ಅಬ್ಬಬ್ಬಾ! ಈ ಸೆಲೆಬ್ರಿಟಿಗಳು ಇಷ್ಟು ಕೋಟಿ ತೆರಿಗೆ ಕಟ್ತಾರಾ? ಟಾಪ್ 22 ತಾರೆಯರು ಇವ್ರೇ ನೋಡಿ
ಅಬ್ಬಬ್ಬಾ! ಈ ಸೆಲೆಬ್ರಿಟಿಗಳು ಇಷ್ಟು ಕೋಟಿ ತೆರಿಗೆ ಕಟ್ತಾರಾ? ಟಾಪ್ 22 ತಾರೆಯರ ಪಟ್ಟಿ ಬಿಡುಗಡೆಯಾಗಿದೆ. ಯಾರಿದ್ದಾರೆ ನೋಡಿ ಲಿಸ್ಟ್‌ನಲ್ಲಿ...
ಸಿನಿಮಾ, ಕ್ರಿಕೆಟ್ ಕ್ಷೇತ್ರದ ಸೆಲೆಬ್ರಿಟಿಗಳು ಎಷ್ಟೆಷ್ಟು ತೆರಿಗೆಯನ್ನು ಈ ವರ್ಷ ಪಾವತಿ ಮಾಡಿದ್ದಾರೆ ಎನ್ನುವ ಲಿಸ್ಟ್ ಬಿಡುಗಡೆಯಾಗಿದೆ. ಇವರು ಪಾವತಿಸುವ ತೆರಿಗೆ ಮೊತ್ತ ಕೇಳಿದ್ರೆ ಸಾಮಾನ್ಯ ಜನರ ತಲೆ ತಿರುಗುವುದಂತೂ ಗ್ಯಾರೆಂಟಿ! ಇವರು ಕಟ್ಟುವ ತೆರಿಗೆಯೇ ಕೋಟಿ ಕೋಟಿಯಲ್ಲಿ ಇರಬೇಕಾದರೆ ಇವರ ಆದಾಯ ಎಷ್ಟಿರಲಿಕ್ಕೆ ಸಾಕು ಎಂದು ತಲೆ ಕೆಡಿಸಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು. ಸದ್ಯ ಟಾಪ್ 22 ಸೆಲೆಬ್ರಿಟಿಗಳ ಪಟ್ಟಿಯನ್ನು ಫಾರ್ಚ್ಯೂನ್ ಇಂಡಿಯಾ ಬಿಡುಗಡೆ ಮಾಡಿದೆ. ಇದರಲ್ಲಿ ಸಿನಿಮಾ ತಾರೆಯರು ಮತ್ತು ಕ್ರಿಕೆಟಿಗರು ಸೇರಿದ್ದಾರೆ. ಈ 22 ಮಂದಿಯರಲ್ಲಿ ಶ್ರೀಮಂತ ಮಹಿಳೆಯರ ಸಂಖ್ಯೆ ಅಂದರೆ ಅತಿ ಹೆಚ್ಚು ಪಾವತಿ ಮಾಡುತ್ತಿರುವ ನಟಿಯರ ಸಂಖ್ಯೆ ಮೂರೇ ಮೂರಾದರೆ, ದಕ್ಷಿಣದ ಸೆಲೆಬ್ರಿಟಿ ಒಬ್ಬರೂ ಈ ಪಟ್ಟಿಯಲ್ಲಿ ಸೇರಿದ್ದಾರೆ.
ಟಾಪ್ 1 ಸ್ಥಾನದಲ್ಲಿ ಇರುವುದು ಬಾಲಿವುಡ್ ಬಾದ್‌ಶಾಹ್ ಎಂದೇ ಫೇಮಸ್ ಆಗಿರೋ ಶಾರುಖ್ ಖಾನ್. ಇವರು ಪಾವತಿಸಿರುವ ತೆರಿಗೆಯ ಮೊತ್ತ 92 ಕೋಟಿ ರೂಪಾಯಿ. ಇವರು ಬಾಲಿವುಡ್ ನಟ ಮಾತ್ರವಲ್ಲದೇ ಐಪಿಎಲ್ ಫಾಂಚೈಸಿ ಕೋಲ್ಕೊತ್ತಾ ನೈಟ್ ರೈಡರ್ಸ್‌ನ ಮಾಲೀಕರೂ ಆಗಿರುವ ಕಾರಣ ಸಹಜವಾಗಿ ಇವರ ಆದಾಯ ಹೆಚ್ಚಿದೆ. ಇನ್ನು ಎರಡನೆಯ ಸ್ಥಾನದಲ್ಲಿ ಇರುವುದು ದಕ್ಷಿಣದ ನಟ. ಹೌದು. ಅವರೇ ಟಾಲಿವುಡ್‌ನ 'ದಳಪತಿ' ವಿಜಯ್, ಇವರು ಪಾವತಿಸಿದ ತೆರಿಯ ಮೊತ್ತ 80 ಕೋಟಿ ರೂಪಾಯಿ. ಮೂರನೆಯ ಮತ್ತು ನಾಲ್ಕನೆಯ ಸ್ಥಾನದಲ್ಲಿ ಸಲ್ಮಾನ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಇದ್ದು, ಇವರು ಪಾವತಿಸಿದ್ದು ಕ್ರಮವಾಗಿ 75 ಕೋಟಿ ರೂ. ಹಾಗೂ 71 ಕೋಟಿ ರೂಪಾಯಿ.
