ಶರ್ಮಿಳಾ ಠಾಗೋರ್ ಆರೋಗ್ಯ ಸ್ಥಿತಿಯ ಬಗ್ಗೆ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಪುತ್ರ, ನಟ ಸೈಫ್ ಅಲಿ ಖಾನ್‌ನ ಒಟಿಟಿ ಪ್ರಾಜೆಕ್ಟ್‌ನಿಂದ ತಾನು ಬೇಸರಿಸಿಕೊಂಡಿದ್ದೆ, ಸ್ವಲ್ಪ ಅಪ್ಸೆಟ್ ಆಗಿದ್ದೆ ಎಂದಿದ್ದಾರೆ ಶರ್ಮಿಳಾ.

ಇತ್ತೀಚೆಗಿನ ಇಂಟರ್‌ವ್ಯೂನಲ್ಲಿ ತಾನು ಆರಾಮವಾಗಿದ್ದೇನೆ, ಚಿಂತೆ ಮಾಡುವ ಯಾವುದೇ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಆಕೆ. 76 ವರ್ಷ ವಯಸ್ಸಾಗಿದ್ದರೂ ತಾನು ಪುಸ್ತಕ ಓದುತ್ತಾ, ಮಕ್ಕಳು ಮೊಮ್ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದೇನೆ ಎಂದಿದ್ದಾರೆ.

ಮೊಬೈಲ್ ಆಫ್ ಮಾಡಿದ್ದಾರೆ ಆಮೀರ್‌...ಕಾರಣ ಏನಂತೆ!?

ಶರ್ಮಿಳಾ ಅವರು ಬಾಲಿವುಡ್‌ನ ಖ್ಯಾತ ನಟಿಯಾಗಿದ್ದು, ಭಾರತದಲ್ಲಿ ಬಿಕಿನಿ ಧರಿಸಿದ ಮೊದಲ ನಟಿ. ಶರ್ಮಿಳಾ ಅವರು ಮಗ ಸೈಫ್ ಮತ್ತು ಕರೀನಾ ಅವರ ಎರಡನೇ ಮಗು, ತಮ್ಮ ಮೊಮ್ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮನ್ಸೂರ್ ಅಲಿ ಖಾನ್ ಪಟೌಡಿಯನ್ನು ಮದುವೆಯಾದ ಶರ್ಮಿಳಾಗೆ ಸೈಫ್ ಸೇರಿ ಮೂರು ಜನ ಮಕ್ಕಳು. ಸದ್ಯ ಶರ್ಮಿಳಾ ಫ್ಯಾಮಿಲಿ ಜೊತೆಗೆ ವಿಶ್ರಾಂತ ಸಮಯ ಕಳೆಯುತ್ತಿದ್ದಾರೆ.