Asianet Suvarna News Asianet Suvarna News

ಶಾರುಖ್‌ ಫಿಟ್‌ನೆಸ್‌ ಗುಟ್ಟು ಬೆಳಿಗ್ಗೆ 5 ಗಂಟೆಗೆ ಮಲಗೋದಂತೆ! ನಂಬಲಾಗ್ತಿಲ್ವಾ? ನಟ ಹೇಳಿದ್ದು ಕೇಳಿ...

ಬೆಳಿಗ್ಗೆ 5ಗಂಟೆಗೆ ಮಲಗಿ 10 ಗಂಟೆಗೆ ಏಳುವುದೇ ತಮ್ಮ ಫಿಟ್‌ನೆಟ್‌ ಮಂತ್ರ ಎಂದು ಶಾರುಖ್‌ ಖಾನ್‌ ಹೇಳಿದ್ದು, ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ನಟ ಹೇಳಿದ್ದೇನು?
 

Shah Rukh Khan says he sleeps at five in the morning and wakes up at 9am eats only one meal suc
Author
First Published Aug 19, 2024, 3:24 PM IST | Last Updated Aug 19, 2024, 3:24 PM IST

ಬೇಗ ಮಲಗಿ ಬೇಗ ಏಳೋದೇ ನನ್ನ ಫಿಟ್‌ನೆಸ್‌ ಗುಟ್ಟು ಎಂದು ಸೆಲೆಬ್ರಿಟಿಗಳು ಮಾತ್ರವಲ್ಲದೇ ಫಿಟ್‌ನೆಸ್‌ ಕಾಯ್ದುಕೊಳ್ಳುತ್ತಿರುವವರು ಹೇಳುವುದನ್ನು ಕೇಳಿಯೇ ಇರುತ್ತೀರಿ. ಸೂರ್ಯ ಉದಯಿಸುವ ಮುನ್ನವೇ ಎದ್ದು ವಾಕಿಂಗ್‌, ವ್ಯಾಯಾಮ, ಜಾಗಿಂಗ್‌, ಯೋಗ... ಹೀಗೆ ಫಿಟ್‌ನೆಸ್ ರಹಸ್ಯ ಹೇಳುವವರು ಹಲವರು ಸಿಗಬಹುದು. ಆದರೆ ತಮ್ಮ 58ನೇ ವಯಸ್ಸಿನಲ್ಲಿಯೂ 20 ವಯಸ್ಸಿನ ನಟಿಯರ ಜೊತೆ ರೊಮಾನ್ಸ್‌ ಮಾಡಲು ಶಕ್ಯರಾಗಿರೋ, ಇಂದಿಗೂ ಹೀರೋ ಪಟ್ಟನೇ ಕಾಯ್ದುಕೊಂಡು ಬಂದಿರೋ ಶಾರುಖ್‌ ಖಾನ್‌ ಫಿಟ್‌ನೆಸ್‌ ಗುಟ್ಟು ಕೇಳಿದ್ರೆ ನೀವು ಹೌಹಾರೋದು ಗ್ಯಾರೆಂಟಿ! ಏಕೆಂದ್ರೆ ಶಾರುಖ್‌ ಮಲಗೋದು ಐದು ಗಂಟೆಗೆ ಅಂತೆ! ನಿಜ ನಿಜ. ಏಳೋದು ಅಲ್ಲ, ಮಲಗೋದೇ ಐದು ಗಂಟೆಗೆ ಎಂದಿದ್ದಾರೆ!

ಒಂದರ ಮೇಲೊಂದು ಫ್ಲಾಪ್‌ ಚಿತ್ರ ಕೊಟ್ಟು ಸೋತಿದ್ದ ಶಾರುಖ್‌ ನಂತರ ಪಠಾಣ್‌, ಜವಾನ್‌, ಡಂಕಿಯಂಥ ಬ್ಲಾಕ್‌ಬಸ್ಟರ್‌ ಚಿತ್ರ ನೀಡಿ ಅಭಿಮಾನಿಗಳಿಗೆ ಮನರಂಜನೆ ನೀಡಿದವರು. ಈ ಮೂರು ಸಿನಿಮಾಗಳ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟವರು. ಅತ್ಯಂತ ಚಿಕ್ಕ ವಯಸ್ಸಿನ ನಟಿಯರ ಜೊತೆಯೂ ರೊಮಾನ್ಸ್‌ ಮಾಡುವಲ್ಲಿ ಇವರದ್ದು ಎತ್ತಿದ ಹೈ. ಆದರೆ ಇದಕ್ಕೆಲ್ಲಾ ಕಾರಣ, ಅವರು ಐದು ಗಂಟೆಗೆ ಮಲಗೋದಂತೆ! ಈ ಸೀಕ್ರೇಟ್‌ ಅನ್ನು ಅವರೇ ರಿವೀಲ್‌ ಮಾಡಿದ್ದಾರೆ. 

