Asianet Suvarna News Asianet Suvarna News

'ಅನಿಮಲ್​' ಚಿತ್ರದ ಹಸಿಬಿಸಿ​ ದೃಶ್ಯಗಳಿಗೆ ಆಡಿಷನ್​ ಕೊಟ್ಟಿದ್ದ ಸೈಫ್​ ಪುತ್ರಿ ಸಾರಾ ಅಲಿ ಖಾನ್​ ರಿಜೆಕ್ಟ್​ ಆಗಿದ್ದೇಕೆ?

 'ಅನಿಮಲ್​' ಚಿತ್ರದ ಹಸಿಬಿಸಿ​ ದೃಶ್ಯಗಳಿಗೆ ಆಡಿಷನ್​ ಕೊಟ್ಟಿದ್ದ ಸೈಫ್​ ಪುತ್ರಿ ಸಾರಾ ಅಲಿ ಖಾನ್​ ರಿಜೆಕ್ಟ್​ ಆಗಿದ್ದೇಕೆ?

Sara Ali Khan Was Rejected For Triptii Dimris Role In Animal film suc
Author
First Published Dec 8, 2023, 2:34 PM IST

ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ದಿಮ್ರಿ ಅಭಿನಯದ ಅನಿಮಲ್​ ಚಿತ್ರ ನಾಗಾಲೋಟದಿಂದ ಓಡುತ್ತಲಿದೆ.   ಇದೇ ಡಿಸೆಂಬರ್​1 ರಂದು ಬಿಡುಗಡೆಯಾಗಿರುವ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಇದಾಗಲೇ ಐದಾರು ದಿನಗಳಲ್ಲಿಯೇ ಜಗತ್ತಿನಾದ್ಯಂತ 500 ಕೋಟಿ ರೂಪಾಯಿ ಗಳಿಸಿದೆ.  ಅಡಲ್ಟ್​ ಸರ್ಟಿಫಿಕೇಟ್​ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ಮುನ್ನುಗ್ಗಿ ಸಾಗುತ್ತಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಅವರ ಬೆತ್ತಲೆ ಪ್ರದರ್ಶನ ಒಂದೆಡೆಯಾದರೆ, ಇನ್ನೊಂದೆಡೆ ಈ ಚಿತ್ರದ ತುಂಬಾ ದೌರ್ಜನ್ಯಗಳೇ ಹೆಚ್ಚಾಗಿವೆ ಎನ್ನಲಾಗಿದೆ.   CBFC ಇಂಥ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೂ,  ಅನಿಮಲ್‌ನಲ್ಲಿ   ಮಹಿಳೆಯರನ್ನು ಹೊಡೆಯುವ, ಅವಮಾನಿಸುವ, ಬಲವಂತಪಡಿಸುವ  ಕೌಟುಂಬಿಕ ದೌರ್ಜನ್ಯದ ಹಲವಾರು ದೃಶ್ಯಗಳನ್ನು ಹೊಂದಿವೆ. ಆದರೆ ಇಂಥ ಅಮಾನವೀಯ ಚಿತ್ರಗಳನ್ನು ನೋಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರೆ ಜನರ ಮನಸ್ಥಿತಿ ಎಂಥದ್ದಿರಬಹುದು ಎಂಬ ಚರ್ಚೆಯೂ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.

ಇದರ ನಡುವೆಯೇ, ತೃಪ್ತಿ ದಿಮ್ರಿ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿ ಹಲ್​ಚಲ್​  ಸೃಷ್ಟಿಸಿದ್ದಾರೆ. ಚಿತ್ರದಲ್ಲಿ ನಟಿ ರಶ್ಮಿಕಾ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ನಟಿ ತೃಪ್ತಿ ಸಂಪೂರ್ಣ ನಗ್ನಳಾಗಿದ್ದಾರೆ.  ಸೆನ್ಸಾರ್​ ಮಂಡಳಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೂ ರಶ್ಮಿಕಾ ಮಂದಣ್ಣ ಜೊತೆಗಿನ ಬೆಡ್​ರೂಮ್​ ಸೀನ್​ ಲೀಕ್​ ಆಗಿರುವ ಬೆನ್ನಲ್ಲೇ,  ತೃಪ್ತಿ ಡಿಮ್ರಿಯ ವಿಡಿಯೋ ಕೂಡ ವೈರಲ್​ ಆಗಿದೆ. 2017 ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ತೃಪ್ತಿ ಡಿಮ್ರಿ ಇದೀಗ ರಣಬೀರ್​ ಕಪೂರ್​ ಜೊತೆ ಬೆತ್ತಲಾಗಿ ಚಿತ್ರೀಕರಣ ಮಾಡಿದ್ದಾರೆ. ಅಂದಹಾಗೆ, ಈ ಹಿಂದೆ ತೃಪ್ತಿ ನಾಗಿನ್ ಸೀರೀಸ್ 3ರಲ್ಲಿ ಕಾಣಿಸಿಕೊಂಡಿದ್ದರು. ಈಗ ಬೆಳ್ಳಿತೆರೆ ಮೇಲೆ ಆಫರ್ ಗಳು ಬರುತ್ತಿವೆ. ಆದರೆ ಸೆನ್ಸಾರ್‌ ಬಿಡುಗಡೆಗೂ ಮುನ್ನ ಅತಿಯಾದ ರೋಮ್ಯಾಂಟಿಕ್ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಲಾಗಿತ್ತು. ಆದರೂ ಇದೆಲ್ಲದರ ಹೊರತಾಗಿ ತೃಪ್ತಿ ಅವರ ಗ್ಲಾಮರ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

