* ಸೋಶಿಯಲ್ ಮೀಡಿಯಾದಲ್ಲಿ ಕಲಾವತಿ ಹವಾ* ಸಂಚಲನ ಸೃಷ್ಟಿಸಿದ ಮಹೇಶ್ ಬಾಬು ಹೊಸ ಚಿತ್ರ* ಡಿಫರೆಂಟ್ ಲುಕ್ ನಲ್ಲಿ ಕೀರ್ತಿ ಸುರೇಶ್
ಹೈದರಾಬಾದ್(ಫೆ. 13) ಸೋಶಿಯಲ್ ಮೀಡಿಯಾದಲ್ಲಿ (Social Media) ಮಹೇಶ್ ಬಾಬು ಮತ್ತೆ ಹವಾ ಸೃಷ್ಟಿಸಿದ್ದಾರೆ. ಕಲಾವತಿ (Kalaavathi) ಸಾಂಗ್ ಅಬ್ಬರಿಸುತ್ತಿದೆ. ಪ್ರೇಮಿಗಳ ದಿನಾಚರಣೆಗೆ ಮುನ್ನ ಪ್ರಿನ್ಸ್ ಮಹೇಶ್ ಬಾಬು (Mahesh Babu) ಭರ್ಜರಿ ಗಿಫ್ಟ್ ನೀಡಿದ್ದಾರೆ.
ಪ್ರೇಮಿಗಳ ದಿನ ಫೆ. 14 ರಂದು ಮಹೇಶ್ ಬಾಬುರ ಬಹುನಿರೀಕ್ಷಿತ ಸರ್ಕಾರು ವಾರಿ ಪಾಟ ಸಿನಿಮಾದ ಮೊದಲ ಹಾಡು ಬಿಡಿಗಡೆಯಾಲಿದ್ದು ಅದರ ಒಂದು ನೋಟವನ್ನು ಈಗ ರಿಲೀಸ್ ಮಾಡಲಾಗಿದ್ದು ಎಲ್ಲರ ಮನ್ನಣೆ ಗಳಿಸಿಕೊಳ್ಳುತ್ತಿದೆ.
ಕಲಾವತಿ ಕಲಾವತಿ ಎಂದು ಮಹೇಶ್ ಬಾಬು ನಾಯಕಿ ಕೀರ್ತಿ ಸುರೇಶ್ ಅವರನ್ನು ಕರೆಯುತ್ತಿದ್ದಾರೆ. ಕಮ್ಮಾ ಕಮ್ಮಾ ಕಲಾವತಿ ಮ್ಯಾಜಿಕ್ ಮಾಡುತ್ತಿದೆ. ತೆಲಗು ಚಿತ್ರರಂಗದಲ್ಲಿ ಈಗಾಗಲೇ ದೊಡ್ಡ ಹೆಸರು ಸಂಪಾದನೆ ಮಾಡಿಕೊಂಡಿರುವ ಗಾಯಕ ಶ್ರೀ ಕೃಷ್ಣ ದನಿ ನೀಡಿದ್ದಾರೆ. ಅಲಾ ವೈಕುಂಠಪುರಮುಲೋ ಕ್ಕೆ ಸಂಗೀತ ನೀಡಿದ್ದ ಥಮನ್ ಇಲ್ಲಿಯೂ ತಮ್ಮ ಚಳಕ ತೋರಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್, ಜೆಎಂಬಿ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.
ರೊಮ್ಯಾಂಟಿಕ್ ಸಾಂಗ್ ಕಲಾವತಿಯ ಪ್ರೋಮೋ ವೀಡಿಯೋವನ್ನು ಮಹೇಶ್ ಬಾಬು ಹಂಚಿಕೊಂಡಿದ್ದಾರೆ. ಪ್ರೊಮೊ ವಿಡಿಯೋ ಮಹೇಶ್ ಮತ್ತು ಕೀರ್ತಿ ಅವರ ಮುದ್ದಾದ ಆಕರ್ಷಣೆ ಮನಮೋಹಕವಾಗಿದೆ.
ಬ್ಯಾಂಕಿಂಗ್ ಹಗರಣಗಳ ಕತೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಚಿತ್ರವು ಈ ವರ್ಷದ ಏಪ್ರಿಲ್ 1 ಕ್ಕೆ ತೆರೆ ಕಾಣುವ ಸಾದ್ಯತೆ ಇದೆ. ಚಿರಂಜೀವಿ ಮತ್ತು ರಾಮ್ ಚರಣ್ ಅವರ ಆಚಾರ್ಯ ಸಹ ಅಂದೇ ಬಿಡುಗಡೆ ಮಾಡಲು ತಂಡ ಸಿದ್ಧವಾಗಿದೆ.
ಗರ್ಭಿಣಿ Body Shame ಮಾಡಿದ ನೆಟ್ಟಿಗರಿಗೆ ಉತ್ತರಿಸಿದ ಕಾಜಲ್ ಅಗರ್ವಾಲ್!
ರಶ್ಮಿಕಾ ಹೊಗಳದಿದ್ದಕ್ಕೆ ಅಭಿಮಾನಿಗಳು ಕೆಂಡ: ಕೊರೋನಾ ಹೆಚ್ಚಳದ ಮಧ್ಯೆಯೇ ಪುಷ್ಪಾ ಬಾಕ್ಸ್ ಆಫೀಸ್(Box Office) ನಲ್ಲಿ ಸದ್ದು ಮಾಡಿತ್ತು. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಸಿನಿಮಾವನ್ನು ನೋಡಿ ಮೆಚ್ಚುಗೆ ಮಾತು ಬಂದಿತ್ತು.
ನಟ ಮಹೇಶ್ ಬಾಬು ಕೂಡಾ ಪುಷ್ಪಾ ಸಕ್ಸಸ್ ಬಗ್ಗೆ ಮಾತನಾಡಿ ಅಲ್ಲು ಅರ್ಜುನ್ ಗೆ ಫುಲ್ ಮಾರ್ಕ್ಸ ಕೊಟ್ಟಿದ್ದರು. ಆದರೆ ನಾಯಕಿ ರಶ್ಮಿಕಾ ಬಗ್ಗೆ ಸೈಲಂಟ್ ಆಗಿದ್ದರು. ಇದು ರಶ್ಮಿಕಾ ಅಭಿಮಾನಿಗಳನ್ನು ಕೆರಳಿಸಿತ್ತು. ಮೂರನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ಸಿಲುಕಿದ್ದ ಮಹೇಶ್ ಬಾಬು ಚೇತರಿಸಿಕೊಂಡಿದ್ದರು.

