ಶಾರುಖ್‌ ಖಾನ್‌ 34 ವರ್ಷಗಳ ಹಿಂದೆ ಪತ್ನಿ ಗೌರಿ ಅವರಿಗೆ ಪ್ರೇಮಿಗಳ ದಿನಕ್ಕೆ ನೀಡಿದ ಮೊದಲ ಗಿಫ್ಟ್‌ ಏನು? ನಟ ಹೇಳಿದ್ದೇನು?  

ಸಿನಿ ಪ್ರಿಯರಿಗೆ ತಿಳಿದಿರುವಂತೆ ಕೆಲ ಸಿನಿಮಾ ನಟರಂತೆ ಶಾರುಖ್​ ಖಾನ್​ ಕೂಡ ಹಿಂದೂ ಹುಡುಗಿಯನ್ನೇ ಮದುವೆಯಾದವರು. ಆದರೆ ಒಂದೇ ವ್ಯತ್ಯಾಸವೆಂದರೆ ಇದು ಇವರಿಬ್ಬರಿಗೂ ಮೊದಲ ಮದುವೆ ಹಾಗೂ ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. 1991ರಲ್ಲಿ ವಿವಾಹವಾಗಿದ್ದ ಈ ಜೋಡಿ 32 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು ಅತ್ಯಂತ ಖುಷಿಯಿಂದ ನಡೆಸುತ್ತಿದ್ದಾರೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳ ಜೊತೆ ಮದುವೆಯಾಗುವ ಬಗ್ಗೆ ಹಲವಾರು ತರಕಾರುಗಳು ಇರುವ ನಡುವೆಯೂ ಈ ದಂಪತಿ ಮೂರು ದಶಕಗಳಿಂದ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಶಾರುಖ್​ ಖಾನ್​ ವಯಸ್ಸು 57 ಆದರೂ ತರುಣರನ್ನೂ ನಾಚಿಸುವಂತೆ ಚಿತ್ರರಂಗದಲ್ಲಿ ನಾಯಕನಾಗಿಯೇ ಮಿಂಚುತ್ತಿದ್ದರೆ, ಅವರ ಪತ್ನಿ 52 ವರ್ಷದ ಗೌರಿ ಖಾನ್​ ಅವರು ಇಂಟೀರಿಯರ್ ಡಿಸೈನರ್ ಆಗಿದ್ದು ಸದ್ಯ ಅದರಲ್ಲಿಯೇ ಬಿಜಿ ಇದ್ದಾರೆ. 

ಅಂದಹಾಗೆ, ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ವಿಶೇಷವೆಂದರೆ, ಮೊದಲು ಶಾರುಖ್​-ಗೌರಿ (Shah rukh- Gouri) ರಿಜಿಸ್ಟರ್ ಮದುವೆ ಆಗಿದ್ದರು. ಆನಂತರ ಮುಸ್ಲಿಂ ಸಂಪ್ರದಾಯದ ಪ್ರಕಾರ, ನಂತರ ಪಂಜಾಬಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು. ಅಂದಹಾಗೆ, ಆ ವೇಳೆ 'ರಾಜು ಬನ್‌ ಗಯಾ ಹೀರೋ' ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದರು. ಆ ಸಿನಿಮಾದ ಸೆಟ್‌ನಿಂದಲೇ ಸ್ಯೂಟ್‌ ಅನ್ನು ತಂದಿದ್ದ ಶಾರುಖ್, ಅದನ್ನೇ ಮದುವೆಗೆ ಧರಿಸಿದ್ದರಂತೆ! 1997ರ ನವೆಂಬರ್‌ನಲ್ಲಿ ಆರ್ಯನ್‌ ಖಾನ್‌ಗೆ ಗೌರಿ ಜನ್ಮ ನೀಡಿದರು. ಆನಂತರ 2000ರಲ್ಲಿ ಸುಹಾನಾ ಖಾನ್ ಕೂಡ ಜನಿಸಿದರು. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಆ ಮಗುವಿಗೆ ಅಬ್‌ರಾಮ್‌ ಎಂದು ಹೆಸರಿಟ್ಟಿದ್ದಾರೆ. ಒಟ್ಟು ಮೂವರು ಮಕ್ಕಳು ಈ ದಂಪತಿಗೆ ಇದ್ದಾರೆ.

