Satish Kaushik ಸಾವಿಗೆ ಭಾರಿ ಟ್ವಿಸ್ಟ್: ನನ್ನ ಪತಿಯೇ ಕೊಲೆ ಮಾಡಿದ್ದು ಎಂದ ಮಹಿಳೆ!
ಇದೇ 9ರಂದು ನಿಧನರಾದ ಹಿರಿಯ ನಟ-ನಿರ್ದೇಶಕ ಸತೀಶ್ ಕೌಶಿಕ್ ಅವರ ಸಾವಿಗೆ ಭಾರಿ ಟ್ವಿಸ್ಟ್ ಸಿಕ್ಕಿದ್ದು, ತಮ್ಮ ಪತಿಯೇ ಅವರನ್ನು ದುಡ್ಡಿಗಾಗಿ ಕೊಲೆ ಮಾಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಏನಿದು ವಿಷಯ?
ಹಿರಿಯ ನಟ-ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಅವರು ಇದೇ 9ರಂದು ನಿಧನರಾಗಿದ್ದಾರೆ. ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು, ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು ಎಂದೇ ಹೇಳಲಾಗಿತ್ತು. ಆದರೆ ಇದರ ಬೆನ್ನಲ್ಲೇ ಸಾವಿನ ಕುರಿತು ಹಲವಾರು ಸಂಶಯಗಳು ಸುತ್ತಾಡುತ್ತಿವೆ. ಇತ್ತೀಚೆಗೆ ಸತೀಶ್ ಅವರು ಹೋಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲಿಯೇ ಏನೋ ಆಗಿದೆ ಎಂಬ ಸಂದೇಹ ವ್ಯಕ್ತಪಡಿಸಿದ್ದ ಪೊಲೀಸರು, ಹೋಳಿ ಪಾರ್ಟಿ ಆಯೋಜಿಸಿದ್ದ ಫಾರ್ಮ್‌ಹೌಸ್‌ಗೆ ನಿನ್ನೆ ಭೇಟಿ ನೀಡಿದ್ದರು. ದಕ್ಷಿಣ ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ಸತೀಶ್ ಅವರ ಸ್ನೇಹಿತ ಆಯೋಜಿಸಿದ್ದ ಪಾರ್ಟಿಯ ಸ್ಥಳಕ್ಕೆ ಹೋಗಿದ್ದ ಪೊಲೀಸರು ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದು, ಫಾರ್ಮ್‌ಹೌಸ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ. ಆದರೆ ಕುತೂಹಲ ಎಂದರೆ ಹೋಳಿ ಪಾರ್ಟಿಯಲ್ಲಿ ಸತೀಶ್ ಕೌಶಿಕ್ ಭಾಗವಹಿಸಿದ್ದ ಫಾರ್ಮ್‌ಹೌಸ್ ಮಾಲೀಕರು ಪರಾರಿಯಾಗಿದ್ದು, ಪೊಲೀಸರ ಸಂದೇಹ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಇದರ ನಡುವೆಯೇ ಈಗ ಮತ್ತಷ್ಟು ತಿರುವು ಈ ಸಾವಿನ ಪ್ರಕರಣ ಪಡೆದುಕೊಳ್ಳುತ್ತಿದೆ. ಅದೇನೆಂದರೆ ದೆಹಲಿ ಮೂಲದ ಮಹಿಳೆಯೊಬ್ಬರು ಸತೀಶ್ ಅವರದ್ದು ಸಹಜ ಸಾವಲ್ಲ, ಕೊಲೆ ಎಂದು ಆರೋಪ ಮಾಡಿದ್ದು, ಅದು 15 ಕೋಟಿ ರೂ.ಗಳಿಗಾಗಿ ನಡೆದ ಕೊಲೆಯಾಗಿದೆ ಎಂದು ಪೊಲೀಸರಲ್ಲಿ ದೂರಿದ್ದಾರೆ! ಈ ಮಹಿಳೆ ದೆಹಲಿ ಮೂಲದ ಉದ್ಯಮಿಯೊಬ್ಬರ ಪತ್ನಿ. ಕುತೂಹಲದ ವಿಷಯ ಏನೆಂದರೆ, ಅವರು ತಮ್ಮ ಪತಿಯ ಮೇಲೆಯೇ ಕೊಲೆ ಆರೋಪ ಹೊರಿಸಿದ್ದಾರೆ! 'ಸತೀಶ್ ಅವರು ನನ್ನ ಪತಿಗೆ ದುಬೈನಲ್ಲಿ (Dubai) ಹೂಡಿಕೆ ಮಾಡಲು 15 ಕೋಟಿ ರೂ. ನೀಡಿದ್ದರು. ಈಗ ಅದನ್ನವರು ವಾಪಸ್ ಕೇಳುತ್ತಿದ್ದರು. ಆದರೆ ನನ್ನ ಪತಿ ಅದನ್ನು ತಿರುಗಿಸಲಿಲ್ಲ, ಬದಲಿಗೆ ಕೆಲವು ಮಾತ್ರೆಗಳನ್ನು ನೀಡಿ, ಸತೀಶ್ ಅವರನ್ನು ಕೊಲೆ ಮಾಡಿದ್ದಾರೆ' ಎಂದು ದೆಹಲಿ ಪೊಲೀಸ್ ಕಮಿಷನರ್‌ಗೆ (Police Commissioner) ಮಹಿಳೆ ದೂರಿದ್ದಾರೆ! ಇದೀಗ ಪೊಲೀಸರಿಗೆ ಇನ್ನಷ್ಟು ಸಂಶಯ ಬಲವಾಗಿದೆ. ಅದೇನೆಂದರೆ ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ನಡೆದ ಹೋಳಿ ಆಚರಣೆ ವೇಳೆ ಸಿಕ್ಕ ಔಷಧಿಗಳಿಗೂ ಮಹಿಳೆ ಮಾಡುತ್ತಿರುವ ಆರೋಪಕ್ಕೂ ಹೋಲಿಕೆಯಾಗುವಂತೆ ಕಾಣಿಸುತ್ತಿದೆ.
