ಯಶ್ ಟಾಕ್ಸಿಕ್ ಚಿತ್ರದ ಬಗ್ಗೆ ಕಿಂಗ್‌ಖಾನ್ ಶಾರುಖ್ ಮಾತು
ನಟ ಶಾರುಖ್ ಖಾನ್, ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಬಿಡುಗಡೆಗೆ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಮುಂಬೈ: ನಟ ಶಾರುಖ್ ಖಾನ್ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದು, 'ನಿಮ್ಮ ಮುಂದಿನ ಸಿನಿಮಾ 'ಟಾಕ್ಸಿಕ್' ಬಿಡುಗಡೆಗೆ ಕಾಯುತ್ತಿದ್ದೇನೆ. ಆ ಚಿತ್ರ ನಿರ್ಮಾಣ ಪೂರ್ಣಗೊಳಿಸಿ' ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿ ಯಾದಲ್ಲಿ ವಿಡಿಯೋ ಹರಿದಾಡುತ್ತಿದೆ. ಅದರಲ್ಲಿ ಶಾರುಖ್ 'ನನ್ನಂತೆಯೇ ಯಶ್ ಕೂಡ ಬೇಗ ಬೇಗ ಚಿತ್ರ ಪೂರ್ತಿಗೊಳಿಸಬೇಕು. ಬೆಂಗಳೂರಿನಿಂದ' ಎಂದು ಹೇಳುವುದು ಕೇಳಿಸುತ್ತದೆ.
ಬುಲೆಟ್ ರೈಲು ಸೇತುವೆ ಕುಸಿತ: 3 ಮಂದಿ ಬಲಿ
ನವದೆಹಲಿ: ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಮಹತ್ವಾಕಾಂಕ್ಷಿ ಬುಲೆಟ್ ಯೋಜನೆಯ ಅಡಿ ನಿರ್ಮಾಣ ಆಗುತ್ತಿದ್ದ ಸೇತುವೆ ಮಂಗಳವಾರ ಸಂಜೆ 5ಕ್ಕೆ ಕುಸಿದಿದ್ದು 3 ಕಾರ್ಮಿಕರು ಬಲಿ ಆಗಿದ್ದಾರೆ. ವಡೋದರಾ ಬಳಿಯ ಮಾಹಿ ನದಿ ಸಮೀಪದಲ್ಲಿ ಕುಸಿತ ಉಂಟಾಗಿದೆ. ಘಟನೆ ಬೆನ್ನಲ್ಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿವೆ. ಈ ಬಗ್ಗೆ ಮಾಹಿತಿ ನೀಡಿರುವ ಆನಂದ್‌ನ ಎಸ್‌ಪಿ, 'ಒಬ್ಬ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ' ಎಂದರು.
ತಿರುಪತಿ ಲಡ್ಡು ವಿವಾದ: ಸಿಬಿಐ ಎಸ್‌ಐಟಿ ರಚನೆ
ಅಮರಾವತಿ: ತಿರುಪತಿ ಲಡ್ಡುವಿನಲ್ಲಿ ದನ ಮತ್ತು ಹಂದಿ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸಿಬಿಐ ಸ್ವತಂತ್ರ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸಿದೆ. 2 ಸಿಬಿಐ ಅಧಿಕಾರಿಗಳು, 2 ಆಂಧ್ರ ಪೊಲೀಸ್ ಅಧಿಕಾರಿ ಹಾಗೂ ಆಹಾರ ಸುರಕ್ಷತಾ ಸುರಕ್ಷತಾ ಸಂಸ್ಥೆ (ಎಫ್‌ಎಎಸ್‌ಎಐ) ಅಧಿಕಾರಿಯೊಬ್ಬರು ಇದರಲ್ಲಿದ್ದಾರೆ.
ಖ್ಯಾತ ಜಾನಪದ ಗಾಯಕಿ ಶಾರದಾ ಸಿನ್ಹಾ ನಿಧನ
ನವದೆಹಲಿ: ಬಿಹಾರದ ಖ್ಯಾತ ಜಾನಪದ ಗಾಯಕಿ ಹಾಗೂ ಪದ್ಮಭೂಷಣ ವಿಜೇತೆ ಶಾರದಾ ಸಿನ್ಹಾ (72) ದಿಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕಿಸಿದ್ದಾರೆ. ಇತ್ತೀಚೆಗೆ ಶಾರದಾ ಅವರ ಪತಿಯೂ ನಿಧನರಾಗಿದ್ದರು.
ನ.25ರಿಂದ ಸಂಸತ್ 'ಚಳಿಗಾಲದ ಅಧಿವೇಶನ'
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನ.25 ರಂದು ಆರಂಭವಾಗಿ ಡಿ.20ರಂದು ಮುಕ್ತಾಯ ವಾಗ ಲಿದೆ. ಇದರ ನಡುವೆ ಸಂವಿಧಾನ ಅಂಗೀಕಾರದ 75ನೇ ವಾರ್ಷಿ ಕೋತ್ಸವ ನಿಮಿತ್ತ ನ.26ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನ ನಡೆಯಲಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಗಳವಾರ ಈ ಘೋಷಣೆ ಮಾಡಿದ್ದಾರೆ.