Asianet Suvarna News Asianet Suvarna News

Shakuntalam Trailer; ಶಾಕುಂತಲೆಯಾಗಿ ಕನ್ನಡಕ್ಕೆ ಬಂದ ಸಮಂತಾ; ಅದ್ಭತ ಎಂದ ಫ್ಯಾನ್ಸ್

ಸಮಂತಾ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸ್ಯಾಮ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 

Shaakuntalam trailer: Samantha Ruth Prabhu looks ethereal in this film sgk
Author
First Published Jan 9, 2023, 5:07 PM IST

ಸೌತ್ ಸುಂದರಿ ಸಮಂತಾ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕೇವಲ ಫಸ್ಟ್ ಲುಕ್ ಮೂಲಕವೇ ಭಾರಿ ಕುತೂಹಲ ಮೂಡಿಸಿದ್ದ ಶಾಕುಂತಲಂ ಸಿನಿಮಾ ಈಗಾಗ ಟ್ರೈಲರ್ ಮೂಲಕ ಅಭಿಮಾನಿಗಲ ಮುಂದೆ ಬಂದಿದೆ. ಇಂದು ನಡೆದ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಸ್ಯಾಮ್ ಕೂಡ ಭಾಗಿಯಾಗಿದ್ದರು. ಅಂದಹಾಗೆ ಸಮಂತಾ Myositis ಕಾಯಿಲೆಯಿಂದ ಬಳಲುತ್ತಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಲಣದಿಂದನೂ ದೂರ ಇದ್ದ ಸಮಂತಾ ಇದೀಗ ಇತ್ತೀಚಿಗಷ್ಟೆ  ವಾಪಾಸ್ ಆಗಿದ್ದರು. ಇದೀಗ ಸಮಂತಾ ಶಾಕುಂತಲೆಯಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೇಲರ್ ಅಭಿಮಾನಿಗಳ ಹೃದಯ ಗೆದ್ದಿದೆ. ಸಮಂತಾ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. 

ನಿರ್ದೇಶಕ ಗುಣಶೇಖರ್ ಸಾರಥ್ಯದಲ್ಲಿ ಮೂಡಿ ಬಂದಿರುವ ಶಾಕುಂತಲಂ ಸಿನಿಮಾದ ಟ್ರೈಲರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಮಂತಾ ಅದ್ಭುತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.  ಸಮಂತಾಗೆ ಜೋಡಿಯಾಗಿ ದೇವ್ ಮೋಹನ್ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಇದು ಕಾಳಿದಾಸ ಅವರ ಅಭಿಜ್ಞಾನ ಶಾಕುಂತಲ ಆಧಾರಿತ ಸಿನಿಮಾವಾಗಿದೆ. ಈ ಸಿನಿಮಾ ಶಾಕುಂತಲಾ ಮತ್ತು ರಾಜ ದುಶ್ಯಂತ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ಸಮಂತಾ ಮತ್ತು ದೇವ್ ಮೋಹನ್ ಜೊತೆಗೆ ಕಬೀರ್ ಬೇಡಿ, ಪ್ರಕಾಶ್ ರಾಜ್, ಸಚಿನ್, ಜಿಶು ಸೇನ್‌ಗುಪ್ತ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.  ಈ ಸಿನಿಮಾ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದ್ದು ಟ್ರೈಲರ್ ಎಲ್ಲಾ ಭಾಷೆಯಲ್ಲಿ ರಿಲೀಸ್ ಅಗಿದೆ. 

Shaakuntalam; ಅನಾರೋಗ್ಯದ ನಡುವೆಯೂ ಶಾಕುಂತಲೆಯಾಗಿ ಎಂಟ್ರಿ ಕೊಡ್ತಿದ್ದಾರೆ ಸಮಂತಾ; ರಿಲೀಸ್ ಡೇಟ್ ಬಹಿರಂಗ

ಅಂದಹಾಗೆ ಬಹನಿರೀಕ್ಷೆಯ ಶಾಕುಂತಲಂ ಸಿನಿಮಾ ಫೆಬ್ರವರಿ 17ರಂದು ತೆರೆಗೆ ಬರುತ್ತಿದೆ. ಈ ಬಗ್ಗೆ ಸಿನಿಮಾತಂಡ ಹೊಸ ವರ್ಷಕ್ಕೆ ಅನೌನ್ಸ್ ಮಾಡುವ ಮೂಲಕ ಸಂತಸದ ಸುದ್ದಿ ನೀಡಿದ್ದರು.  'ಎಪಿಕ್ ಲವ್ ಸ್ಟೋರಿ ಶಾಕುಂತಲಂ ಅನ್ನು ಫೆಬ್ರವರಿ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ' ಎಂದು ಹೇಳಿದ್ದರೆು. ವಿಶೇಷ ಎಂದರೆ ಈ ಸಿನಿಮಾ 3 ಡಿಯಲ್ಲೂ ಬರ್ತಿದೆ. 

 ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕಳೆದ ವರ್ಷ ನವೆಂಬರ್ ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿತ್ತು. ಇನ್ನು ಮೂಲಗಳ ಪ್ರಕಾರ ಸಿನಿಮಾ ನೋಡಿದ ಸಮಂತಾ ಅವರಿಗೆ ಇಷ್ಟವಾಗದ ಕಾರಣ ರಿ ವರ್ಕ್ ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಹಾಗಾಗಿ ರಿಲೀಸ್ ತಡವಾಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಕೊನೆಗೂ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕೈಯಲ್ಲಾದಷ್ಟು ಕಂಟ್ರೋಲ್ ಮಾಡೋಣ ಎಂದ ಸಮಂತಾ; ವರ್ಷದ ಕೊನೆ ಪೋಸ್ಟ್‌ ವೈರಲ್

ಸಮಂತಾ ಕೊನೆಯದಾಗಿ ಯಶೋದಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅನಾನರೋಗ್ಯದ ಬಳಿಕ ರಿಲೀಸ್ ಆದ ಸಮಂತಾ ಅವರ ಮೊದಲ ಸಿನಿಮಾವಾಗಿದೆ. ಆರೋಗ್ಯ ಸರಿ ಇಲ್ಲದಿದ್ದರೂ ಸಿನಿಮಾ ರಿಲೀಸ್ ಸಮಯದಲ್ಲಿ ಪ್ರಮೋಷನ್ ಮಾಡಿದ್ದರು. ಸಂದರ್ಶನಗಳನ್ನು ನೀಡಿದ್ದರು. ಇದೀಗ ಚೇತರಿಸಿಕೊಳ್ಳುತ್ತಿರುವ ಸಮಂತಾ ಮತ್ತೆ ಬ್ಯಾಕ್ ಆಗುತ್ತಿದ್ದಾರೆ. ಸ್ಯಾಮ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುವುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

Follow Us:
Download App:
  • android
  • ios