ದಳಪತಿ ವಿಜಯ್​ ಜೊತೆ ಭಾರಿ ಸುದ್ದಿಯಾಗಿದ್ದ ನಟಿ ಕೀರ್ತಿ ಸುರೇಶ್​ ಮದುವೆ?

ದಳಪತಿ ವಿಜಯ್​ ಜೊತೆ ಹೆಸರು ಥಳಕು ಹಾಕಿಕೊಂಡಿರೋ ನಟಿ ಕೀರ್ತಿ ಸುರೇಶ್​ ಅವರ ಮದುವೆಯ ಬಗ್ಗೆ ಈಗ ಸುದ್ದಿಯಾಗುತ್ತಿದೆ. ಏನದು?
 

Is Keerthy Suresh marrying a school friend clarification from the actress mother Menaka

ತಮಿಳಿನ ಸೂಪರ್​ಸ್ಟಾರ್​ ದಳಪತಿ ವಿಜಯ್‌ (Dalapthy Vijay) ಅವರ ವಿಚ್ಛೇದನ ಪ್ರಕರಣ ಇತ್ತೀಚೆಗೆ ಭಾರಿ ಸುದ್ದಿ ಮಾಡಿತ್ತು. ಅವರು ಪತ್ನಿ ಸಂಗೀತಾ ಅವರಿಂದ ದೂರ ಆಗಲಿದ್ದಾರೆ ಎಂದು ಕೇಳಿಬಂದಿತ್ತು. ಈ ವಿಚ್ಛೇದನಕ್ಕೆ ಕಾರಣರಾದವರು  ರಶ್ಮಿಕಾ ಮಂದಣ್ಣ (Rashmika Mandanna) ಎಂಬ ಸುದ್ದಿ ಹರಡಿದ್ದ ಬೆನ್ನಲ್ಲೇ, ಇದಕ್ಕೆ ರಶ್ಮಿಕಾ ಅಲ್ಲ, ಬದಲಿಗೆ  ನಟಿ ಕೀರ್ತಿ ಸುರೇಶ್‌ (Keerthi Suresh) ಕಾರಣ ಎಂದು ಗುಲ್ಲೆದ್ದಿತ್ತು. ವಿಜಯ್‌ ಹಾಗೂ ಪತ್ನಿ ಸಂಗೀತಾ ನಡುವೆ ಬಿರುಕು ಮೂಡಲು ಒಬ್ಬ ಸ್ಟಾರ್​ ನಟಿಯೇ ಕಾರಣ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಕೀರ್ತಿ ಸುರೇಶ್​ ಹೆಸರು ಭಾರಿ ಓಡಾಡತೊಡಗಿತ್ತು. ಈ ಸುದ್ದಿ ಇನ್ನೂ ಹರಿದಾಡುತ್ತಲೇ ಇದೆ. ಆದರೆ ಈ ಸುದ್ದಿಗೆ ಸ್ಪಷ್ಟನೆ ಕೊಡುವ ಗೋಜಿಗೆ ಈ ನಟರು ಹೋಗಿಲ್ಲ. ಕೀರ್ತು ಸುರೇಶ್ ತಾಯಿ ಈ ಗಾಳಿ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. 

ಆದರೆ ಇವೆಲ್ಲಾ ಸುಳ್ಳು ಎಂದು ಕೂಡ ಹೇಳಲಾಗುತ್ತಿದೆ. ಇಬ್ಬರೂ ಒಟ್ಟಿಗೆ 'ಭೈರವ' ಹಾಗೂ 'ಸರ್ಕಾರ್' ಸಿನಿಮಾಗಳಲ್ಲಿ ನಟಿಸಿದ್ದರು. ಹೀಗಾಗಿ  ಇದನ್ನೇ ಮುಂದಿಟ್ಟುಕೊಂಡು ಇಬ್ಬರೂ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಜಸ್ಟೀಸ್​ ಫಾರ್​ ಸಂಗೀತಾ ಎನ್ನುವ ಅಭಿಯಾನ ಕೂಡ ಶುರುವಾಗಿದೆ. ಅದೇನೇ ಇದ್ದರೂ,  ಇದರ ನಡುವೆಯೇ ಇದೀಗ ಇನ್ನೊಂದು ಸುದ್ದಿ ಹೊರಬಿದ್ದಿದೆ. ಅದುವೇ ಕೀರ್ತಿ ಸುರೇಶ್​ ಮದ್ವೆ ಸುದ್ದಿ!  ಹೌದು. ಕೀರ್ತಿ ಸುರೇಶ್​ ಈಗ ಮದ್ವೆಯಾಗಲಿದ್ದಾರಂತೆ. ನಾಗ್ ಅಶ್ವಿನ್ (Nag Ashwin) ನಿರ್ದೇಶನದ 'ನಾಡಿಗೈಯರ್ ತಿಲಗಂ' ಬಯೋಪಿಕ್​ನಲ್ಲಿ (Biopic) ಸಾವಿತ್ರಿ ಪಾತ್ರ ಮಾಡಿ ರಾಷ್ಟ್ರಪ್ರಶಸ್ತಿ ಗೆದ್ದು ಜನಪ್ರಿಯರಾಗಿರುವ ಕೀರ್ತಿ ಸುರೇಶ್​ ಮದುವೆಯ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹಾಗೆಂದು ಈಕೆ ಮದುವೆಯಾಗುತ್ತಿರುವುದು ದಳಪತಿ ವಿಜಯ್​ ಅವರನ್ನಂತೂ ಖಂಡಿತ ಅಲ್ಲವೇ ಅಲ್ಲ. ಆದರೆ ತಮ್ಮ ಬಾಲ್ಯದ ಗೆಳೆಯನೊಂದಿಗೆ ಎನ್ನೋ ಸುದ್ದಿ ಬಂದಿದೆ.  

