Asianet Suvarna News Asianet Suvarna News

ಚಿತ್ರೀಕರಣ ವೇಳೆ ಅನೇಕ ಬಾರಿ ಕಪಾಳಕ್ಕೆ ಹೊಡೆಸಿಕೊಂಡಿದ್ದೆ; ಶಕ್ತಿ ಕಪೂರ್ ಬೇಸರ

80ರ ದಶಕದ ಸಿನಿಮಾ ಮತ್ತು ಶೂಟಿಂಗ್ ಅನುಭವ ತೆರೆದಿಟ್ಟ ನಟ ಶಕ್ತಿ ಕಪೂರ್ ಒಂದು ದೃಶ್ಯಕ್ಕಾಗಿ ನಿರಂತರ ಕಪಾಳಕ್ಕೆ ಹೊಡೆತ ತಿಂದಿರುವ ಬಗ್ಗೆ ಶಕ್ತಿ ಕಪೂರ್ ರಿವೀಲ್ ಮಾಡಿದ್ದಾರೆ.

Shakti Kapoor recalls he wanted to quit acting after being slapped thrice during shooting sgk
Author
First Published Dec 6, 2022, 4:02 PM IST

ಬಾಲಿವುಡ್ ಹಿರಿಯ ನಟ, ಶ್ರದ್ಧಾ ಕಪೂರ್ ತಂದೆ ಶಕ್ತಿ ಕಪೂರ್ ಆ ಕಾಲದ (80ರ ದಶಕ) ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ. 80ರ ದಶಕದ ಸಿನಿಮಾ ಮತ್ತು ಶೂಟಿಂಗ್ ಅನುಭವ ತೆರೆದಿಟ್ಟ ನಟ ಶಕ್ತಿ ಕಪೂರ್ ಒಂದು ದೃಶ್ಯಕ್ಕಾಗಿ ನಿರಂತರ ಕಪಾಳಕ್ಕೆ ಹೊಡೆತ ತಿಂದಿರುವ ಬಗ್ಗೆ ಶಕ್ತಿ ಕಪೂರ್ ರಿವೀಲ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಕಾಮಿಡಿ ಶೋ ದಿ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ದ ಶಕ್ತಿ ಕಪೂರ್ 80ರ ದಶಕದಲ್ಲಿ ಸಿನಿಮಾ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಕಪಾಳಕ್ಕೆ ಹೊಡೆತ ತಿಂದ ಬಳಿಕ ಸಿನಿಮಾಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದೆ ಎಂದು ಬಹಿರಂಗ ಪಡಿಸಿದರು. 

'1983 ರಲ್ಲಿ ಮಾವಾಲಿ ಎಂಬ ಚಲನಚಿತ್ರವನ್ನು ಮಾಡಿದೆ. ನಾನು ಆ ಚಿತ್ರದಲ್ಲಿ ನನ್ನ ಮೊದಲ ಶಾಟ್ ನೀಡುವಾಗ, ಖಾದರ್ ಖಾನ್ ನನಗೆ ಬಲವಾಗಿ ಕಪಾಳಮೋಕ್ಷ ಮಾಡಿದರು. ನಾನು ಕಳಗೆ ಬಿದ್ದೆ, ನಂತರ ಎರಡನೇ ಶಾಟ್‌ನಲ್ಲಿ ಅರುಣಾ ಇರಾನಿ ನನಗೆ ಕಪಾಳಮೋಕ್ಷ ಮಾಡಿದರು ಮತ್ತೆ ನಾನು ನೆಲದ ಮೇಲೆ ಬಿದ್ದೆ. ಮೂರನೇ ಬಾರಿಗೂ ಅದೇ ಸಂಭವಿಸಿತು' ಎಂದು ಶಕ್ತಿ ಹೇಳಿದರು. 

