ಮುಂಬೈ ಲೋಕಲ್ ಟ್ರೈನ್ ನಲ್ಲಿ ಓಡಾಡಿರುವ ಸಾರಾ ಅಲಿ ಖಾನ್ ವಿಡಿಯೋ ವೈರಲ್ ಆಗಿದೆ. ಸಾರಾ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಖ್ಯಾತ ನಟಿ, ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. 2022ರಲ್ಲಿ ಸಾರಾ ಅಲಿ ಖಾನ್ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಆದರೂ ಸಾರಾ ಸದಾ ಸದ್ದು ಮಾಡುತ್ತಿರುತ್ತಾರೆ, ಅಭಿಮಾನಿಗಳ ಮಗನ ಸೆಳೆಯುತ್ತಿರುತ್ತಾರೆ. ಸ್ಟಾರ್ ಕಿಡ್ ಆಗಿದ್ದರೂ ಸಹ ಸರಳತೆ ಮೆರೆಯುವ ಮೂಲಕ ಆಗಾಗ ಅಭಿಮಾನಿಗಳ ಹೃದಯ ಗೆಲ್ಲುತ್ತಿರುತ್ತಾರೆ. ಇದೀಗ ಮುಂಬೈ ಲೋಕಲ್ ಟ್ರೈನ್ ನಲ್ಲಿ ಓಡಾಡುವ ಮೂಲಕ ಮತ್ತೊಮ್ಮೆ ಸಾರಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಾರಾ ಅಲಿ ಖಾನ್ ಅಭಿಮಾನಿಗಳಿ ಬೇಸರ ಮೂಡಿಸುವ ಹಾಗೆ ನಡೆದುಕೊಳ್ಳುವಿದಿಲ್ಲ. ಅಭಿಮಾನಿಗಳು ಭೇಟಿಯಾದಾಗ ಪ್ರೀತಿಯಿಂದನೇ ಸೆಲ್ಫಿ ನೀಡಿ ಅವರನ್ನು ಮಾತಾನಾಡುತ್ತಾರೆ. ಏರ್ಪೋರ್ಟ್, ಶೂಟಿಂಗ್ ಸೆಟ್, ಸಾರ್ವಜನಿಕ ಸ್ಥಳ ಹೀಗೆ ಎಲ್ಲೇ ಆದರೂ ಸಾರಾ ಅಭಿಮಾನಿಗಳ ಜೊತೆ ಪ್ರೀತಿಯಿಂದ ಮಾತನಾಡುತ್ತಾರೆ ಬೆರೆಯುತ್ತಾರೆ.
ಇದೀಗ ಸಾರಾ ಮುಂಬೈ ಟ್ರೈನ್ ಹತ್ತುವ ಸಾಹಸ ಮಾಡಿದ್ದಾರೆ. ಮುಂಬೈ ಲೋಕಲ್ ಟ್ರೈನ್ ಸಿಕ್ಕಾಪಟ್ಟೆ ಜನ ಓಡಾಡುತ್ತಾರೆ. ಸದಾ ನೂಕುನುಗ್ಗಲು. ಇಷ್ಟಿದ್ದರೂ ಸ್ಟಾರ್ ಕಿಡ್ ಲೋಕಲ್ ರೈಲು ಹತ್ತಿ ಹೊರಟರು. ಅಂದಹಾಗೆ ಸಾರಾ ದಿಢೀರ್ ಅಂತ ರೈಲು ಹತ್ತಿದ್ದು ಟ್ರಾಫಿಕ್ ಸಮಸ್ಯೆಯಿಂದ ಪಾರಾಗಲು. ಈ ರೈಲು ಒಳಗಿಂತನೇ ವಿಡಿಯೋ ಮಾಡಿರುವ ಸಾರಾ ಅಲಿ ಖಾನ್ ಯಾಕೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವುದು ಎಂದು ಬಹಿರಂಗ ಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
'ನಾವು ಮುಂಬೈನ ಲೋಕಲ್ ಟ್ರೈನ್‌ನಲ್ಲಿ ಇದ್ದೀವಿ. ಏಕೆಂದರೆ ಈ ಸಮಯದಲ್ಲಿ ಮುಂಬೈ ಟ್ರಾಫಿಕ್ ನಿಮ್ಮನ್ನು ಹುಚ್ಚರನ್ನಾಗಿ ಮಾಡಿಸುತ್ತದೆ. ಹಾಗಾಗಿ ನಾವು ಟ್ರೈನ್ ಹತ್ತಿದ್ದೇವೆ. ಟ್ರೈನ್ ನಿಂದ ಇಳಿದು ನಾವು ಆಟೋದಲ್ಲಿ ಹೋಗುತ್ತೇವೆ' ಎಂದು ಹೇಳಿದ್ದಾರೆ. ಈ ವಿಡಿಯೋ ಶೇರ್ ಮಾಡಿ, 'ಇವತ್ತು ನಾವು ನಮ್ಮ ತಲೆ ಉಪಯೋಗಿಸಿದೆವು' ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಂದಹಾಗೆ ಸಾರಾ ಜೊತೆಗೆ ಸ್ನೇಹಿತರು ಕೂಡ ಜೊತೆಯಲ್ಲೇ ಇದ್ದರು. ಟ್ರೈನ್ ಹತ್ತಿ ಬಳಿಕ ಇಳಿದು ಆಟೋದಲ್ಲಿ ಕುಳಿತುಕೊಳ್ಳುವವರೆಗೂ ವಿಡಿಯೋ ಮಾಡಿದ್ದಾರೆ. ಸಾರಾ ಅಲಿ ಖಾನ್ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ.
