ಪಠಾಣ್​ ಚಿತ್ರ ಭರ್ಜರಿ ಕಲೆಕ್ಷನ್​ ಮಾಡಿರುವ ಬೆನ್ನಲ್ಲೇ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಶಾರುಖ್​ ಖಾನ್​ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಏನದು? 

ಬಾಲಿವುಡ್ ನಟ ಶಾರುಖ್ ಖಾನ್ ಅವರ 'ಪಠಾಣ್' ಚಿತ್ರ ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ತಮ್ಮ ಚಿತ್ರ ಬಿಡುಗಡೆಯಾದ ನಾಲ್ಕನೇ ದಿನ ಅಂದರೆ ಜನವರಿ 28 ರಂದು ಶಾರುಖ್ ಖಾನ್ ಮತ್ತೊಮ್ಮೆ ಅಭಿಮಾನಿಗಳಿಗಾಗಿ ಸಮಯ ಕೊಟ್ಟಿದ್ದಾರೆ. ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ #asksrk ಸೆಷನ್ ಅನ್ನು ಪುನಃ ಆರಂಭಿಸಿದ್ದಾರೆ. ತಮ್ಮ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಕಳೆದ ತಿಂಗಳಿನಿಂದ ಅವರು ಈ ಸೆಷನ್​ ಆರಂಭಿಸಿದ್ದು, ಮಧ್ಯೆ ಪಠಾಣ್ (Pathaan) ಬಿಡುಗಡೆ ಹಿನ್ನೆಲೆಯಲ್ಲಿ ಸ್ವಲ್ಪ ಬಿಡುವು ತೆಗೆದುಕೊಂಡಿದ್ದರು. ಇದೀಗ ಮತ್ತೆ ಅಭಿಮಾನಿಗಳ ಕೆಲ ಪ್ರಶ್ನೆಗಳಿಗೆ ಶಾರುಖ್​ ಉತ್ತರಿಸುತ್ತಿದ್ದಾರೆ. 

ಅದರಲ್ಲಿಯೂ 'ಪಠಾಣ್' ಚಿತ್ರಕ್ಕೆ ಸಂಬಂಧಿಸಿದಂತೆ ಫ್ಯಾನ್ಸ್​ ಕೇಳಿರುವ ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಶಾರುಖ್​ ಖಾನ್​ (Shah Rukh Khan)ಉತ್ತರಿಸುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನಿಂದ ತಮ್ಮ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಅವರ #asksrk ಸೆಷನ್‌ನಲ್ಲಿ ಅಭಿಮಾನಿಗಳು ಯಾವ ಪ್ರಶ್ನೆಗಳನ್ನು ಕೇಳಿದರು ಎಂಬುದನ್ನು ತಿಳಿಯೋಣ. ಪಠಾಣ್​ ಚಿತ್ರ ನೋಡಿದ ಅಭಿಮಾನಿಯೊಬ್ಬರು, 'ಪಠಾಣ್‌ಗೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ನೋಡಿ ನಿಮಗೆ ಏನನಿಸುತ್ತದೆ?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶಾರುಖ್ ಖಾನ್, 'ನೃತ್ಯ ಮಾಡೋಣ, ಹಾಡು ಹಾಡೋಣ, ನಗೋಣ ಎನ್ನಿಸುತ್ತಿದೆ, ಯಾರಿಗೆ ಗೊತ್ತು ನಾಳೆ ಏನಾಗುತ್ತದೆಯೋ ಎಂದಿದ್ದಾರೆ. ಈ ಮೂಲಕ ಇರುವಷ್ಟು ದಿನ ಚೆನ್ನಾಗಿ ಇರಬೇಕು ಎಂದಿದ್ದಾರೆ.

Urfi Javed: ಶಾರುಖ್​ ಖಾನ್​ ಎರಡನೇ ಹೆಂಡ್ತಿಯಾಗಲು ಉರ್ಫಿ ಸಿದ್ಧ , ಏನಿದು ಹೊಸ ವಿಷ್ಯ?

