Asianet Suvarna News Asianet Suvarna News

Jawan Trailer- ಮುಂಬೈಯನ್ನು ಬೆಚ್ಚಿಬೀಳಿಸಿದ ಅತಿದೊಡ್ಡ ಹೈಜಾಕ್​: ಆಲಿಯಾ ಭಟ್​ಗಾಗಿ ವಿಲನ್​ ಬೇಡಿಕೆ!

ಶಾರುಖ್​ ಖಾನ್​ ಬಹು ನಿರೀಕ್ಷಿತ ಜವಾನ್​ ಟ್ರೇಲರ್​ ಬಿಡುಗಡೆಯಾಗಿದ್ದು, ಶಾರುಖ್​ ಅವರ ವಿಭಿನ್ನ ಮುಖಗಳ ಕುತೂಹಲವನ್ನು ಕೆರಳಿಸುತ್ತಿದೆ. 
 

Shah Rukh Khans much awaited Jaawan trailer has been released suc
Author
First Published Aug 31, 2023, 1:27 PM IST

ಶಾರುಖ್ ಖಾನ್ ಅವರ ಹೊಸ ಚಿತ್ರ ಜವಾನ್ (Jawan) ಪ್ರಪಂಚದಾದ್ಯಂತದ ಭಾರತೀಯ ಸಿನಿಪ್ರಿಯರಲ್ಲಿ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸುತ್ತಿದೆ. ಟ್ರೇಲರ್‌ಗಳು, ಹಾಡುಗಳು ಮತ್ತು ಪೋಸ್ಟರ್‌ಗಳು (poster) ಸರಿಯಾದ ರೀತಿಯ ಬಜ್ ಮತ್ತು ಆಸಕ್ತಿಯನ್ನು ಸೃಷ್ಟಿಸಿರುವ ಕಾರಣದಿಂದ ಜನರು ನಿಜವಾಗಿಯೂ ಅದನ್ನು ಎದುರು ನೋಡುತ್ತಿದ್ದಾರೆ. ಶಾರುಖ್ ಅವರ ಮೆಗಾ-ಸಕ್ಸಸ್ ಪಠಾಣ್‌ನ ನೆರಳಿನಲ್ಲೇ ಚಿತ್ರ ಬಂದಿರುವುದು ಕೂಡ ಒಂದು ಕಾರಣವಾಗಿದೆ. ಸೆಪ್ಟೆಂಬರ್ 7 ರಂದು  ಜವಾನ್ ತೆರೆಗೆ ಬರಲು ಸಿದ್ಧವಾಗಿದೆ.  ಎಸ್‌ಆರ್‌ಕೆ ಅವರ ಬಹು ನಿರೀಕ್ಷಿತ ಚಿತ್ರ ಜರ್ಮನಿಯಲ್ಲಿ ವಿಶ್ವದ ಅತಿದೊಡ್ಡ ಪರದೆಯಲ್ಲಿ ಬಿಡುಗಡೆಯಾಗಲಿದೆ. ಜರ್ಮನಿಯ ಲಿಯಾನ್‌ಬರ್ಗ್‌ನಲ್ಲಿ ದೈತ್ಯಾಕಾರದ ಶಾಶ್ವತ IMAX ಪರದೆಯ ಮೇಲೆ ಜವಾನ್ ಅನ್ನು ತೋರಿಸಲಾಗುವುದು. ಈ ಪರದೆಯು ಎಷ್ಟು ದೊಡ್ಡದಾಗಿದೆ ಎಂದರೆ ಅದು 125 ಅಡಿ ಅಗಲ ಮತ್ತು 72 ಅಡಿ ಎತ್ತರವಿದೆ. ಇದು ಸಾಮಾನ್ಯ ಪರದೆಗಿಂತ ದೊಡ್ಡದಾಗಿದೆ! ಇದೀಗ ಇತಿಹಾಸವನ್ನೂ ಸೃಷ್ಟಿಸಿದೆ. ಅದೇನೆಂದರೆ  ಇದುವರೆಗೆ ಯಾವುದೇ ಭಾರತೀಯ ಸಿನಿಮಾ ಇಷ್ಟು ದೊಡ್ಡ ಪರದೆಯ ಮೇಲೆ ಪ್ರದರ್ಶನಗೊಂಡಿಲ್ಲ. ಇದು ನಿಜವಾಗಿಯೂ ಅದ್ಭುತವಾಗಿದೆ. ಏಕೆಂದರೆ ಜನರು ಚಲನಚಿತ್ರದ ಎಲ್ಲಾ ರೋಮಾಂಚಕಾರಿ ಕ್ರಿಯೆಯನ್ನು ಮತ್ತು ವಿನೋದವನ್ನು ನಿಜವಾಗಿಯೂ ಅದ್ಭುತವಾದ ರೀತಿಯಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಇಷ್ಟೇ ಅಲ್ಲದೇ ಶಾರುಖ್ ಖಾನ್​ಗೂ ದುಬೈಗೂ ಒಳ್ಳೆಯ ನಂಟಿದೆ. ಅವರು ದುಬೈ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಗಳಲ್ಲಿ ಒಬ್ಬರು. ಅಲ್ಲಿ ಶಾರುಖ್​​ ಖಾನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೆ ಶಾರುಖ್ ಖಾನ್ ಅವರು ಆಗಾಗ ದುಬೈಗೆ ತೆರಳುತ್ತಾರೆ. ಅಲ್ಲಿಯೂ ಸಿನಿಮಾ ಪ್ರಚಾರ ಮಾಡುತ್ತಾರೆ. ಈಗ ದುಬೈನ ಬುರ್ಜ್ ಖಲೀಫಾದಲ್ಲಿ ಟ್ರೇಲರ್ ರಿಲೀಸ್ ಮಾಡಲಾಗುತ್ತಿದೆ. ಇವೆಲ್ಲವುಗಳ ಮಧ್ಯೆಯೇ ಇದೀಗ ಜವಾನ್​ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇತ್ತು. ಅದನ್ನು ಈ ಟ್ರೇಲರ್​ನಲ್ಲಿಯೂ ನೋಡಬಹುದು. ಈ ಟ್ರೇಲರ್​ ನೋಡಿದ್ರೆ ವಿಲನ್​, ಹೀರೋ ಎಲ್ಲವೂ ಶಾರುಖ್​ ಖಾನೇ ಎನಿಸುವಂತಿದೆ. ಈ ವಿಡಿಯೋದಲ್ಲಿ ಗನ್​ ಹಿಡಿದು ವಿಲನ್​ ರೂಪದಲ್ಲಿ ಶಾರುಖ್​ ಹೈಜಾಕ್​ ಮಾಡುವ ವಿಡಿಯೋ ಇದ್ದು, ಅದರಲ್ಲಿ ಪೊಲೀಸರು ಏನು ಬೇಕು ಎಂದು ಕೇಳಿದಾಗ ಆಲಿಯಾ ಭಟ್​ ಎನ್ನುತ್ತಾನೆ ವಿಲನ್​! ಇದಾಗಲೇ ಬಳಿಕ ಚೀರಾಟ, ಕೂಗಾಟ, ರಕ್ತಪಾತ ಎಲ್ಲವೂ ಚಿತ್ರದಲ್ಲಿದೆ. ತಮನ್ನಾ ಭಾಟಿಯಾ, ದೀಪಿಕಾ ಪಡುಕೋಣೆಯ ಜೊತೆ ರೊಮ್ಯಾನ್ಸಿಂಗ್​ ಸೀನ್​ ಕೂಡ ಇದ್ದು, ಒಂದು ಹಂತದಲ್ಲಿ ದೀಪಿಕಾ ಶಾರುಖ್​ ಖಾನ್​ರನ್ನು ಹೊಡೆದುರುಳಿಸುವ ದೃಶ್ಯವೂ ಇದೆ. ಒಟ್ಟಾರೆಯಾಗಿ ಈ ಟ್ರೇಲರ್​ ಸಕತ್​ ಕುತೂಹಲವನ್ನು ಕೆರಳಿಸಿದೆ. 

