Shah Rukh Khan Birthday; ಮಧ್ಯರಾತ್ರಿಯೇ 'ಮನ್ನತ್' ಮುಂದೆ ಜಮಾಯಿಸಿದ್ದ ಫ್ಯಾನ್ಸ್, ಶಾರುಖ್ ದರ್ಶನ ಹೀಗಿತ್ತು

ಬಾಲಿವುಡ್ ಸ್ಟಾರ್, ಕಿಂಗ್ ಖಾನ್ ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2) ಹುಟ್ಟುಹಬ್ಬದ ಸಂಭ್ರಮ. ಶಾರುಖ್ 57ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ

Shah Rukh Khan makes rare midnight appearance on balcony of Mannat on his birthday sgk

ಬಾಲಿವುಡ್ ಸ್ಟಾರ್, ಕಿಂಗ್ ಖಾನ್ ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2) ಹುಟ್ಟುಹಬ್ಬದ ಸಂಭ್ರಮ. ಶಾರುಖ್ 57ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟನಿಗೆ ಅಭಿಮಾನಿಗಳು, ಸ್ನೇಹಿತರು, ಸಿನಿಮಾ ಗಣ್ಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರದಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಿಂಗ್ ಖಾನ್ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಅಂದಹಾಗೆ ಶಾರುಖ್ ಖಾನ್‌ಗೆ ವಿಶ್ ಮಾಡಲು, ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಅವರ ಮನೆ ಮುಂದೆ ಬೀಡುಬಿಟ್ಟಿದ್ದರು. ಮುಂಬೈನ ಮನತ್ ನಿವಾಸದ ಮುಂದೆ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ರಾತ್ರಿಯಿಂದನೆ ನೆಚ್ಚಿನ ನಟನ ದರ್ಶನಕ್ಕೆ ಕಾಯುತ್ತಿದ್ದರು.

ಶಾರುಖ್ ಖಾನ್ ಮಧ್ಯರಾತ್ರಿಯೇ ಮನೆಯಿಂದ ಹೊರಬಂದು ತನ್ನ ಎಂದಿನ ಶೈಲಿಯಲ್ಲೇ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳಿಗೆ ದರ್ಶನ ನೀಡಿದರು. ಅಭಿಮಾನಿಗಳತ್ತ ಕೈ ಬೀಸಿದರು. ಶಾರುಖ್ ಜೊತೆ ಕಿರಿಯ ಪುತ್ರ ಅಬ್ ರಾಮ್ ಕೂಡ ಜೊತೆಯಲ್ಲಿದ್ದ. ಶಾರುಖ್ ಬಾಲ್ಕನಿಯಿಂದ ಅಭಿಮಾನಿಗಳ ಪ್ರೀತಿ, ಶುಭಾಶಯ ಸ್ವೀಕರಿಸಿದ ವಿಡಿಯೋ ಮತ್ತು ಪೋಟೋಗಳು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿವೆ. 

ಅಭಿಮಾನಿಗಳ ಶಾರುಖ್ ಕೈ ಬೀಸಿದರು, ಮುತ್ತುಗಳನ್ನು ಹರಿಸದರು. ಚಪ್ಪಾಳೆ ತಟ್ಟಿ ಥಂಬ್ಸ್ ಅಪ್ ಹೇಳಿದರು. ಕಿಂಗ್ ಖಾನ್ ಪ್ರೀತಿಗೆ ಅಭಿಮಾನಿಗಳು ಧನ್ಯರಾದರು. ಶಾರುಖ್ ಫೋಟೋ, ಕೇಕ್ ಹಿಡಿದು ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದರು. ಶಾರುಖ್ ಮನೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ, ಕೂಗಾಟ ಮುಗಿಲು ಮುಟ್ಟಿತ್ತು.

ಬ್ಯಾಕ್‌ ಟು ಬ್ಯಾಕ್‌ ಫ್ಲಾಪ್‌ ನಂತರವೂ ಶಾರುಖ್ ಮೇಲೆ ಹೂಡಿರುವ ಮೊತ್ತ ಕೇಳಿದರೆ ತಲೆ ತಿರುಗುತ್ತೆ

ಇನ್ನು ಇಂದು ಹುಟ್ಟುಹಬ್ಬದ ಪ್ರಯುಕ್ತ ಶಾರುಖ್ ಖಾನ್ ನಟನೆಯ ಬಹುನಿರೀಕ್ಷೆಯ ಪಠಾಣ್ ಸಿನಿಮಾದ ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದೆ. ಶಾರುಖ್ ಖಾನ್ ತೆರೆಮೇಲೆ ಬರದೆ ಅನೇಕ ವರ್ಷಗಳೇ ಆಗಿವೆ. ಸಾಲು ಸಾಲು ಸಿನಿಮಾಗಳಿಂದ ಕಂಗೆಟ್ಟಿದ್ದ ಶಾರುಖ್ ಸಿನಿಮಾ ಮಾಡುವುದನ್ನೆ ಬಿಟ್ಟಿದ್ದರು. ವವರ್ಷಗಳ ಬಳಿಕ ಶಾರುಖ್ ಮತ್ತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ನನ್ನು ನೋಡಲು ಅಭಿಮಾನಿಗಳ ಸಹ ಕಾತರರಾಗಿದ್ದಾರೆ.  ಶಾರುಖ್ ಬಳಿ ಸದ್ಯ ರಾಜ್​ಕುಮಾರ್​ ಹಿರಾನಿ ಜೊತೆ ‘ಡಂಕಿ’, ಅಟ್ಲೀ ಕುಮಾರ್  ಜೊತೆ ‘ಜವಾನ್​’ ಹಾಗೂ ಸಿದ್ದಾರ್ಥ್​ ಆನಂದ್​ ಜೊತೆ ‘ಪಠಾಣ್’ ಸಿನಿಮಾಗಳಿವೆ.

ಖ್ಯಾತಿಗೂ ಮುನ್ನ ಮದುವೆಯಾಗಿದ್ದ ಬಾಲಿವುಡ್‌ನ ಸ್ಟಾರ್ಸ್‌: ಈಗ ಉಳಿದಿರುವುದು ಒಂದೇ ಮದುವೆ

ಸತತ ನಾಲ್ಕು ವರ್ಷಗಳ ಗ್ಯಾಪ್​ ಬಳಿಕ 2023ರಲ್ಲಿ ಶಾರುಖ್​ ದೊಡ್ಡ ಪರದೆ ಮೇಲೆ ಮಿಂಚಲಿದ್ದಾರೆ. ‘ಪಠಾಣ್​’ ಸಿನಿಮಾ 202​3ರ ಜನವರಿ 25ಕ್ಕೆ ರಿಲೀಸ್​ ಆಗಲಿದೆ. ಅದೇ ವರ್ಷ ಜೂನ್​ ವೇಳೆಗೆ ‘ಜವಾನ್​’ ಕೂಡ ಬಿಡುಗಡೆ ಆಗುವ ನಿರೀಕ್ಷೆ ಇದೆ. ವರ್ಷಾಂತ್ಯಕ್ಕೆ ‘ಡಂಕಿ’ ತೆರೆ ಕಾಣಲಿದೆ. ಹಾಗಾಗಿ 2023ರ ವರ್ಷ ಪೂರ್ತಿ ಅಭಿಮಾನಿಗಳ ಪಾಲಿಗೆ ಶಾರುಖ್​ ಸಿನಿಮೋತ್ಸವ ಆಗಿರಲಿದೆ. ಶಾರುಖ್ ಸಿನಿಮಾಗಳನ್ನು ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. 

Latest Videos
Follow Us:
Download App:
  • android
  • ios