ಇನ್ನೊಬ್ಬ ಅಭಿಮಾನಿ (Fan) ಪಠಾಣ್ ನೋಡಿದ ನಂತರ ನಿಮ್ಮ ಮಗ ಅಬ್ರಾಮ್ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದ್ದಾರೆ. ಅದಕ್ಕೆ ಶಾರುಖ್ ಖಾನ್, 'ಹೇಗೆ ಅಂತ ಗೊತ್ತಿಲ್ಲ ಆದರೆ ಆತ ಬಂದು ಪಾಪಾ... ಇವೆಲ್ಲವೂ ಕರ್ಮ ಎಂದಿದ್ದಾನೆ ಎಂದು ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು, 'ಸರ್ ನೀವು ಯಾವಾಗ ಹೊರಗೆ ಬರುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶಾರುಖ್ ಖಾನ್, 'ಅಣ್ಣ, ಈಗ ನಾನು ವರ್ಷಗಳ ನಂತರ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದೇನೆ... ಸ್ವಲ್ಪ ದಿನ ಒಳಗೆ ಇರುತ್ತೇನೆ ಎಂದು ಹಾಸ್ಯಭರಿತವಾಗಿ ಉತ್ತರಿಸಿದ್ದಾರೆ. ಎಲ್ಲಕ್ಕಿಂತ ಕುತೂಹಲ ಮೂಡಿಸಿದ ಶಾರುಖ್​ ಅವರ ಉತ್ತರ ಏನೆಂದರೆ, ಪಠಾಣ್ ದಾಖಲೆಗಳನ್ನು ನೋಡಿದ ನಂತರ ನಿಮಗೆ ಏನೆನ್ನಿಸುತ್ತದೆ ಎಂದು ಅಭಿಮಾನಿಯೊಬ್ಬರು ಕೇಳಿದಾಗ ಅದಕ್ಕೆ ಶಾರುಖ್ ಖಾನ್, 'ಹ ಹ್ಹ ಈಗ ಮತ್ತೆ ಹಳ್ಳಿಗೆ ಹೋಗಬೇಕೆಂದು ಅನಿಸುತ್ತಿದೆ' ಎಂದಿದ್ದಾರೆ. ಅವರ ಹಳ್ಳಿ ಯಾವುದು ಎಲ್ಲಿ ಎಂದು ಅಭಿಮಾನಿಗಳು ಕುತೂಹಲ ತಾಳಿದ್ದಾರೆ.

ಇನ್ನು ಒಬ್ಬ ತರ್ಲೆ ನೆಟ್ಟಿಗ, ‘ನನಗೆ ಹುಡುಗಿ ಇಷ್ಟವಿಲ್ಲ, ಸ್ವಲ್ಪ ಟಿಪ್ಸ್ (tios) ಕೊಡಿ’ ಎಂದು ಕೇಳಿದ್ದಾರೆ. ಅದಕ್ಕೆ ಶಾರುಖ್​, ಇದಕ್ಕೆ ಟಿಪ್ಸ್​ ಕೊಡಲು ಟೈಂ ಇಲ್ಲ, ಈಗ ಏನಿದ್ದರೂ ದೇಶದ ಸವಾಲು ಮುಂದಿದೆ ಎಂದಿದ್ದಾರೆ. ಇನ್ನೊಬ್ಬರು, ನೀವು ಬಾಕ್ಸ್ ಆಫೀಸ್‌ನಲ್ಲಿ ಸಲ್ಮಾನ್ ಖಾನ್‌ಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಕ್ಕೆ, ಉತ್ತರಿಸಿದ ಶಾರುಖ್ ಖಾನ್, 'ಸಲ್ಮಾನ್ ಭಾಯ್ (Salman Khan) ಯಾವಾಗಲೂ ಯಂಗ್​. ಅವರು ಯಾವಾಗಲೂ ಶ್ರೇಷ್ಠರು' ಎಂದಿದ್ದಾರೆ.

Shah Rukh Khan: ಟಾಪ್​ 20 ಸಿನಿಮಾ ಲಿಸ್ಟ್​ ರಿಲೀಸ್​: ಶಾರುಖ್​ ಖಾನ್​ಗೆ ಬಿಗ್​ ಶಾಕ್​!

'ಪಠಾಣ್' ಚಿತ್ರದ ಬಗ್ಗೆ ಹೇಳುವುದಾದರೆ, ಈ ಚಿತ್ರವು ಮೊದಲ ಮೂರು ದಿನಗಳಲ್ಲಿ ಭಾರತದಲ್ಲಿ 150 ಕೋಟಿ ರೂ.ಗಿಂತ ಹೆಚ್ಚು ಮತ್ತು ವಿಶ್ವಾದ್ಯಂತ ರೂ. 300 ಕೋಟಿಗೂ ಹೆಚ್ಚು ಗಳಿಸಿದೆ. ಸಿದ್ಧಾರ್ಥ್ ಆನಂದ್ (Siddharth Anand) ನಿರ್ದೇಶನದ 'ಪಠಾಣ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

Scroll to load tweet…
Scroll to load tweet…