ಬಾಲಿವುಡ್‌ ಮೋಸ್ಟ್‌ ಡಿಮ್ಯಾಂಡಿಂಗ್ ಕೋರಿಯೋಗ್ರಾಫರ್‌ ಗಣೇಶ್‌ ಆಚಾರ್ಯ ಸುಮಾರು 150-200 ಚಿತ್ರಗಳ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಿಚ್ಚ ಸುದೀಪ್‌ ಅಭಿನಯದ 'ಪೈಲ್ವಾನ್‌' ಚಿತ್ರಕ್ಕೂ ಅದ್ಭುತವಾಗಿ ನೃತ್ಯ ನಿರ್ದೇಶಿಸಿ, ಸೈ ಎನಿಸಿಕೊಂಡಿದ್ದಾರೆ. ಇಂಥ ಅದ್ಭುತ ಕಲಾವಿದನ ವಿರುದ್ಧ ಕೇಳಿ ಬರುತ್ತಿರುವ ಲೈಂಗಿಕ ಆರೋಪಗಳು ಮಾತ್ರ ನಿಂತಿಲ್ಲ. 

ಈ ಮೊದಲು ವಿದ್ಯಾರ್ಥಿನಿಯಾಗಿದ್ದು, ಇದೀಗ ಸಹಾಯಕಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಡ್ಯಾನ್ಸರ್ ಒಬ್ಬರು ಗಣೇಶ್ ಅಶ್ಲೀಲ ಚಿತ್ರಗಳನ್ನು ನೋಡುವಂತೆ ಒತ್ತಾಯಿಸುತ್ತಾರೆಂದು ಆರೋಪಿಸಿ, ಇತ್ತೀಚೆಗೆ ದೂರು ದಾಖಲಿಸಿದ್ದರು. ಇದೀಗ ಮತ್ತದೇ ರೀತಿಯ ದೂರನ್ನು ಮತ್ತೊಬ್ಬ ವಿದ್ಯಾರ್ಥಿನಿ ದಾಖಲಿಸಿದ್ದು, ಈ ಖ್ಯಾತ ಡ್ಯಾನ್ಸ್ ಮಾಸ್ಟರ್ ಏಕೆ ಹೀಗೆ ಮಾಡುತ್ತಾರೆಂಬುವುದೇ ಅರ್ಥವಾಗುತ್ತಿಲ್ಲ?

ಒಂದು ಮುಗೀತು ಎನ್ನುವಷ್ಟರಲ್ಲಿ ಮತ್ತೊಂದು ಹೊಸ ಆರೋಪಗಳು ಕೇಳಿ ಬರುತ್ತಿರುವ ಗಣೇಶ್ ವೃತ್ತಿ ಜೀವನದಲ್ಲಿ ಏನಾಗುತ್ತಿದೆ ಎಂಬುವುದೇ ಅರ್ಥವಾಗುತ್ತಿಲ್ಲ. ಈ ಪ್ರತಿಭಾನ್ವಿತ ನೃತ್ಯ ಸಂಯೋಜಕನ ಸಂಸ್ಥೆಯಲ್ಲೇ ಸೀನಿಯರ್‌ ಬ್ಯಾಕ್‌ ಗ್ರೌಂಡ್‌ ಡ್ಯಾನ್ಸರ್‌ ಆಗಿ  ಕಾರ್ಯ ನಿರ್ವಹಿಸುತ್ತಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬರುತ್ತಿರುವುದು ಇದೀಗ ಹೊಸ ಸೇರ್ಪಡೆ. ಈ ಡ್ಯಾನ್ಸರ್ ನ್ಯಾಯ ಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ.

'2009-10ರಲ್ಲಿ ನಾನು ಅವರೊಟ್ಟಿಗೆ ಕೆಲಸ ಮಾಡುತ್ತಿದ್ದೆ. ಆಂಧೇರಿಯಲ್ಲಿರುವ ಮನೆಯನ್ನೇ ಡ್ಯಾನ್ಸ್‌ ಕ್ಲಾಸ್‌ ಮಾಡಿಕೊಂಡಿದ್ದರು. ಆಫೀಸಿನಲ್ಲಿ ಕಂಪ್ಯೂಟರ್‌ ಹಾಗೂ ಒಂದು ಬೆಡ್‌ ರೂಂ ಇತ್ತು. ಒಂದು ದಿನ ನನಗೆ ಕರೆ ಮಾಡಿ, ಚಿತ್ರವೊಂದರಲ್ಲಿ ನಿನಗೆ ಅವಕಾಶ ಸಿಕ್ಕಿದೆ ಆಫೀಸಿಗೆ ಈ ಕೂಡಲೇ ಬಾ ಎಂದರು. ಆಫೀಸಿಗೆ ಹೋದಾಗ ಗಣೇಶ್‌ ಕಂಪ್ಯೂಟರ್‌ನಲ್ಲಿ ಪೋರ್ನ್‌ ವಿಡಿಯೋ ನೋಡುತ್ತಿದ್ದರು ನನ್ನ ಕೈ ಹಿಡಿದು ತಕ್ಷಣ ಬೆಡ್‌ ರೂಮಿಗೆ ಎಳೆದುಕೊಂಡರು. ನನ್ನ ಹೊಟ್ಟೆಯನ್ನು ಮುಟ್ಟಿದ್ದರು. ಹೀಗೆಲ್ಲಾ ಮಾಡಿದರೆ ಪೊಲೀಸರಿಗೆ ದೂರು ಕೊಡುವೆ ಎಂದು ಹೆದರಿಸಿ, ಅಲ್ಲಿಂದ ಹೊರ ಬಂದೆ' ಎಂದು ಮಹಿಳೆ ಆರೋಪಿಸಿದ್ದಾರೆ.

ಕಿಚ್ಚನ 'ಪೈಲ್ವಾನ್‌' ನೃತ್ಯ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

ಈ ಹಿಂದೆ ಮತ್ತೊಬ್ಬ ವಿದ್ಯಾರ್ಥಿನಿಯೂ ಗಣೇಶ್‌ ಪೋರ್ನ್‌ ವಿಡಿಯೋ ನೋಡುವಂತೆ ಒತ್ತಾಯಿಸುತ್ತಿದ್ದರು. ಇಲ್ಲವಾದರೆ ಹಣ ನೀಡುವಂತೆ ಬ್ಲ್ಯಾಕ್‌ ಮೇಲ್‌ ಮಾಡುತ್ತಾರೆಂದು ದೂರು ಸಲ್ಲಿಸಿದ್ದಳು.