ಸುಶಾಂತ್ ಸಿಂಗ್ ಬಗ್ಗೆ ಮೌನ ಮುರಿದ ಸಾರಾ ಖಾನ್; 4 ವರ್ಷಗಳು ಕಳೆದಿದೆ, ನಿನ್ನಿಂದ ಕಲಿತ ಬುದ್ಧಿ ಇದು
ಅನೇಕರು ನಿಮ್ಮ ಸರಳತೆ ತುಂಬಾ ಇಷ್ಟವಾಯಿತು ಎಂದು ಹೇಳಿದ್ದಾರೆ. ಹಾಗಾಗಿ ನಿಮ್ಮನ್ನು ರಿಯಲ್ ಸ್ಟಾರ್ ಎಂದು ಕರೆಯುತ್ತೇವೆ ಎಂದು ಹೇಳಿದರು. ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿ ನಮ್ಮ ಪ್ರಪಂಚಕ್ಕೆ ಸ್ವಾಗತ ಎಂದು ಹೇಳಿದ್ದಾರೆ. ಹೀಗೆ ಸಾರಾ ಅಲಿ ಖಾನ್ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.
ಅಂದಹಾಗೆ ಸಾರಾ ಅಲಿ ಖಾನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 4 ವರ್ಷಗಳಾಗಿದೆ. ಕೇದಾರನಾಥ ಸಿನಿಮಾ ಮೂಲಕ ಸಾರಾ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ಈ ಸಿನಿಮಾದಲ್ಲಿ ಸಾರಾ ಸುಶಾಂತ್ ಸಿಂಗ್ ರಜಪೂತ್ ಜೊತೆ ತೆರೆಹಂಚಿಕೊಂಡಿದ್ದರು. ಮೊದಲ ಸಿನಿಮಾ 4 ವರ್ಷ ಪೂರೈಸಿದ ಬಗ್ಗೆ ಸಾರಾ ಭಾವುಕ ಪೋಸ್ಟ್ ಶೇರ್ ಮಾಡಿದ್ದರು. ಸುಶಾಂತ್ ಸಿಂಗ್ ಜೊತೆಗಿನ ಫೋಟೋ ಶೇರ್ ಮಾಡಿ ನನ್ನ ಕನಸು ನನಸಾದ ದಿನಕ್ಕೆ 4 ವರ್ಷ ಎಂದು ಹೇಳಿದ್ದರು. ಈ ಸಿನಿಮಾ ಬಳಿಕ ಸಿಂಬ, ಲವ್ ಆಜ್ ಕಲ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಸಾರಾ ಅತ್ತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಕೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಸಕ್ಸಸ್‌ಗಾಗಿ ಸಾರಾ ಎದುರು ನೋಡುತ್ತಿದ್ದಾರೆ.
Sara Ali Khan ಒಂಚೂರು ನಾಚಿಕೆ ಇಲ್ವಾ; ಬಿಕಿನಿ ಧರಿಸಿದ್ದಕ್ಕೆ ಖಾನ್ ಪುತ್ರಿ ಟ್ರೋಲ್
ಸದ್ಯ ಸಾರಾ ಅಲಿ ಖಾನ್, ವಿಕ್ಕಿ ಕೌಶಲ್ ಜೊತೆ ಲಕ್ಷ್ಮಣ್ ಉತ್ತೇಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ವಿಕ್ಕಿ ