Asianet Suvarna News Asianet Suvarna News

ವಿದ್ಯಾ ಬಾಲನ್ ಸಿನಿಮಾಗಳ ವಿರುದ್ಧ ಸೈಫ್ ತಾಯಿ ಅಸಮಾಧಾನ; ನಂಬಿಕೆ ಇಲ್ಲದ ನಿರ್ದೇಶಕರು ಎಂದ ಶರ್ಮಿಳಾ

ಹಿರಿಯ ನಟಿ ಶರ್ಮಿಳಾ ಟ್ಯಾಗೋರ್, ವಿದ್ಯಾ ಬಾಲನ್ ನಟನೆಯ ಡರ್ಟಿ ಪಿಕ್ಚರ್ ಮತ್ತು ಕಹಾನಿ ಸಿನಿಮಾದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

Sharmila Tagore points out issues with vidya balan's The Dirty Picture and Kahaani sgk
Author
First Published Mar 3, 2023, 1:11 PM IST

ಬಾಲಿವುಡ್ ಹಿರಿಯ ನಟಿ, ಖ್ಯಾತ ನಟ ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಟ್ಯಾಗೋರ್ ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. 2010ರಲ್ಲಿ ಕೊನೆಯ ಬಾರಿಗೆ ತೆರೆಮೇಲೆ ಕಾಣಿಸಿಕೊಂಡಿದ್ದ ಶರ್ಮಿಳಾ ಇದೀಗ ಗುಲ್‌ಮೊಹರ್‌ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ವರ್ಷಗಳ ಬಳಿಕ ಸಿನಿಮಾ ಮಾಡುತ್ತಿರುವ ನಟಿ ಶರ್ಮಿಳಾ ಸದ್ಯ ಪ್ರಮೋಷನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಶರ್ಮಿಳಾ ಅನೇಕ ವಿಚಾರಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕೆಲವು ಸಿನಿಮಾಗಳ ಬಗ್ಗೆಯೂ ಶರ್ಮಿಳಾ ಮುಕ್ತವಾಗಿ ಮಾತನಾಡಿದರು. ವಿದ್ಯಾ ಬಾಲನ್ ನಟನೆಯ ಡರ್ಟಿ ಪಿಕ್ಟರ್ ಮತ್ತು ಕಹಾನಿ ಸಿನಿಮಾಗಳ ಬಗ್ಗೆ ಶರ್ಮಿಳಾ ಅಸಮಾಧಾನ ಹೊರಹಾಕಿದ್ದಾರೆ. 

ವಿದ್ಯಾ ಬಾಲನ್ ನಟನೆಯ ಡರ್ಟಿ ಪಿಕ್ಚರ್ ಸೌತ್ ನಟ್ ಸಿಲ್ಕ್ ಸ್ಮಿತಾ ಅವರ ಜೀವನದ ಬಗ್ಗೆ ಇದ್ದ ಸಿನಿಮಾವಾಗಿತ್ತು. ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾ ಆಗಿ ನಟಿಸಿದ್ದರು. ಉಳಿದಂತೆ ನಸೀರುದ್ದೀನ್ ಶಾ, ತುಷಾರ್ ಕಪೂರ್, ಇಮ್ರಾನ್ ಹಶ್ಮಿ ನಟಿಸಿದ್ದರು. ಮಿಲನ್ ಲುಥ್ರಿಯಾ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾದ ಅತ್ಯುತ್ತಮ ನಟನೆಗೆ ವಿದ್ಯಾ ಬಾಲನ್ ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇನ್ನು ಕಹಾನಿ ಸಿನಿಮಾದಲ್ಲೂ ವಿದ್ಯಾ ಬಾಲನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸುಜೋಯ್ ಘೋಷ್ ನಿರ್ದೇಶನದಲ್ಲಿ ಬಂದ ಕಹಾನಿ, ಕಾಣೆಯಾಗಿದ್ದ ಗಂಡನ ಹುಡುಕುವ ಮಹಿಳೆಯ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಿದ್ದರು. 

ಈ ಎರಡು ಸಿನಿಮಾಗಳಲ್ಲಿ ನಿರ್ದೇಶಕ ಮಹಿಳಯ ಪಾತ್ರವನ್ನು ಸರಿಯಾಗಿ ತೋರಿಸುವಲ್ಲಿ ವಿಫಲವಾಗಿದ್ದಾನೆ ಎಂದು ಹೇಳಿದರು. ಡರ್ಟಿ ಪಿಕ್ಚರ್ ನಲ್ಲಿ ನಿರ್ದೇಶಕ ಸಿನಿಮಾ ಮಾಡಿದ ನಂತರ ನಂಬಿಕೆಯನ್ನು ಕಳೆದುಕೊಳ್ಳುತ್ತಾನೆ. ವಿದ್ಯಾ ಬಾಲನ್ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಕೆಯದ್ದೇ ತಪ್ಪು ಎನ್ನುವ ಹಾಗೆ ಬಿಂಬಿಸಲಾಗಿದೆ' ಎಂದು ಹೇಳಿದರು. ಇನ್ನೂ ಕಹಾನಿ ಸಿನಿಮಾದಲ್ಲೂ ಹಾಗೆ ಎಂದು ಹೇಳಿದರು. ಮಹಿಳೆಯಾ ಹಾಗೆಲ್ಲ ಯಾರನ್ನಾದರೂ ಸಾಯಿಸಲ್ಲ. ತನ್ನ ಗಂಡನ ಹುಡುಕಲು ಗರ್ಭಿಣಿ ಆಗಿರುವುದು, ದುರ್ಗಾ ದೇವಿಯ ವಿಗ್ರಹವನ್ನು ಮುಳುಗಿರುವುದು, ಸಿನಿಮಾ ಅಲ್ಲಿಗೆ ಮುಗಿಸಬಹುದಿತ್ತು. ಆದರೆ ಅಷ್ಟೊತ್ತಿಗೆ ಅಮಿತಾಬ್ ಬಚ್ಚನ್ ಅವರ ಧ್ವನಿ ಸೇರಿಸಲಾಗಿದೆ.  ಒಳ್ಳೆಯದು ಮತ್ತು ಕೆಟ್ಟದ್ದನ್ನು ಸಮಮಾಗಿ ತೋರಿಸುವ ಪ್ರಯತ್ನ. ಹಾಗಾಗಿ ನಿರ್ದೇಶಕರಿಗೆ ಪ್ರೇಕ್ಷಕರಲ್ಲಿ ನಂಬಿಕೆ ಇಲ್ಲ' ಎಂದು ಹೇಳಿದ್ದಾರೆ. 

ಮನೆ ಬಾಡಿಗೆ ಕಟ್ಟಲು ಸಿನಿಮಾ ಮಾಡುತ್ತಿದ್ದೆ; ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಟ್ಯಾಗೋರ್

ಶರ್ಮಿಳಾ ಟ್ಯಾಗೋರ್ ಬಗ್ಗೆ

ಶರ್ಮಿಳಾ ಟ್ಯಾಗೋರ್ ಚಿಕ್ಕ ವಯಸ್ಸಿನಲ್ಲೇ ಸಿನಿಮಾಗೆ ಎಂಟ್ರಿ ಕೊಟ್ಟರು. ಬಳಿಕ 1968 ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಮದುವೆಯಾದ ನಂತರವೂ ಕೆಲಸ ಮುಂದುವರೆಸಿದ್ದರು. ಶರ್ಮಿಲಾ ಟ್ಯಾಗೋರ್ ಮತ್ತು ಮನ್ಸೂರ್ ಅಲಿ ಖಾನ್ ದಂಪತಿ ಅವರಿಗೆ 3 ಮಕ್ಕಳು. ಸೈಫ್ ಅಲಿ ಖಾನ್, ಸಬಾ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್ ಮೂವರು ಮಕ್ಕಳು. ಸೈಫ್ ಅಲಿ ಖಾನ್ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಗುಲ್ಮೊಹರ್ ಮೂಲಕ ಮತ್ತೆ ಶರ್ಮಿಳಾ ಅಭಿಮಾನಿಗ ಮುಂದೆ ಬರ್ತಿದ್ದಾರೆ. 

ಒಂದು ವೇಳೆ ತಾಯಿನ ಕಳೆದು ಕೊಂಡರೂ ಪರ್ಫ್ಯೂಮ್‌ನಿಂದ ಅವಳನ್ನು ನೆನಪಿಸಿಕೊಳ್ತೀನಿ: ನಟಿ ಸೋಹಾ ಅಲಿ ಖಾನ್

ಗುಲ್ಮೊಹರ್ ಸಿನಿಮಾದಲ್ಲಿ ಮನೋಜ್ ಬಾಜಪಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಹುಲ್ ವಿ ಚಿತ್ತೆಲ್ಲಾ ನಿರ್ದೇಶನದಲ್ಲಿರುವ ಬಂದಿರುವ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಸದ್ಯ ಪ್ರಚಾರದಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ. ಅಂದಹಾಗೆ ಈ ಸಿನಿಮಾ ಮಾರ್ಚ್ 3ರಂದು  ರಿಲೀಸ್ ಆಗುತ್ತಿದೆ. 

Follow Us:
Download App:
  • android
  • ios