ಶಾರೂಖ್ ಖಾನ್ ಮತ್ತು ಗೌರಿ ಅವರದ್ದು ಮತವನ್ನೂ ಮೀರಿದ ಪ್ರೀತಿ. ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರು. ಗೌರಿ ಕುಟುಂಬವಂತೂ ಸ್ವಲ್ಪ ಸಂಪ್ರದಾಯಿಕ. ಹೀಗಿದ್ದರೂ ಇಬ್ಬರೂ ಪ್ರೀತಿಸಿ ಮದುವೆಯಾದಾಗ ರಿಸೆಪ್ಶನ್ ದಿನ ದೊಡ್ಡ ಶಾಕ್ ಕೊಟ್ಟಿದ್ದರು ಬಾಲಿವುಡ್ ಬಾದ್ ಶಾ.

ನಟ ಶಾರೂಖ್ ಖಾನ್ ಮದುವೆ ರಿಸೆಪ್ಶನ್ ದಿನ ಗೌರಿ ಮತ್ತು ಆಕೆಯ ಫ್ಯಾಮಿಲಿಗೆ ದೊಡ್ಡ ಶಾಕ್ ಕೊಟ್ಟಿದ್ದರು. ಮಗಳು ಪ್ರೀತಿಸಿದ್ಲು ಅಂತ ಮದುವೆ ಮಾಡಿಕೊಟ್ಟರೆ ಮದುವೆಯ ನಂತರ ಗೌರಿ ಬುರ್ಖಾ ಮಾತ್ರ ಧರಿಸಬೇಕು ಅಂತ ತಗಾದೆ ತೆಗೆದಿದ್ದರು ಶಾರೂಖ್ ಖಾನ್. ಇದು ಗೌರಿ ಮಾತ್ರವಲ್ಲ, ಗೌರಿ ಫ್ಯಾಮಿಲಿಗೂ ದೊಡ್ಡ ಶಾಕ್.

ಸಿನಿಮಾದವ್ರಂತೂ ಬೇಡ್ವೇ ಬೇಡ: ಮದುವೆ ಪ್ಲಾನ್ ರಿವೀಲ್ ಮಾಡಿದ ನಟಿ ತಾಪ್ಸಿ

ಶಾರೂಖ್ ಗೌರಿ ಮದುವೆಯಾಗಿ ಫ್ಯಾಮಿಲಿ ರಿಸೆಪ್ಶನ್ ನಡೆಯುತ್ತಿತ್ತು. ಅದಾಗಲೇ ರಿಸೆಪ್ಶನ್‌ಗೆ ಸೇರಿದ ಜನ ಹೋ ಆಕೆ ಮತಾಂತರವಾದಳು ಎಂದು ಗೌರಿ ಬಗ್ಗೆ ಗುಸುಗುಸು ಮಾತಾಡೋಕೆ ಶುರು ಮಾಡಿದ್ದರು. ಆದರೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ದೊಡ್ಡ ಶಾಕ್ ಕೊಟ್ಟಿದ್ದು ಶಾರೂಖ್ ಖಾನ್.

ಗೌರಿ ಬುರ್ಖಾ ಹಾಕ್ಕೊಂಡು ಬಾ, ನಮಾಝ್ ಓದುವ ಎಂದು ಶಾರೂಖ್ ಕರೆದಾಗ ಗೌರಿ ಕುಟುಂಬದವರಷ್ಟೇ ಅಲ್ಲ, ಸ್ವತಃ ಗೌರಿಯೇ ಶಾಕ್‌ಗೆ ಒಳಗಾಗಿದ್ದರು. ನೋಡಿ ಇಂದಿನಿಂದ ನಂತರ ಗೌರಿ ಬುರ್ಖಾ ಧರಿಸಿಯೇ ಇರಲಿದ್ದಾಳೆ. ಇಂದಿನಿಂದ ಈಕೆ ಮನೆಯಿಂದ ಹೊರ ಬರಲ್ಲ, ಆಕೆಯ ಹೆಸರು ಆಯೆಷಾ ಆಗಲಿದೆ ಎಂದಿದ್ದರು. ಇದು ದೊಡ್ಡ ಶಾಕ್ ಆಗಿತ್ತು.

ಆ ಹುಡುಗಿಗೆ ಪ್ರೀತಿ ಹೇಳಿದ್ದರೆ ಈಗ ನಾನು ಅಜ್ಜನಾಗಿರುತ್ತಿದ್ದೆ: ಸಲ್ಮಾನ್‌ ಖಾನ್‌

ಸ್ವಲ್ಪ ಹೊತ್ತಲ್ಲೇ ಇದು ಫ್ರಾಂಕ್ ಎಂದು ರಿವೀಲ್ ಮಾಡಿ ಫನ್ ಮಾಡಿದ್ದರು ಶಾರೂಖ್. ನಿರಾಳವಾಗಿತ್ತು ಗೌರು ಕುಟುಂಬ. ಇದನ್ನು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದರು ಶಾರೂಖ್.

ಈಗ ಗೌರಿಗಿಂತ ಹೆಚ್ಚಾಗಿ ಆಕೆಯ ಕುಟುಂಬ ನನ್ನನ್ನು ಪ್ರೀತಿಸುತ್ತೆ ಎಂದ ಶಾರೂಖ್ ಮಾತಲ್ಲಿ, ವಿವಾಹ ಮತ್ತು ಕುಟುಂಬ ಜೀವನದ ಯಶಸ್ಸು, ಖುಷಿ, ಸಂತೃಪ್ತಿ ಎಲ್ಲವೂ ಇತ್ತು ಎಂಬುದು ಸತ್ಯ.