ಬಿ-ಟೌನ್‌ನಲ್ಲಿ ಹೆಚ್ಚು ಡಿಮ್ಯಾಂಡ್‌ ಇರುವ ಕೊರಿಯೋಗ್ರಾಫರ್‌ ಗಣೇಶ್‌ ಆಚಾರ್ಯ ಮೂಲತಃ ಚೆನ್ನೈನವರು. 12ನೇ ವಯಸ್ಸಿಗೆ ನೃತ್ಯ ಕಲಿತು, 19ನೇ ವಯಸ್ಸಿಗೆ ನೃತ್ಯ ಶಾಲೆ ತೆರೆದ ಗಣೇಶ್ ತಮ್ಮ ಸಂಸ್ಥೆಯಿಂದ ಮುಂಬೈ ಸ್ಲಂ ಮಕ್ಕಳಿಗೆ ಫ್ರೀ ಡ್ಯಾನ್ಸ್‌ ಹೇಳಿಕೊಟ್ಟಿದ್ದಾರೆ. ಇದರಿಂದಾನೇ ಎಷ್ಟೋ ಮಕ್ಕಳು ತಮ್ಮ ಜೀವನ ನಿರೂಪಿಸಿಕೊಂಡಿದ್ದಾರೆ. 

ದೇಹವನ್ನು ಇಂಚಿಂಚೂ ನೋಡಬೇಕೆಂದಿದ್ದ ನಿರ್ದೇಶಕ: ನಟಿ ಆರೋಪ

ಗಣೇಶ್‌ ಶಾಲೆಯಲ್ಲೇ ನೃತ್ಯ ವಿದ್ಯಾರ್ಥಿನಿಯಾಗಿದ್ದ ಮಹಿಳೆಯೊಬ್ಬಳು ಇದೀಗ ಇರವರಿಗೆ ಸಹಾಯಕ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಗಣೇಶ್‌ ಕೆಲವು ದಿನಗಳಿಂದ ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ ಮಾಡುತ್ತಿದ್ದಾರೆ, ಎಂದು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಈ ಮಹಿಳೆ. ದೂರು ದಾಖಲಿಸಿಕೊಂಡ ಪೊಲೀಸರು ಗಣೇಶ್‌ ಅವರ ವಿಚಾರಣೆ ನಡೆಸುತ್ತಿದ್ದಾರೆ. 

ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ; ಮತ್ತೆ ಕೋರ್ಟ್ ಮೆಟ್ಟಿಲೇರಿದ ತನುಶ್ರೀ ದತ್ತಾ

ಚಿತ್ರರಂಗದಲ್ಲಿ ಅವಕಾಶಗಳನ್ನು ಹೆಚ್ಚೆಚ್ಚು ಗಿಟ್ಟಿಸಿಕೊಳ್ಳುತ್ತಿರುವ ಮಹಿಳೆಗೆ ಕೆಲವು ದಿನಗಳಿಂದ ಕಮಿಷನ್‌ ಕೊಡುವಂತೆಯೂ ಗಣೇಶ್‌ ಒತ್ತಾಯಿಸುತ್ತಿದ್ದಾರಂತೆ. ಒಂದು ವೇಳೆ ಹಣ ನೀಡದಿದ್ದರೆ ಪೋರ್ನ್‌ ವಿಡಿಯೋ ನೋಡಬೇಕು ಎಂದು ಹೇಳುತ್ತಿದ್ದಾರೆಂದು, ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆ ಗಣೇಶ್‌ ವಿರುದ್ಧ ಸರೋಜ್‌ ಖಾನ್‌ ಹಾಗೂ ತನುಶ್ರೀ ದತ್ತಾ ಸಹ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 

ಕಿಚ್ಚ ಸುದೀಪ್‌ ಅಭಿನಯದ 'ಪೈಲ್ವಾನ್' ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ' ಕೆಜಿಎಫ್‌ ಚಾಪ್ಟರ್‌-1' ಚಿತ್ರಕ್ಕೆ ಗಣೇಶ್‌ ಡ್ಯಾನ್ಸ್‌ ಕೊರಿಯೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.