ಬಾಲಿವುಡ್ ನಟರಾದ ಸೋನು ಸೂದ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿ ಹಲವು ನಟರು ಕೊರೋನಾ ಲಾಕ್‌ಡೌನ್ ಸಂದರ್ಭ ಬಡ ಜನರಿಗೆ ನೆರವಾಗಿದ್ದಾರೆ. ಆಹಾರ, ಆರೋಗ್ಯ, ಸಾರಿಗೆ ಸೇರಿ ಹಲವು ರೀತಿ ಜನರಿಗೆ ನೆರವಾಗಿದ್ದಾರೆ ಬಾಲಿವುಡ್ ಸ್ಟಾರ್ಸ್.

ಇದೀಗ ಬಾಲಿವುಡ್ ಕಿಂಗ್ ಖಾನ್ ಕೊರೋನಾ ರೋಗಿಗಳ ನೆರವಿಗೆ ಧಾವಿಸಿದ್ದಾರೆ. ನಟ ಸುಮಾರು 500 Remdesivir ಎಂಜೆಕ್ಷನ್‌ಗಳನ್ನು ಕೊರೋನಾ ರೋಗಿಗಳಿಗೆ ನೀಡಿದ್ದಾರೆ. ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ನಟನಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಕರಣ್ ಶೋ ಬಗ್ಗೆ ರಣಬೀರ್ ಹೀಗಾ ಹೇಳೋದು? ಧೈರ್ಯ ಮೆಚ್ಚಬೇಕು!

ಇದು ತುಂಬಾ ಅಗತ್ಯವಿರೋ ಸಂದರ್ಭದಲ್ಲಿ ನಟ ಇದನ್ನು ನೀಡಿದ್ದಾರೆ. ಈ ಕಷ್ಟದ ಸಂದರ್ಭ ನಟ ಮಾಡಿದ ನೆರವು ದೊಡ್ಡದು. ನಿಮಗೆ ತುಂಬು ಧನ್ಯವಾದಗಳು ಎಂದಿದ್ದಾರೆ. ದೆಹಲಿಯಲ್ಲಿ ಮೂರನೇ ಹಂತದ ಕೊರೋನಾ ಅಲೆ ಇನ್ನೂ ಕಡಿಮೆಯಾಗಿಲ್ಲ ಎಂದಿದ್ದಾರೆ ಜೈನ್.

ಕೊರೋನಾ ಎರಡನೇ ಅಲೆ ಬರಲಿದ್ದು, ಹಲವು ರಾಷ್ಟ್ರಗಳಲ್ಲಿ ಲಾಕ್‌ಡೌನ್ ಮಾಡಲಾಗಿದೆ. ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದ್ದು, ನಟನ ನೆರವಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.