Asianet Suvarna News Asianet Suvarna News

ಶಾರುಖ್​ ಖಾನ್​- ಅಕ್ಷಯ್​ ಕುಮಾರ್​ರನ್ನು ಒಂದು ಮಾಡಿದ ಪ್ರಧಾನಿ ಪ್ರಮಾಣ ವಚನ ಕಾರ್ಯಕ್ರಮ!

ಕೆಲ ದಶಕಗಳಿಂದ ದೂರವೇ ಉಳಿದಿದ್ದ ನಟರಾದ ಶಾರುಖ್​ ಖಾನ್​- ಅಕ್ಷಯ್​ ಕುಮಾರ್​ರನ್ನು ಒಂದು ಮಾಡಿದೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮ! ಆಗಿದ್ದೇನು?
 

Shah Rukh Khan and Akshay Kumar Break Internet Share Warm Hug at PM Modis Oaths suc
Author
First Published Jun 10, 2024, 6:06 PM IST

ಬಾಲಿವುಡ್​​ ನಟರಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ 1990 ರ ದಶಕದ ಆರಂಭದಿಂದಲೂ ಚಿತ್ರರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸುತ್ತಿರುವವರು.  ಆದರೆ ಇಬ್ಬರೂ ಒಟ್ಟಾಗಿ ನಟಿಸಿರುವ ಚಿತ್ರಗಳು ಬಹಳ ಕಡಿಮೆ.  ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ ದಿಲ್ ತೋ ಪಾಗಲ್ ಹೈ ಚಿತ್ರದಲ್ಲಿ ಅಕ್ಷಯ್​ ಕೂಡ ಕಾಣಿಸಿಕೊಂಡರು. ಈ ಚಿತ್ರದಲ್ಲಿ  ಶಾರುಖ್ ಖಾನ್ ಮತ್ತು ಅಕ್ಷಯ್​ ಕುಮಾರ್​ ಇಬ್ಬರೂ ಮಾಧುರಿ ದೀಕ್ಷಿತ್​ ಅವರನ್ನು ಪ್ರೀತಿಸುವ ರೋಲ್​ ಇದೆ.  ಯಶ್ ಚೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ಕರಿಷ್ಮಾ ಕಪೂರ್ ಕೂಡ ನಟಿಸಿದ್ದಾರೆ ಮತ್ತು 1997 ರ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿತ್ತು. ಇಷ್ಟಾದರೂ, ಇಬ್ಬರೂ ಒಟ್ಟಾಗಿ ನಟಿಸಿಯೇ ಇಲ್ಲ.  ಅವರಿಬ್ಬರ ನಡುವಿನ ಭಿನಾಭಿಪ್ರಾಯಗಳ ಕುರಿತು ಬಿ-ಟೌನ್​ನಲ್ಲಿ ಗುಸುಗುಸು ಇದ್ದೇ ಇದೆ.  ಸದಾ ಇಬ್ಬರೂ ಒಟ್ಟಾಗಿ ಗುರುತಿಸಿಕೊಂಡಿದ್ದು ಕಮ್ಮಿಯೇ. ಇವರಿಬ್ಬರ ಸಂಬಂಧ ಅಷ್ಟಾಗಿ ಚೆನ್ನಾಗಿಲ್ಲ ಎಂದೇ ಇದರಿಂದ ಹೇಳಲಾಗುತ್ತದೆ.   

  ಅಕ್ಷಯ್ ಅಭಿನಯದ ಹೇ ಬೇಬಿ ಚಿತ್ರದ ಒಂದು ಹಾಡಿನಲ್ಲಿ ಶಾರುಖ್ ಕಾಣಿಸಿಕೊಂಡರು ಮತ್ತು ಅಕ್ಷಯ್ ಶಾರುಖ್ ನೇತೃತ್ವದ ಓಂ ಶಾಂತಿ ಓಂ ಚಿತ್ರದಲ್ಲಿ ಕಾಣಿಸಿಕೊಂಡರು. ಅಷ್ಟೇ ಬಿಟ್ಟರೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ. ಈ ಬಗ್ಗೆ ಒಮ್ಮೆ ಪತ್ರಕರ್ತರು ಶಾರುಖ್​ ಖಾನ್​ ಅವರಿಗೆ ಪ್ರಶ್ನೆ ಕೇಳಿಯೇ ಬಿಟ್ಟಿದ್ದರು.  ಶಾರುಖ್ ಮತ್ತು ಅಕ್ಷಯ್ ಒಟ್ಟಿಗೆ ಏಕೆ ಸಿನಿಮಾ ಮಾಡಿಲ್ಲ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ಶಾರುಖ್​ ಹಾರಿಕೆ ಉತ್ತರ ಕೊಟ್ಟಿದ್ದರು.  “ಇದಕ್ಕೆ ನಾನೇನು ಹೇಳಲಿ? ನಾನು ಅವರಷ್ಟು ಬೇಗ ಏಳುವುದಿಲ್ಲ. ಅಕ್ಷಯ್ ಎಚ್ಚರವಾದಾಗ ನಾನು ಮಲಗುತ್ತೇನೆ. ಅವರ ದಿನ ಬೇಗನೆ ಪ್ರಾರಂಭವಾಗುತ್ತದೆ. ನಾನು ಕೆಲಸ ಮಾಡಲು ಪ್ರಾರಂಭಿಸುವ ಹೊತ್ತಿಗೆ, ಅವರು ಮನೆಗೆ ಹೋಗುತ್ತಾರೆ. ಆದ್ದರಿಂದ, ಅವರು ಹೆಚ್ಚು ಗಂಟೆಗಳ ಕೆಲಸವನ್ನು ಹಾಕಬಹುದು. ನಾನು ರಾತ್ರಿಯ ವ್ಯಕ್ತಿ. ನನ್ನಂತೆ ರಾತ್ರಿಯಲ್ಲಿ ಶೂಟಿಂಗ್ ಮಾಡಲು ಹೆಚ್ಚು ಜನರು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. 