Yash: ಕೆಜಿಎಫ್​-2 ಯಶಸ್ಸಿನ ಬೆನ್ನಲ್ಲೇ 'ರಾವಣ' ಆಗ್ತಿದ್ದಾರಾ ಯಶ್​? ಏನಿದು ಹೊಸ ಸುದ್ದಿ?

ಕೇರಳದಲ್ಲಿ ರೆಸಾರ್ಟ್ (resort) ಹೊಂದಿರುವ ಹೈಸ್ಕೂಲ್​  ಸ್ನೇಹಿತನನ್ನು 30 ವರ್ಷದ ಈ ಚೆಲುವೆ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ. ಕೀರ್ತಿ ರೆಸಾರ್ಟ್​ ಮಾಲೀಕನ ಜೊತೆ  10 ವರ್ಷಗಳಿಂದ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಮದುವೆಗೆ ಇಬ್ಬರ ಪಾಲಕರೂ ಗ್ರೀನ್​ ಸಿಗ್ನಲ್​ (green signal) ಕೊಡಬೇಕಿದ್ದು, ಶೀಘ್ರದಲ್ಲಿಯೇ ಇಬ್ಬರೂ   ಹಸೆಮಣೆ ಏರಲಿದ್ದಾರೆ ಎಂಬ ಗಾಸಿಪ್​ ಹರಡಿದೆ. ಆದರೆ ಈ ಬಗ್ಗೆ ಕೀರ್ತಿ ಸುರೇಶ್  ಅವರ ತಾಯಿ, ನಟಿ ಮೇನಕಾ (Menaka) ಮಾತ್ರ ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು,   'ಕೆಲವು ದಿನಗಳಿಂದ ಓಡಾಡುತ್ತಿರುವ ಸುದ್ದಿಯಲ್ಲಿ ಹುರುಳಿಲ್ಲ. ಇದು  ಕೇವಲ ಪ್ರಚಾರಕ್ಕಷ್ಟೇ. ನಾವು ಇಂತಹ ಯಾವುದೇ ಸುದ್ದಿಗಳನ್ನು ಇಚ್ಛೆ ಪಡುವುದಿಲ್ಲ. ಇವೆಲ್ಲಾ ಕೇವಲ ಗಾಳಿಸುದ್ದಿಗಳು ಅಷ್ಟೇ' ಎಂದಿದ್ದಾರೆ. ಒಟ್ಟಿನಲ್ಲಿ ಕೀರ್ತಿ ಸುರೇಶ್​ ಅವರ ಮದುವೆಯ ಬಗ್ಗೆ ಅಭಿಮಾನಿಗಳಲ್ಲಿ ಫುಲ್​ ಕನ್​ಫ್ಯೂಷನ್​ ಶುರುವಾಗಿದ್ದು, ಶೀಘ್ರದಲ್ಲಿಯೇ ನಟಿ ಒಳ್ಳೆಯ ಸುದ್ದಿ ಕೊಡಲಿ ಎಂದು ಕಾಯುತ್ತಿದ್ದಾರೆ. 

ಇನ್ನು ಕೀರ್ತಿ ಅವರ ಬಗ್ಗೆ ಹೇಳುವುದಾದರೆ ಈಕೆ  ಕೇರಳದಲ್ಲಿ ಜನಿಸಿದಾಕೆ. ಸದ್ಯ  ಕಾಲಿವುಡ್  ಮತ್ತು ಟಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಕೀರ್ತಿ ಸುರೇಶ್ ತಮಿಳಿನಲ್ಲಿ 'ಮಾಮನ್ನನ್', 'ಸೈರನ್', 'ರಘು ಥಾಥಾ', ಮತ್ತು 'ರಿವಾಲ್ವರ್ ರೀಟಾ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಬಿಡುಗಡೆಗೊಂಡ  ಮಹಾನಟಿ ಸಿನಿಮಾ ಕೀರ್ತಿಯವರ ಯಶಸ್ಸನ್ನು ಹೆಚ್ಚಿಸಿತು.  ಖ್ಯಾತ ನಟ ಮಹೇಶ್​ ಬಾಬು (Mahesh Babu) ಅಭಿನಯದ ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ನಟಿಸಿದ್ದರು. ಭೋಲಾ ಶಂಕರ್ ಚಿತ್ರದಲ್ಲಿ ಇವರು ಚಿರಂಜೀವಿ ಅವರ ತಂಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೆಹರ್ ರಮೇಶ್ ನಿರ್ದೇಶನದ ತಮಿಳಿನ ವೇದಲಂ ಚಿತ್ರದ ತೆಲುಗು ರಿಮೇಕ್ ಆಗಿ ಈ ಚಿತ್ರ ಬರುತ್ತಿದೆ. 

Rachel Ann Mullins: ಶಾರುಖ್ ಖಾನ್ ಅಂದ್ರೆ ಯಾರು ಎಂದು ಕೇಳಿದ್ದ 'ಪಠಾಣ್'​ ನಟಿ!

Latest Videos
Follow Us:
Download App:
  • android
  • ios