ಜೂನ್‌ 8ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ ಗರ್ಲ್‌ಫ್ರೆಂಡ್‌ ರಿಯಾ ಚಕ್ರವರ್ತಿ ಸುಶಾಂತ್ ಫ್ಲಾಟ್‌ನಿಂದ ಹೋಗುವಾರ 8 ಹಾರ್ಡ್‌ ಡಿಸ್ಕ್ ನಾಶ ಪಡಿಸಲಾಗಿತ್ತು ಎಂದು ಸುದ್ದಿ ಕೇಳಿ ಬಂದಿದೆ.

ಸುಶಾಂತ್ ಸಿಂಗ್ ಫ್ಲಾಟ್‌ ಮೇಟ್ ಸಿದ್ಧಾರ್ಥ್‌ ಪಿಥನಿ ಸಿಬಿಐ ವಿಚಾರಣೆಯಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಜೂನ್ 14ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಟನ ಪೋಷಕರು ರಿಯಾ ಚಕ್ರವರ್ತಿಯೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಸುಶಾಂತ್ ಸಾವಿನ ತನಿಖೆಗೆ ಸಿಬಿಐ Psychological Autopsy ಅಸ್ತ್ರ..!

ಲಾಕ್‌ಡೌನ್ ಸಂದರ್ಭ ಸುಶಾಂತ್ ಹಾಗೂ ರಿಯಾ ಮಧ್ಯೆ ಜಗಳ ನಡೆದಿದ್ದು, ನಂತರ ರಿಯಾ ಸುಶಾಂತ್‌ನನ್ನು ಬಿಟ್ಟು ಆತನ ಫ್ಲಾಟ್‌ನಿಂದ ಹೊರ ಬಂದಿದ್ದಳು ಎನ್ನಲಾಗಿತ್ತು. ಹಾರ್ಡ್‌ ಡ್ರೈವ್‌ನಲ್ಲಿ ಏನಿತ್ತು ಎಂದು ಗೊತ್ತಿಲ್ಲ.

ಆದರೆ ಸುಶಾಂತ್ ಹಾಗೂ ರಿಯಾ ಸಮ್ಮುಖದಲ್ಲಿಯೇ ಐಟಿ ತಜ್ಞರೊಬ್ಬರು ಬಂದು ಹಾರ್ಡ್‌ ಡ್ರೈವ್ ನಾಶ ಪಡಿಸಿದ್ದಾರೆ. ಈ ಸಂದರ್ಭ ಮನೆಯ ಸಹಾಯಕ ದೀಪೇಶ್ ಸಾವಂತ್, ಅಡುಗೆಯವ ನೀರಜ್ ಸಿಂಗ್ ಕೂಡಾ ಇದ್ದರು ಎಂದು ಸಿದ್ಧಾಥ್‌ ಪಿಥನಿ ತಿಳಿಸಿದ್ದಾರೆ.

ಸುಶಾಂತ್ ಕುಟುಂಬದ ಕಡೆಯಿಂದ ಪ್ರಕರಣವನ್ನು ವಾದಿಸುತ್ತಿರುವ ವಕೀಲ ವಿಕಾಸ್ ಸಿಂಗ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಇಲ್ಲೇನೋ ದೊಡ್ಡ ಪಿತೂರಿ ನಡೆದಿರುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ.

'ಇಲಿಗಳು ಬಿಲ ಬಿಟ್ಟು ಹೊರ ಬರ್ತಿವೆ' ಕಂಗನಾ ಕೊಟ್ಟ ಠಕ್ಕರ್‌ಗೆ ಮಾಫಿಯಾ ಗಪ್ ಚುಪ್!

ಏನೋ ಪಿತೂರಿ ನಡೆದಿರುವ ಸಾಧ್ಯತೆ ಇದೆ. ಇದರಲ್ಲಿ ಯಾರೋ ದೊಡ್ಡ ವ್ಯಕ್ತಿಗಳ ಕೈವಾಡ ಇರುವ ಸಾಧ್ಯತೆ ಇದೆ. ಮುಂಬೈ ಪೊಲೀಸ್ ಆಯುಕ್ತ ಹಾಗೂ ಡಿಸಿಪಿಯನ್ನು ಅಮಾನತು ಮಾಡಬೇಕು ಎಂದು ಅವರು ಹೇಳಿದ್ದಾರೆ.

ಸಿಬಿಐ ಸಿದ್ಧಾಥ್‌ ಹಾಗೂ ನೀರಜ್‌ನನ್ನು ಈಗಾಗಲೇ ಎರಡು ಬಾರಿ ವಿಚಾರಣೆ ನಡೆಸಿದೆ. ಸುಶಾಂತ್‌ನ ಸಿಎ ಸಂದೀಪ್ ಶ್ರೀಧರ್ ಹಾಗೂ ಮಾಜಿ ಎಕೌಂಟೆಂಟ್‌ ರಜತ್ ಮೆವಾಟಿಯನ್ನೂ ಸಿಬಿಐ ಪ್ರಶ್ನಿಸಿದೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯವೂ ಈ ವಿಚಾರವಾಗಿ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ಘಟನೆಯಲ್ಲಿ ಡ್ರಗ್ಸ್ ವಿಚಾರವಾಗಿ ಸಾಕ್ಷಿ ಪತ್ತೆ ಮಾಡಿದೆ.