ಈ ಘಟನೆ ಬಳಿಕ ನನ್ನ ಕರಿಯರ್ ಮುಗಿದೇ ಹೋಯಿತು ಅಂತ ಬೇಸರ ಆಗಿತ್ತು ಎಂದು ಹೇಳಿದ್ದಾರೆ. 'ಕೆ ಬಾಪಯ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದರು ಮತ್ತು ಖಾದರ್ ಖಾನ್ ಸಹ ಚಿತ್ರದ ಭಾಗವಾಗಿದ್ದರು. ನಾನು ಖಾದರ್ ಖಾನ್ ಬಳಿಗೆ ಹೋಗಿ, ‘ನಾನು ನಿಮ್ಮ ಕಾಲಿಗೆ ಬೀಳುತ್ತೇನೆ. ದಯವಿಟ್ಟು ನನ್ನನ್ನು ಸಂಜೆ ಟಿಕೆಟ್ ಬುಕ್ ಮಾಡಿ ಕಳುಹಿಸಿ. ನನಗೆ ಈ ಚಿತ್ರದ ಭಾಗವಾಗಲು ಇಷ್ಟವಿಲ್ಲ, ನನ್ನ ವೃತ್ತಿಜೀವನ ಮುಗಿದಿದೆ ಮತ್ತು ನನಗೆ ಇನ್ನೂ ಮದುವೆಯಾಗಿಲ್ಲ' ಎಂದು ಕೇಳಿಕೊಂಡಿದ್ದೆ. ಬಳಿಕ ವೀರು ದೇವಗನ್ ಅವರ ಸಲಹೆಯ ಮೇರೆಗೆ ನಾನು ಉದ್ಯಮದಲ್ಲಿ ಉಳಿಯಲು ನಿರ್ಧರಿಸಿದೆ ಎಂದು ಶಕ್ತಿ ಹೇಳಿದರು.

ಪ್ರೇಮ್ ಚೋಪ್ರಾ ರಿಂದ ಶಕ್ತಿ ಕಪೂರ್‌ವರೆಗೆ ಈ ನಟರು ನಟಿಸಿದ ಒಟ್ಟು ಅತ್ಯಾಚಾರದ ಸೀನ್‌ಗಳೆಷ್ಟು ಗೊತ್ತಾ?

ಸಿನಿಮಾದಲ್ಲಿ ಅವಕಾಶ ಪಡೆದ ಬಗ್ಗೆಯೂ ಶಕ್ತಿ ಕಪೂರ್ ಬಹಿರಂಗ ಪಡಿಸಿದರು. 'ನಾನು ನನ್ನ ಮೊದಲ ಕಾಮಿಡಿ ಚಿತ್ರ ಸತ್ತೆ ಪೇ ಸತ್ತಾ ಗೂಫಿ ಪೈಂಟಲ್‌ ಜೊತೆ ಮಾಡಿದೆ. ಇದು ನಿಜವಾಗಿಯೂ ಉತ್ತಮ ಚಿತ್ರವಾಗಿತ್ತು. ಹಾಗಾಗಿ ರಾಜ್ ಸಿಪ್ಪಿ ಹಾಸ್ಯ ಪಾತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ ನಾನು ನನ್ನನ್ನು  ಖಳನಟನ ಪಾತ್ರಗಳಿಗೆ ಹೆಚ್ಚು ಪ್ರಶಂಸೆ ಪಡೆಯುತ್ತಿದ್ದೇನೆ ನನ್ನನ್ನು ಕಾಮಿಡಿಯನ್ ಆಗಿ ಯಾಕೆ ಇಷ್ಟಪಡುತ್ತಾರೆ? ಅಂತ ಪ್ರಶ್ನೆ ಮಾಡಿದ್ದೆ ಎಂದು ಶಕ್ತಿ ಕಪೂರ್ ಪ್ರಾರಂಭದ ದಿನಗಳ ಬಗ್ಗೆ ಮಾತನಾಡಿದರು. 

ಮಕ್ಕಳ ಡ್ರಗ್ಸ್‌ ಪ್ರಕರಣದಿಂದ ಹಿಡಿದು ಸ್ಟ್ರಿಂಗ್‌ ಅಪ್‌ರೇಷನ್‌ ವರೆಗೆ Shakti Kapoor ಹಗರಣಗಳು

80 ಮತ್ತು 90 ರ ದಶಕದ ಆರಂಭದಲ್ಲಿ ಶಕ್ತಿ ಕಪೂರ್  ಕಾಮಿಡಿ ಮತ್ತು ಖಳನಾಯಕನ ಪಾತ್ರಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಬೇಡಿಕೆಯ ನಟನಾಗಿದ್ದರು ಶಕ್ತಿ ಕಪೂರ್. ಈಗಲೂ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಶಕ್ತಿ ಕಪೂರ್ ಇತ್ತೀಚೆಗೆ ಮಲಯಾಳಂನ ಲೂಸಿಫರ್‌ನಲ್ಲಿ ಕಾಣಿಸಿಕೊಂಡರು. ಇನ್ನೂ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ವೆಬ್ ಸೀರಿಸ್ ಗಿಲ್ಟಿ ಮೈಂಡ್ಸ್‌ನಲ್ಲಿಯೂ ಕಾಣಿಸಿಕೊಂಡರು. ಸದ್ಯ ಯಾವುದೇ ಸಿನಿಮಾಗಳು ಶಕ್ತಿ ಕಪೂರ್ ಕೈಯಲ್ಲಿ ಇಲ್ಲ. ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

Follow Us:
Download App:
  • android
  • ios