ಶಾರುಖ್ ಖಾನ್ ಅವರ ಆಕ್ಷನ್ ಥ್ರಿಲ್ಲರ್ 'ಕಿಂಗ್' 2026 ರಲ್ಲಿ ಬಿಡುಗಡೆಯಾಗಲಿದೆ. ಇದು ಅವರ ಮಗಳು ಸುಹಾನಾ ಖಾನ್ ಅವರ ಚೊಚ್ಚಲ ಚಿತ್ರವಾಗಿದ್ದು, ಇದರಲ್ಲಿ ಶಾರುಖ್ ಎರಡು ವಿಭಿನ್ನ ಟೈಮ್‌ಲೈನ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ಕಿಂಗ್ ಖಾನ್ ಅಂದರೆ ಶಾರುಖ್ ಖಾನ್ ಅವರ ಮುಂಬರುವ 'ಕಿಂಗ್' ಸಿನಿಮಾ 2026 ರಲ್ಲಿ ಬಿಡುಗಡೆಯಾಗಲಿದೆ. ಶಾರುಖ್ ಅವರ 60ನೇ ಹುಟ್ಟುಹಬ್ಬದಂದು ನಿರ್ಮಾಪಕರು ಇದರ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಸಖತ್ ಎಕ್ಸೈಟ್ ಆಗಿದ್ದರು. ಈ ಚಿತ್ರವು ಸೂಪರ್‌ಸ್ಟಾರ್‌ನ ಆಕ್ಷನ್‌ಗೆ ಭರ್ಜರಿ ಕಮ್‌ಬ್ಯಾಕ್ ಮಾತ್ರವಲ್ಲ, ಅವರ ಮಗಳು ಸುಹಾನಾ ಖಾನ್ ಅವರ ಬಾಲಿವುಡ್ ಚೊಚ್ಚಲ ಚಿತ್ರವೂ ಆಗಿದೆ.

'ಕಿಂಗ್' ಕಥೆ ಏನು?
'ಕಿಂಗ್' ಚಿತ್ರದ ಫಸ್ಟ್ ಲುಕ್ ಬಂದಾಗಿನಿಂದ, ಅದರ ಕಥೆ ಏನಿರಬಹುದು ಎಂದು ತಿಳಿಯಲು ಜನ ಕಾಯುತ್ತಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ, 'ಕಿಂಗ್' ಚಿತ್ರದಲ್ಲಿ ಶಾರುಖ್ ಖಾನ್ ಎರಡು ವಿಭಿನ್ನ ಟೈಮ್‌ಲೈನ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ತಮ್ಮ ಜೀವನದ ಎರಡು ಹಂತಗಳಲ್ಲಿ, ಅಂದರೆ ಯುವಕ ಮತ್ತು ವಯಸ್ಸಾದ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಯುವ ಪಾತ್ರವು ರಾಘವ್ ಜುಯಲ್ ಜೊತೆ ಹೋರಾಡಲಿದೆ, ಅವರು ಖಳನಾಯಕನ ಪಾತ್ರದಲ್ಲಿದ್ದಾರೆ. ಇನ್ನೊಂದೆಡೆ, ಎರಡನೇ ಹಂತದ ದೊಡ್ಡ ವಿಲನ್ ಅಭಿಷೇಕ್ ಬಚ್ಚನ್ ಆಗಿರಲಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಜಟಾಪಟಿ ತೋರಿಸಲಾಗುವುದು.

'ಕಿಂಗ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಈ ಸ್ಟಾರ್ಸ್ ಕೂಡಾ ಇದ್ದಾರೆ

'ಪಠಾಣ್' ಮತ್ತು 'ವಾರ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿದ ಸಿದ್ಧಾರ್ಥ್ ಆನಂದ್ 'ಕಿಂಗ್' ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಿಂಗ್ ಅನ್ನು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿದೆ. ಈ ಹೈ-ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಜೊತೆಗೆ ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ಜೈದೀಪ್ ಅಹ್ಲಾವತ್, ಅರ್ಷದ್ ವಾರ್ಸಿ ಮತ್ತು ಅಭಿಷೇಕ್ ಬಚ್ಚನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್ ಜೊತೆಗೆ, ಚಿತ್ರದಲ್ಲಿ ಶಾರುಖ್ ಮತ್ತು ಸುಹಾನಾ ಅವರ ತಂದೆ-ಮಗಳ ಜೋಡಿ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದೆ.

ಶಾರುಖ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಕೊನೆಯದಾಗಿ 2023 ರಲ್ಲಿ 'ಪಠಾಣ್', 'ಜವಾನ್' ಮತ್ತು 'ಡಂಕಿ' ಎಂಬ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಮೂರೂ ಚಿತ್ರಗಳು ಹಿಟ್ ಆಗಿದ್ದವು. ಪಠಾಣ್ ಮತ್ತು ಜವಾನ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದವು. ಎರಡೂ ಚಿತ್ರಗಳು 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದವು. ಆದರೆ, 2024 ರಲ್ಲಿ ಶಾರುಖ್ ಅವರ ಯಾವುದೇ ಚಿತ್ರ ಬಿಡುಗಡೆಯಾಗದ ಕಾರಣ ಅವರ ಅಭಿಮಾನಿಗಳು ನಿರಾಶೆಗೊಂಡಿದ್ದರು.