ಜರ್ಮನಿಯಲ್ಲಿ ಶಾರುಖ್ ಖಾನ್​ ದಾಖಲೆ​; ಇತಿಹಾಸ ಸೃಷ್ಟಿಸಲಿದೆ ಜವಾನ್!

ಇದಾಗಲೇ  ಈ ಸಿನಿಮಾದಲ್ಲಿ ಸುಮಾರು 6 ಹಾಡುಗಳಿವೆ ಎನ್ನುವುದು ತಿಳಿಸಿದೆ. ಜೊತೆಗೆ ಪರಾಠ ಎಂದ ಟೈಟಲ್ ಸಾಂಗ್ (Title Song) ಕೂಡ ಇದೆ ಎನ್ನಲಾಗಿದೆ. ಇದರಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರಂತೆ. ಒಂದು ನಯನತಾರಾ ಅವರ ಇಂಟ್ರೊಡಕ್ಷನ್ ಸಾಂಗ್ ಹಾಗೂ ಒಂದು ಶಾರುಖ್ ಅವರ ಗರ್ಲ್ ಗ್ಯಾಂಗ್ ಜೊತೆ ಜೈಲ್ ಸಾಂಗ್ ಇರಲಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಈ ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್​ ಸ್ಟಾರ್​ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಪ್ರಿವ್ಯೂ (Preview) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ಸದ್ದು ಮಾಡುತ್ತಿದೆ.

ಜವಾನ್ ಅನ್ನು ಎಸ್‌ಆರ್‌ಕೆ ಅವರ ಪ್ರೊಡಕ್ಷನ್ ಹೌಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ (Red Chillies Entertainment) ನಿರ್ಮಿಸಿದೆ ಮತ್ತು ಅಟ್ಲೀ ಎಂಬ ನಿರ್ದೇಶಕರು ನಿರ್ದೇಶಿಸಿದ್ದಾರೆ. ಗೌರಿ ಖಾನ್ ನಿರ್ಮಾಣ ಮಾಡುತ್ತಿದ್ದು, ಗೌರವ್ ವರ್ಮಾ ಕೂಡ ಸಹಾಯ ಮಾಡುತ್ತಿದ್ದಾರೆ.  ಸೆಪ್ಟೆಂಬರ್ 7 ರಂದು ಅನೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಪಂಚದಾದ್ಯಂತ ಜನರು ಇದನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಮತ್ತು ಇದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿರುತ್ತದೆ. ಚಲನಚಿತ್ರಗಳು ಮತ್ತು ಸಾಹಸಗಳನ್ನು ಇಷ್ಟಪಡುವ ಪ್ರತಿಯೊಬ್ಬರಿಗೂ ಇದು ಒಂದು ದೊಡ್ಡ ಔತಣವನ್ನು ನೀಡಲಿದೆ ಎನ್ನಲಾಗುತ್ತಿದೆ.

JAWAN: ಶಾರುಖ್‌ ಶರ್ಟ್‌ ಬೆಲೆ ಒಂದು ಲಕ್ಷ! ಅತಿ ಹೆಚ್ಚು ಬಜೆಟ್‌ನ ಈ ಚಿತ್ರಕ್ಕೆ ಇಷ್ಟೊಂದು ಖರ್ಚಾ?


Follow Us:
Download App:
  • android
  • ios