ರಿಸೆಪ್ಷನ್​ ದಿನ ಪತ್ನಿ ಗೌರಿಗೆ ಬುರ್ಖಾ ಹಾಕ್ಕೋ, ನಮಾಜ್​ ಮಾಡೋಣ ಅಂದೆ: ಆ ದಿನದ ಘಟನೆ ವಿವರಿಸಿದ ಶಾರುಖ್​

ಈಗ ಎಲ್ಲೆಲ್ಲೂ ಪ್ರೇಮಿಗಳ ದಿನಾಚರಣೆ ಭರಾಟೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಶಾರುಖ್‌ ಖಾನ್‌ ಅವರಿಗೂ ಒಂದು ಪ್ರೇಮದ ಪ್ರಶ್ನೆಯನ್ನು ಕೇಳಲಾಗಿದೆ. ಶಾರುಖ್‌ ಅವರು ಕೆಲ ತಿಂಗಳುಗಳಿಂದ ಆಸ್ಕ್‌ ಅನಿಥಿಂಗ್‌ ಎಂದು ಎಕ್ಸ್‌ ಖಾತೆಯಲ್ಲಿ ಜನರ ಜೊತೆ ಪ್ರಶ್ನೋತ್ತರ ನಡೆಸುತ್ತಿದ್ದಾರೆ. ಅಲ್ಲಿ ಶಾರುಖ್‌ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಮದುವೆಯಾದ ಹೊಸತರಲ್ಲಿ ಅಥವಾ ಪ್ರೀತಿ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರೇಮಿಗಳ ದಿನದಂದು (Valentine’s Day) ಗೌರಿ ಅವರಿಗೆ ನೀಡಿದ್ದ ಮೊದಲ ಗಿಫ್ಟ್​ ಏನು ಎಂದು ಶಾರುಖ್‌ ಅವರಿಗೆ ಪ್ರಶ್ನೆ ಎದುರಾಗಿದೆ. ‘ಗೌರಿ ಮೇಡಂ ಅವರಿಗೆ ನೀವು ನೀಡಿದ ಮೊದಲ ವ್ಯಾಲೆಂಟೈನ್ಸ್​ ಡೇ ಉಡುಗೊರೆ ಏನು’ ಎಂದು ಕೇಳಲಾಗಿದೆ.

ಅದಕ್ಕೆ ಶಾರುಖ್‌ ಖಾನ್‌ ಉತ್ತರಿಸುತ್ತಾ, ‘ನನಗೆ ಸರಿಯಾಗಿ ನೆನಪಿರುವುದಾದರೆ.. ಈಗಾಗಲೇ 34 ವರ್ಷಗಳು ಕಳೆದಿವೆ. ನನಗೆ ಅನಿಸಿದ ಹಾಗೆ, ಒಂದು ಜೊತೆ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಇಯರ್​ ರಿಂಗ್ಸ್​ ನೀಡಿದ್ದೆ’ ಎಂದಿದ್ದಾರೆ. ‘ವಾವ್ ತುಂಬ ಕ್ಯೂಟ್​ ಆಗಿದೆ ಸರ್. ನೀವು ನೀಡಿದ್ದು ಪ್ಲಾಸ್ಟಿಕ್​ ಗಿಫ್ಟ್​ ಆಗಿದ್ದರೂ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈಗ ಬೇಕಿದ್ದರೆ ನೀವು ಡೈಮಂಡ್​ ರಿಂಗ್​ ನೀಡಬಲ್ಲಿರಿ’ ಎಂದೆಲ್ಲಾ ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ. ಅಂದಹಾಗೆ ಗೌರಿ ಅವರು, ಇಂಟೀರಿಯರ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ದಾರೆ.

ಶಾರುಖ್​ ಖಾನ್​ ಮೈ ಪರಿಮಳ ಎಂದ್ರೆ ಹೆಂಗಸರಿಗೆ ಇಷ್ಟವಂತೆ! ನಟಿಯರೇನು ಹೇಳಿದ್ರು ಕೇಳಿ