ಸತೀಶ್ ಕೌಶಿಕ್ ಸಾವಿಗೆ ಟ್ವಿಸ್ಟ್: ಹೋಳಿ ಪಾರ್ಟಿ ಸ್ಥಳದಲ್ಲಿ ಔಷಧ ಪತ್ತೆ, ಫಾರ್ಮ್ ಹೌಸ್ ಮಾಲೀಕ ಪರಾರಿ!
ಅಷ್ಟಕ್ಕೂ ಈ ಮಹಿಳೆ, ದೆಹಲಿ ಮೂಲದ ಉದ್ಯಮಿಯನ್ನು (Businessman) 2019ರಲ್ಲಿ ವಿವಾಹವಾಗಿದ್ದರು. ಸತೀಶ್ ಕೌಶಿಕ್ ಅವರನ್ನು ಉದ್ಯಮಿಯು ತಮ್ಮ ಪತ್ನಿಗೆ ಪರಿಚಯಿಸಿದ್ದರು. ಆಗಾಗ ದೆಹಲಿ ಮತ್ತು ದುಬೈನಲ್ಲಿ ಇವರ ಭೇಟಿಯಾಗುತ್ತಿತ್ತು ಎಂದು ಆ ಮಹಿಳೆ ಹೇಳಿದ್ದಾರೆ. '2022ರ ಆಗಸ್ಟ್‌ನಲ್ಲಿ ದುಬೈಗೆ ಭೇಟಿ ನೀಡಿದ್ದ ಸತೀಶ್ ಕೌಶಿಕ್ ಅವರು ನನ್ನ ಪತಿಗೆ 15 ಕೋಟಿ ರೂ.ಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ನನ್ನ ಪತಿ ಮತ್ತು ಸತೀಶ್ ಕೌಶಿಕ್ ಅವರ ನಡುವೆ ವಾಗ್ವಾದ ನಡೆದಿತ್ತು. ಆಗ ನಾನುಅಲ್ಲಿಯೇ ಇದ್ದೆ. ನನಗೆ ಹಣದ ಅವಶ್ಯಕತೆ ಇದೆ. ನಾನು 15 ಕೋಟಿ ರೂ.ಗಳನ್ನು ನೀಡಿ 3 ವರ್ಷ ಆಗಿದೆ. ಇನ್ನೂ ನೀನು ವಾಪಸ್ ಕೊಡುತ್ತಿಲ್ಲ, ನಾನು ಮೋಸ ಹೋಗಿದ್ದೇನೆ ಎನಿಸುತ್ತಿದೆ. ನನ್ನ ಹಣ ವಾಪಸ್ ಕೊಡು ಎಂದು ಸತೀಶ್ ಹೇಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೆ. ಆದರೆ ನನ್ನ ಪತಿಗೆ ಅದನ್ನು ತಿರುಗಿಸುವ ಮನಸ್ಸು ಇರಲಿಲ್ಲ. ಅದಕ್ಕಾಗಿಯೇ ಕೊಲೆ ಮಾಡಿದ್ದಾರೆ' ಎಂದು ಮಹಿಳೆ ಹೇಳಿದ್ದಾರೆ.
ಹೋಳಿ ಪಾರ್ಟಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಕೂಡ ಇರುವುದಾಗಿ ಮಹಿಳೆ ತಿಳಿಸಿದ್ದಾರೆ. ಸತೀಶ್ ಅವರ ನಿಧನದ ಬಗ್ಗೆ ನನಗೆ ತುಂಬ ಅನುಮಾನ ಇದೆ. ಹಣವನ್ನು ವಾಪಸ್ ನೀಡಬಾರದೆಂಬ ಉದ್ದೇಶದಿಂದ ನನ್ನ ಪತಿಯೇ ತನ್ನ ಸಹಾಯಕರೊಂದಿಗೆ ಸೇರಿಕೊಂಡು ಯಾವುದೋ ವಿಷಕಾರಿ ಡ್ರಗ್ಸ್ ನೀಡಿ ಸತೀಶ್‌ರನ್ನು ಕೊಲೆ ಮಾಡಿದ್ದಾರೆ ಎಂದು ಆ ಮಹಿಳೆ ಆರೋಪಿಸಿದ್ದಾರೆ.
ಗರ್ಭಿಣಿ ನೀನಾ ಗುಪ್ತಾರನ್ನು ಮದುವೆಯಾಗಲು ಬಯಸಿದ್ದರು ಸತೀಶ್ ಕೌಶಿಕ್!