ಸಿನಿಮಾ ಸೆಲೆಬ್ರಿಟಿಗಳ ನಾಟಕದ ಮಾತು ಬಟಾಬಯಲು ಮಾಡಿದ ಬಾಲಿವುಡ್​ ನಟಿ ಉರ್ಫಿ ಜಾವೇದ್​!

“ಅಕ್ಷಯ್ ಜೊತೆ ನಟಿಸಲು ಖುಷಿಯಾಗುತ್ತದೆ. ಆದರೆ ನಾವು ಸೆಟ್‌ನಲ್ಲಿ ಎಂದಿಗೂ ಭೇಟಿಯಾಗುವುದಿಲ್ಲ. ಅವರು ಸೆಟ್‌ನಿಂದ ಹೊರಹೋಗುತ್ತಾರೆ ಮತ್ತು ನಾನು ಬರುತ್ತೇನೆ. ನಾನು ಅಕ್ಷಯ್ ಮತ್ತು ಅವನೊಂದಿಗೆ ಕೆಲಸ ಮಾಡಲು ಬಯಸುತ್ತೇನೆ, ಆದರೆ ನಮ್ಮ ಸಮಯವು ಹೊಂದಿಕೆಯಾಗುವುದಿಲ್ಲ ಎಂದಿದ್ದರೂ ಇದು ಹಾರಿಕೆ ಉತ್ತರ ಎಂದೇ ಹೇಳಲಾಗಿತ್ತು. ಒಟ್ಟಿನಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇರುವುದು ಸ್ಪಷ್ಟವಾಗಿತ್ತು. ಆದರೆ ಇದೀಗ ನಿನ್ನೆ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಈ ಜೋಡಿ ಒಂದಾಗಿದೆ. ಇಬ್ಬರೂ ಪರಸ್ಪರ ತಬ್ಬಿಕೊಂಡಿರುವ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇಬ್ಬರ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. 


 ಶಾರುಖ್​ ಖಾನ್​ ಅವರು ಮುಖೇಶ್​ ಅಂಬಾನಿ ಮತ್ತು ಅನಂತ್​ ಅಂಬಾನಿ ಜತೆ ಆಗಮಿಸಿದರು. ಅಲ್ಲಿಗೆ ಅದಾಗಲೇ ಅಕ್ಷಯ್​ ಕುಮಾರ್​ ಬಂದಿದ್ದರು. ಇಬ್ಬರೂ ಹಗ್​ ಮಾಡಿಕೊಂಡಿದ್ದು, ಅದರ ಫೋಟೋ ವೈರಲ್​ ಆಗಿದೆ. ಈ ಫೋಟೋಗೆ ಸಹಸ್ರಾರು ಕಮೆಂಟ್​ಗಳು ಬರುತ್ತಿವೆ. ಅವರಿಬ್ಬರು ತಬ್ಬಿಕೊಂಡ ಕ್ಷಣವನ್ನು ಅತ್ಯುತ್ತಮ ಕ್ಷಣ ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ. ಇಬ್ಬರನ್ನೂ  ಒಂದೇ ಫ್ರೇಮ್​ನಲ್ಲಿ ನೋಡಿರುವುದೇ ಧನ್ಯ ಎನ್ನುತ್ತಿದ್ದಾರೆ. ಪ್ರಧಾನಿ ಇಬ್ಬರನ್ನೂಒಂದಾಗಿಸಿದರು ಎಂದು ಹಲವರು ಹೇಳುತ್ತಿದ್ದಾರೆ. ಹಗ್​ ಆಫ್​ ದಿ ಇಯರ್​ ಎಂದು ಇದನ್ನು ಬಣ್ಣಿಸಲಾಗುತ್ತಿದೆ.  ‘ಬಾಲಿವುಡ್​ನ ಕಿಂಗ್ ಮತ್ತು ಕಿಲಾಡಿ ಒಂದಾಗಿದ್ದಾರೆ’ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ. 
 

ಒಳ್ಳೇ ಕಾಲ ಬಂದೈತೆ ಕಣ್ಲಾ! ಎನ್ನುತ್ತಲೇ ಕಾರಣ ಕೊಟ್ಟ 'ಪುಟ್ಟಗೌರಿ'.. ವೆರಿ ಟ್ರೂ ಎಂದ ಅಮೃತಧಾರೆ ಮಹಿಮಾ!

Latest Videos
Follow Us:
Download App:
  • android
  • ios