ಕಮೆಂಟೂ ಕೊಟ್ಟು ದುಡ್ಡುನೂ ಕೊಡ್ತಾರೆ! ಜಾಲತಾಣದಿಂದ ತಿಂಗಳಿಗೆ 40 ಲಕ್ಷ ಗಳಿಸ್ತಾಳೆ 23 ವರ್ಷದ ಈಕೆ!
ಐದನೆಯ ಸ್ಥಾನದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದ್ದು, ಪಾವತಿಸಿದ ಕ್ರೀಡಾಪಟು ಇವರು ಎಂದು ಎನಿಸಿಕೊಂಡಿದ್ದಾರೆ. ಇವರು 66 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಮಾಜಿ ಕ್ರಿಕೆಟ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 38 ಕೋಟಿ ರೂ. ತೆರಿಗೆ ಪಾವತಿಸಿದರೆ, ಲಿಸ್ಟ್‌ನ ಮುಂದಿನ ಹೆಸರು ಇರುವುದು ಸಚಿನ್ ತೆಂಡೂಲ್ಕರ್. ಇವರು ಪಾವತಿ ಮಾಡಿದ್ದು 28 ಕೋಟಿ ರೂಪಾಯಿ. ಕ್ರಿಕೆಟ್ ಆಲ್‌ರೌಂಡರ್ ಎಂದೇ ಫೇಮಸ್ ಆಗಿರೋ ಹಾರ್ದಿಕ್ ಪಾಂಡ್ಯ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಕ್ರಮವಾಗಿ 13 ಕೋಟಿ ರೂ. ಹಾಗೂ 10 ಕೋಟಿ ರೂ. ತೆರಿಗೆ ನೀಡಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ 23 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಇನ್ನು ನಾಯಕಿಯರ ವಿಷಯಕ್ಕೆ ಬರುವುದಾದರೆ, ಟಾಪ್ 22ರ ಪಟ್ಟಿಯಲ್ಲಿ ಕರೀನಾ ಕಪೂರ್ - 20 ಕೋಟಿ ರೂ ಪಾವತಿಸುವ ಮೂಲಕ 13ನೇ ಸ್ಥಾನದಲ್ಲಿದ್ದರೆ, ಕಿಯಾರ ಅಡ್ವಾನಿ - 12 ಕೋಟಿ ರೂ. ಪಾವತಿಸುವ ಮೂಲಕ 18ನೇ ಸ್ಥಾನದಲ್ಲಿ ಹಾಗೂ ಕತ್ರಿನಾ ಕೈಫ್ - 11 ಕೋಟಿ ರೂ. ಪಾವತಿಸಿ 19ನೇ ಸ್ಥಾನದಲ್ಲಿದ್ದಾರೆ.
ಯಾರ್‍ಯಾರು ಎಷ್ಟೆಷ್ಟು ತೆರಿಗೆಯನ್ನು ಪಾವತಿ ಮಾಡಿದ್ದಾರೆ ಎಂದು ಇಲ್ಲಿದೆ ನೋಡಿ ಲಿಸ್ಟ್!
1) ಶಾರುಖ್ ಖಾನ್ - 92 ಕೊಟಿ ರೂ.
2) ದಳಪತಿ ವಿಜಯರ್ - 80 ಕೋಟಿ ರೂ.
3) ಸಲ್ಮಾನ್ ಖಾನ್ - 75 ಕೋಟಿ ರೂ.
4) ಅಮಿತಾಭ್ ಬಚ್ಚನ್ - 71 ಕೋಟಿ ರೂ.
5) ವಿರಾಟ್ ಕೊಹ್ಲಿ - 66 ಕೋಟಿ ರೂ.
6) ಅಜಯ್ ದೇವಗನ್ - 42 ಕೋಟಿ ರೂ.
7) ಮಹೇಂದ್ರ ಸಿಂಗ್ ಧೋನಿ - 38 ಕೋಟಿ ರೂ.
8) ರಣಬೀರ್ ಕಪೂರ್ - 36 ಕೋಟಿ ರೂ.
9) ಸಚಿನ್ ತೆಂಡೂಲ್ಕರ್ - 28 ಕೋಟಿ ರೂ.
10) ಹೃತಿಕ್ ರೋಷನ್ - 28 ಕೋಟಿ ರೂ.
11) ಕಪಿಲ್ ಶರ್ಮಾ - 26 ಕೋಟಿ ರೂ.
12) ಸೌರವ್ ಗಂಗೂಲಿ - 23 ಕೋಟಿ ರೂ.
13) ಕರೀನಾ ಕಪೂರ್ - 20 ಕೋಟಿ ರೂ.
14) ಶಾಹಿದ್ ಕಪೂರ್ - 14 ಕೋಟಿ ರೂ.
15) ಮೋಹನ್‌ಲಾಲ್ - 14 ಕೋಟಿ ರೂ.
16) ಅಲ್ಲು ಅರ್ಜುನ್ - 14 ಕೋಟಿ ರೂ.
17) ಹಾರ್ದಿಕ್ ಪಾಂಡ್ಯ - 13 ಕೋಟಿ ರೂ.
18) ಕಿಯಾರ ಅಡ್ವಾನಿ - 12 ಕೋಟಿ ರೂ.
19) ಕತ್ರಿನಾ ಕೈಫ್ - 11 ಕೋಟಿ ರೂ.
20) ಪಂಕಜ್ ತ್ರಿಪಾಠಿ - 11 ಕೋಟಿ ರೂ.
21) ಆಮೀರ್ ಖಾನ್- 10 ಕೋಟಿ ರೂ.
22) ರಿಷಬ್ ಪಂತ್ - 10 ಕೋಟಿ ರೂ.