ಸಂಪೂರ್ಣ ಬೆತ್ತಲಾಗಿ ರಶ್ಮಿಕಾರ 'ನ್ಯಾಷನಲ್​ ಕ್ರಷ್'​ ಪಟ್ಟ ಕಿತ್ತುಕೊಂಡ ತೃಪ್ತಿ: ಬೂಟು ನೆಕ್ಕುವ ದೃಶ್ಯ ನೆನಪಿಸಿಕೊಂಡ ನಟಿ

ಈ ಬೆತ್ತಲೆ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ತೃಪ್ತಿಯವರಿಗೆ ನ್ಯಾಷನಲ್​ ಕ್ರಷ್​ ಪಟ್ಟ ಕೂಡ ಫ್ಯಾನ್ಸ್​ ನೀಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್​ ಸಂಖ್ಯೆ ದಿಢೀರ್​ ಏರಿಕೆಯಾಗಿದೆ. ಚಿತ್ರದಲ್ಲಿ ವಿವಾಹಿತ ನಾಯಕ ರಣಬೀರ್​ ಕಪೂರ್ ಅವರ ಗರ್ಲ್​ಫ್ರೆಂಡ್​ ಪಾತ್ರದಲ್ಲಿ ತೃಪ್ತಿ ಕಾಣಿಸಿಕೊಂಡಿದ್ದಾರೆ. ತೃಪ್ತಿಗೂ ಮೊದಲು ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್​ ಈ ಚಿತ್ರಕ್ಕೆ ಆಯ್ಕೆಯಾಗಿದ್ದರು. ಅನಿಮಲ್​ ಸ್ಕ್ರಿಪ್ಟ್​ ನೋಡಿ ಸಾರಾ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ. ಆಡಿಷನ್​ ಕೂಡ ಕೊಟ್ಟಿದ್ದರು. ಆದರೆ ಇವರು ಈ ಪಾತ್ರಕ್ಕೆ ಆಯ್ಕೆ ಆಗಲಿಲ್ಲ. 

ಇದಕ್ಕೆ ಕಾರಣ, ನಿರ್ದೇಶಕರು ಈ ಬೋಲ್ಡ್​ ದೃಶ್ಯದಲ್ಲಿ ಸಾರಾ ಅವರ ಪಾತ್ರವನ್ನು ಅಷ್ಟಾಗಿ ಒಪ್ಪಿಕೊಳ್ಳಲಿಲ್ಲ. ಆಡಿಷನ್​ ನೋಡಿದಾಗ ತೃಪ್ತಿಯಷ್ಟು ಸಾರಾ ಅಲಿ ಖಾನ್​ ಬೋಲ್ಡ್​ ದೃಶ್ಯ ಕಂಡು ಬರಲಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ರಿಜೆಕ್ಟ್​ ಮಾಡಲಾಯಿತಂತೆ.  ಅಷ್ಟಕ್ಕೂ, ಅರೆಬರೆ ನಗ್ನಳಾಗಿ, ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ನಾಯಕಿ ರಶ್ಮಿಕಾ ಮಂದಣ್ಣ ನಟಿಸಿದ ಗೀತಾಂಜಲಿ ಪಾತ್ರಕ್ಕೆ ಪರಿಣಿತಿ ಚೋಪ್ರಾ ಮೊದಲ ಆಯ್ಕೆಯಾಗಿದ್ದರು. ಆದಾಗ್ಯೂ, ಪರಿಣಿತಿ ಅವರು ಈ ಪಾತ್ರವನ್ನು ರಿಜೆಕ್ಟ್​ ಮಾಡಿ,  ಇಮ್ತಿಯಾಜ್ ಅಲಿ ಅವರ ಚಮ್ಕಿಲಾವನ್ನು ಆಯ್ಕೆ ಮಾಡಿಕೊಂಡಿದ್ದರು. ಇದೇ ವೇಳೆ, ಸಾರಾ ಅಲಿ ಖಾನ್​ ಅವರು ಅನಿಮಲ್​ ಚಿತ್ರವನ್ನು ಕೊಂಡಾಡಿದ್ದಾರೆ. 1942 ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಿತವಾದ ಥ್ರಿಲ್ಲರ್ ಡ್ರಾಮಾ ಚಲನಚಿತ್ರ ಇದಾಗಿದೆ.  ಇದು ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ಚಲನಚಿತ್ರವಾಗಿದೆ.  ಇದು ಒಂದು ಕಾಲಾತೀತ ಕಥೆಯಾಗಿದೆ. ಈಗಿನ ಪೀಳಿಗೆಯು ಇದನ್ನು ಪ್ರೇರೇಪಿಸಬೇಕು. ಸ್ವಾತಂತ್ರ್ಯ ಹೋರಾಟವು 1947 ರಲ್ಲಿ ಕೊನೆಗೊಂಡಿತು ಆದರೆ ಅದರ ನಂತರವೂ ಮಹಿಳೆ, ಮಗು ಮತ್ತು ನಟರಾಗಿ ಎಲ್ಲರೂ ಹೋರಾಡುತ್ತಾರೆ. ನಮ್ಮೊಳಗೆ ನಾವು ಸ್ಫೂರ್ತಿಯನ್ನು ಕಂಡುಕೊಳ್ಳಬೇಕು ಎಂದು ಸಾರಾ ಹೇಳಿದ್ದಾರೆ.

ಅನಿಮಲ್​ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲಾದ ನಟಿ ತೃಪ್ತಿ: ಸಿನಿಮಾದಲ್ಲಿ ಕತ್ತರಿ ಹಾಕಿದ್ದ ವಿಡಿಯೋ ವೈರಲ್​!

Follow Us:
Download App:
  • android
  • ios