Asianet Suvarna News Asianet Suvarna News

ಮಗನ ಭೇಟಿ ನಂತರ ಫ್ಯಾನ್ಸ್‌ಗೆ ಕೈಮುಗಿದು ವಿಶ್ ಮಾಡಿದ ಶಾರೂಖ್

  • ಮಗನನ್ನು ನೋಡಲು ಆರ್ಥರ್ ರೋಡ್ ಜೈಲಿಗೆ ಬಂದ ಶಾರೂಖ್
  • ಕಿಂಗ್‌ ಖಾನ್‌ನನ್ನು ಮುತ್ತಿದ ಮಾಧ್ಯಮ, ಅಭಿಮಾನಿಗಳು
Shah Rukh Khan Greets People With Folded Hands Outside Arthur Road Jail After Meeting Son Aryan Khan dpl
Author
Bangalore, First Published Oct 21, 2021, 5:55 PM IST
  • Facebook
  • Twitter
  • Whatsapp

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅ.21ರ ಗುರವಾರ ಬೆಳಗ್ಗೆ ಮುಂಬೈನ ಆರ್ಥರ್ ರೋಡ್ ಜೈಲಿನ ಹೊರಗೆ ತನ್ನ ಮಗ ಆರ್ಯನ್ ಖಾನ್ ಅವರನ್ನು ಭೇಟಿಯಾದರು. ಅಕ್ಟೋಬರ್ 3 ರಂದು ಡ್ರಗ್ಸ್-ಆನ್ ಕ್ರೂಸ್ ಪ್ರಕರಣದಲ್ಲಿ ಆರ್ಯನ್ ಬಂಧಿಸಿದ ನಂತರ ಅವರನ್ನು ತಂದೆ ಶಾರೂಖ್ ಮೊದಲ ಬಾರಿಗೆ ಭೇಟಿಯಾದರು.

ತಂದೆ ಮಗನ ಭೇಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕಾಣಿಸಿಕೊಂಡಿದೆ. ತನ್ನ ಕಾರಿನ ಕಡೆಗೆ ಹೋಗುವಾಗ ಕೆಲವು ಅಭಿಮಾನಿಗಳನ್ನು ಕೈಗಳನ್ನು ಮಡಚಿ ವಿಶ್ ಮಾಡಿದ ಕಿಂಗ್ ಖಾನ್ ಭಾವನಾತ್ಮಕ ವೀಡಿಯೊ ವೈರಲ್ ಆಗಿದೆ.

ಆರ್ಯನ್ ಬಾಲ್ಯದ ಗೆಳತಿ, ನಟಿ ಅನನ್ಯಾ ಪಾಂಡೆ ಮನೆಗೆ NCB ರೈಡ್

ಬಾಲಿವುಡ್ ಸೂಪರ್‌ಟಾರ್ ಮಾಧ್ಯಮಗಳೊಂದಿಗೆ ಮಾತನಾಡುವುದನ್ನು ತಪ್ಪಿಸಿ ನೇರವಾಗಿ ತನ್ನ ಕಾರಿನತ್ತ ಹೊರಟ ಶಾರೂಖ್ ವಿಡಿಯೋ ಹಾಗೂ ಪೋಟೋಗಳು ವೈರಲ್ ಆಗಿವೆ. ಬೂದು ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಡೆನಿಮ್‌ನಲ್ಲಿ ಎಸ್‌ಆರ್‌ಕೆ ಕಾಣಿಸಿಕೊಂಡರು ಕಪ್ಪು ಮಾಸ್ಕ್ ಧರಿಸಿದ್ದರು. ಅವರ ಕೂದಲನ್ನು ಸಣ್ಣ ಪೋನಿಟೇಲ್‌ಗೆ ಕಟ್ಟಲಾಗಿತ್ತು.

ಮುಂಬೈನ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ಬುಧವಾರ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ನ್ಯಾಯಾಧೀಶ ವಿ.ವಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ದಾಖಲಿಸಿದ ಡ್ರಗ್ ಪ್ರಕರಣದ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಗಳನ್ನು ಪಾಟೀಲ್ ತಿರಸ್ಕರಿಸಿದರು.

Follow Us:
Download App:
  • android
  • ios