ಕೀರ್ತಿ ಸುರೇಶ್‌ಗೆ ಸಾಥ್ ನೀಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಮತ್ತು ನಾನಿ ನಟನೆಯ ಸಿನಿಮಾಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್ ನೀಡಿದ್ದಾರೆ.

ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗಿವೆ. ಒಂದು ಭಾಷೆಯ ಸಿನಿಮಾ ಅನೇಕ ರಾಜ್ಯಗಳಲ್ಲಿ ಆಯಾಯ ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿವೆ. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳು ಹೆಚ್ಚಾಗಿ ಬರುತ್ತಿವೆ. ಇದೀಗ ಟಾಲಿವುಡ್‌ನಲ್ಲಿ ಮತ್ತೊಂದು ನಿರೀಕ್ಷೆಯ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದು ಮತ್ಯಾವುದು ಅಲ್ಲ ನಾನಿ ಮತ್ತು ಕೀರ್ತಿ ಸುರೇಶ್ ನಟನೆಯ ದಸರ. ಹೌದು ದಸರಾ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಿನಿಮಾ ರಿಲೀಸ್‌ಗೂ ಮೊದಲು ದಸರಾ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದೆ. ತೆಲುಗು ಜೊತೆಗೆ ದಸರಾ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು ಸ್ಟಾರ್ ನಟರು ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.
ದಸರಾ ಕನ್ನಡ ವರ್ಷನ್ ಟೀಸರ್ ಅನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಲೀಸ್ ಮಾಡುತ್ತಿದ್ದಾರೆ. ಈ ಬಗ್ಗೆ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಈಗಾಗಲೇ ದಸರಾ ಲುಕ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದೆ. ದಸರಾ ಕನ್ನಡ ಟೀಸರ್ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ರೆ, ಬೇರೆ ಬೇರೆ ಭಾಷೆಯ ಟೀಸರ್ ಅನ್ನು ಆಯಾಯ ಭಾಷೆಯ ಸ್ಟಾರ್ ಬಿಡುಗಡೆ ಮಾಡುತ್ತಿದ್ದಾರೆ. ಬಾಲಿವುಡ್ ನಟ ಶಾಹಿದ್ ಕಪೂರ್, ಧನುಷ್, ದುಲ್ಕರ್ ಸಲ್ಮಾನ್ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.
ದಳಪತಿ ವಿಜಯ್ ಜೊತೆ ಭಾರಿ ಸುದ್ದಿಯಾಗಿದ್ದ ನಟಿ ಕೀರ್ತಿ ಸುರೇಶ್ ಮದುವೆ?
ನಾನಿ ಹಾಗೂ ಕೀರ್ತಿ ಸುರೇಶ್ ನಟನೆಯ ದಸರಾ ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 30ರಂದು ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಕ್ರೇಜ್ ಸೃಷ್ಟಿಸಿರುವ ಚಿತ್ರತಂಡ ಟೀಸರ್ ಝಲಕ್ ಈಗ ಟೀಸರ್ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಬರ್ತಿದೆ.
ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ರಾ 'ಮಹಾನಟಿ'? #JusticeForSangeetha ಟ್ರೆಂಡ್
ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಅನೇಕ ಕಲಾವಿದರರು ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಚಿತ್ರಕ್ಕಿದೆ. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ ದಸರಾ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳ ಹೆಚ್ಚಾಗಿದೆ. ನಟಿ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ದಸರಾ ಮೂಲಕ ಗೆಲುವಿನ ನಗು ಬೀರ್ತಾರಾ ಎಂದು ಕಾದುನೋಡಬೇಕು.