ಪ್ರೀತಿ ಜಿಂಟಾಗೆ ಗರ್ಭಿಣಿ ಮಾಡುವೆ ಎಂದ ಶಾರುಖ್​! ವೈರಲ್​ ವಿಡಿಯೋ ಕೇಳಿ ಥೂ ಅಸಹ್ಯ ಅಂತಿರೋ ಫ್ಯಾನ್ಸ್​

ಇತ್ತೀಚಿನ ಸಂದರ್ಶನವೊಂದರಲ್ಲಿ ಶಾರುಖ್ ಖಾನ್‌ ಈ ವಿಷಯ ತಿಳಿಸಿದ್ದಾರೆ. ನಟನೇ ಹೇಳಿರುವಂತೆ, ಅವರು ಬೆಳಿಗ್ಗೆ 5 ಗಂಟೆಗೆ ನಿದ್ದೆ ಮಾಡುತ್ತಾರಂತೆ.  ಏಳುವುದು  9 ಅಥವಾ 10 ಗಂಟೆಗಂತೆ. ಶೂಟಿಂಗ್‌ ಇದ್ದರೆ 9ಕ್ಕೆ ಏಳುವೆ, ಇಲ್ಲದಿದ್ದರೆ 10 ಗಂಟೆಗೆ ಏಳುತ್ತೇನೆ ಎಂದಿದ್ದಾರೆ.. ನಾನು ನಸುಕಿನ 2 ಗಂಟೆ ಸುಮಾರಿಗೆ ಮನೆಗೆ ಬರುತ್ತೇನೆ. ಆಗ ವರ್ಕೌಟ್ ಮಾಡಿ ಸ್ನಾನ ಮಾಡಿ ಮಲಗುತ್ತೇನೆ ಎಂದಿದ್ದಾರೆ. ಇಷ್ಟೇ ಅಲ್ಲದೇ ನಟ ಪ್ರತಿದಿನ ಒಂದೇ ಸಲ ಊಟ ಮಾಡುತ್ತಾರಂತೆ ಹಾಗೂ ದಿನಕ್ಕೆ ಅರ್ಧ ಗಂಟೆ ಜಿಮ್ ಮಾಡುತ್ತಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.  

ಇದನ್ನು ಕೇಳಿ ಅಭಿಮಾನಿಗಳು ವಿಭಿನ್ನ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನೀವು ಹೇಳುವುದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ನಿಮ್ಮನ್ನು ಅನುಸರಿಸುವ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅವರಿಗೆ ಇಂಥ ಟಿಪ್ಸ್‌ ಕೊಟ್ಟು ಅವರನ್ನು ಅನಾರೋಗ್ಯಕ್ಕೆ ಈಡು ಮಾಡಬೇಡಿ ಎಂದೇ ಹಲವರು ಹೇಳಿದ್ದಾರೆ. ಈ ರೀತಿಯ ನಿದ್ದೆಯ ಕ್ರಮ ಸರಿಯಲ್ಲ. ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಿನಕ್ಕೆ ಎಂಟು ಗಂಟೆ ನಿದ್ದೆ ಮಸ್ಟ್‌. ಅದು ಕೂಡ ರಾತ್ರಿ ಮಲಗಿ ಬೆಳಿಗ್ಗೆ ಬೇಗ ಏಳುವುದು. ಆದರೆ ನೀವು ಈ ರೀತಿ ಎಡವಟ್ಟು ಟೈಮಿಂಗ್ಸ್‌ ಹೇಳುತ್ತಿರುವುದನ್ನು ನೋಡಿದರೆ ಯಾಕೋ ಡೌಟ್‌ ಬರುತ್ತಿದೆ ಎನ್ನುವುದು ಕೆಲವರ ಅಭಿಮತ. ಇನ್ನು ಶಾರುಖ್‌ ಕಟ್ಟಾ ಅಭಿಮಾನಿಗಳಂತೂ ನಟನ ಈ ಟೈಮ್‌ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಭೇಷ್‌ ಭೇಷ್‌ ಎನ್ನುತ್ತಿದ್ದಾರೆ. 

ಪ್ರಿಯಕರನ ನಂಬಿ ಗಂಡನ ಬಿಟ್ಟು ವೇಶ್ಯೆಯಾದ ನಟಿ! ರಸ್ತೆ ಬದಿ ಹೆಣವಾದ 'ಕನಸಿನ ರಾಣಿ'ಯ ಕರಾಳ ಕಥೆಯಿದು...

Latest Videos
Follow Us:
Download App:
  • android
  • ios