ಯಾರನ್ನಾದರೂ ಡೇಟ್ ಮಾಡಿ; ಅಭಿಮಾನಿಯ ಪ್ರಶ್ನೆಗೆ ಸಮಂತಾ ರಿಯಾಕ್ಷನ್ ವೈರಲ್

ಯಾರನ್ನಾದರೂ ಡೇಟ್ ಮಾಡಿ ಎಂದು ಅಭಿಮಾನಿ ಸಮಂತಾ ಅವರಿಗೆ ಹೇಳಿದ್ದಾರೆ. ಸ್ಯಾಮ್ ಕೊಟ್ಟ ಉತ್ತರ ವೈರಲ್ ಆಗಿದೆ. 

Samantha Ruth Prabhu reacts to fan who asked her to date someone sgk

ಸೌತ್ ಸ್ಟಾರ್ ಸಮಂತಾ ಸಿನಿರಸಿಕರ ಹಾಟ್ ಫೇವರಿಟ್ ನಟಿಯರಲ್ಲಿ ಒಬ್ಬರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಸಮಂತಾ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾಗಿ, ವಿಚ್ಛೇದನ ಪಡೆದು ಸದ್ಯ ಸಿಂಗಲ್ ಲೈಫ್ ಲೀಡ್ ಮಾಡುತ್ತಿರುವ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಸದ್ಯ ಸ್ಯಾಮ್ ಶಾಕುಂತಲಂ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಗಮನ ಸೆಳೆದಿರುವ ಶಾಕುಂತಲಂ ಸಿನಿಮಾ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಸಮಂತಾ ಸದ್ಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ. ಸಮಂತಾ ಅರ ಕ್ಯೂಟ್ ವಿಡಿಯೋವನ್ನು ಶೇರ್ ಮಾಡಿ ಅಭಿಮಾನಿಯೊಬ್ಬರು ದಯವಿಟ್ಟು ಯಾರನ್ನಾದರೂ ಡೇಟ್ ಮಾಡಿ ಎಂದು ಹೇಳಿದ್ದಾರೆ. ಅಭಿಮಾನಿಗೆ ಸಮಂತಾ ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿ ಶ್ರಾವಂತಿ ಎನ್ನುವ ಟ್ವಿಟ್ಟರ್ ಖಾತೆಯಿಂದ, 'ನನಗೆ ಗೊತ್ತು ನಾನು ಹೇಳಲು ಇದು ಸರಿಯಾದ ಸ್ಥಳವಲ್ಲ ಎನ್ನುವುದು. ಯಾರನ್ನಾದರೂ ಡೇಟ್ ಮಾಡಿ ಸಮಂತಾ' ಎಂದು ಹೇಳಿದ್ದಾರೆ. 

ಸಮಂತಾ ಈಸ್ ಬ್ಯಾಕ್; ಗ್ಯಾಪ್‌ನ ಬಳಿಕ ಮಸ್ತ್ ಫೋಟೋ ಹೊಂಚಿಕೊಂಡ ಸ್ಯಾಮ್ ನೋಡಿ ಫ್ಯಾನ್ಸ್ ಖುಷ್

ಇದಕ್ಕೆ ಸಮಂತಾ ಉತ್ತರ ನೀಡಿದ್ದಾರೆ. 'ನಿಮ್ಮಂತೆ ನನ್ನನ್ನು ಯಾರು ಪ್ರೀತಿಸುತ್ತಾರೆ' ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಸಮಂತಾ ಅವರ ಈ ಕ್ಯೂಟ್ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ. ಸಮಂತಾ ವಿಚ್ಛೇದನ ಪಡೆದ ಬಳಿಕ ಸಿಂಗಲ್ ಆಗಿ ಜೀವನ ನಡೆಸುತ್ತಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಸಮಂತಾ ಮತ್ತು ನಾಗ ಚೈತನ್ಯಾ ಇಬ್ಬರೂ 2021ರಲ್ಲಿ ವಿಚ್ಛೇದನ ಘೋಷಿಸಿದರು. ಇಬ್ಬರೂ ದೂರ ದೂರ ಆಗುತ್ತಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಬಳಿಕ ಸಮಂತಾ ಮಯೋಸೈಟೀಸ್ ಎನ್ನುವ ರೋಗದಿಂದ ಬಳಲುತ್ತಿದ್ದರು. ಅನೇಕ ತಿಂಗಳು ವಿಶ್ರಾಂತಿ ಪಡೆದುಕೊಂಡರು. ಇದೀಗ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ತೆಲುಗು ಜೊತೆಗೆ ಹಿಂದಿಯಲ್ಲೂ ನಟಿಸುತ್ತಿದ್ದಾರೆ.

'ಶಾಕುಂತಲಂ' ಸಿನಿಮಾ ರಿಜೆಕ್ಟ್ ಮಾಡಿದ್ದೆ, ಬಳಿಕ ಒಪ್ಪಿಕೊಂಡೆ; ಶಾಕುಂತಲೆಯಾದ ಕಾರಣ ಬಿಚಿಟ್ಟ ನಟಿ ಸಮಂತಾ

ಶಾಕುಂತಲಂ ಬಗ್ಗೆ

ಶಾಕುಂತಲಂನಲ್ಲಿ ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರ ಪುತ್ರಿ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾ ವೀಕ್ಷಿಸಿದ್ದ ಸಮಂತಾ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹೊರಹಾಕಿದ್ದರು. 

Latest Videos
Follow Us:
Download App:
  • android
  • ios