಗು ಸಿನಿಮಾ ಇದಾಗಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಲೆಕ್ಷನ್ ಮಾಡಿತ್ತು.
ಕಾರ್ತಿಕ್ ಆರ್ಯನ್ ನಟನೆಯ 2022ರಲ್ಲಿ ರಿಲೀಸ್ ಆಗಿದ್ದ ಫ್ರೆಡ್ಡಿ ಮತ್ತು ಭೂಲ್ ಭುಲೈಯಾ 2 ಉತ್ತಮ ಪ್ರದರ್ಶನ ಕಂಡಿತ್ತು. ಫ್ರೆಡ್ಡಿ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಭೂಲ್ ಭುಲೈಯಾ 2 ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು, ಬಾಕ್ಸ್ ಆಫೀಸ್‌ನಲ್ಲಿ ₹180 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಹಾಗಾಗಿ ಶೆಹಜಾದ ಮೇಸಲೂ ನಿರೂಕ್ಷೆ ದುಪ್ಪಟ್ಟಾಗಿತ್ತು. ಆದರೀಗ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ.
ಶಾರುಖ್ ಖಾನ್ ಕೊನೆಯ ಸೂಪರ್ಸ್ಟಾರಾ? ಕಾರ್ತಿಕ್ ಆರ್ಯನ್ ಏನ್ ಹೇಳಿದ್ರು?
ಶೆಹಜಾದ ಸಿನಿಮಾ ವಿವಿಧ ರೀತಿಯಲ್ಲಿ ಪ್ರಮೋಷನ್ ಮಾಡಿತ್ತು. ಬೈ 1 ಗೆಟ್ 1 ಟಿಕೆಟ್ ಆಫರ್ ಕೂಡ ನೀಡಿತ್ತು. ಆದರೂ ನಿರೀಕ್ಷೆಯ ಗೆಲುವು ದಾಖಲಿಸಿಲ್ಲ. ಶೆಹಜಾದಾ ಮೂಲತಃ ಫೆಬ್ರವರಿ 10 ರಂದು ಬಿಡುಗಡೆಯಾಗಬೇಕಿತ್ತು ಆದರೆ ಪಠಾಣ್‌ನೊಂದಿಗೆ ಘರ್ಷಣೆಯನ್ನು ತಪ್ಪಿಸಲು ಫೆಬ್ರವರಿ 17 ಕ್ಕೆ ರಿಲೀಸ್ ಮಾಡಲಾಯಿತು.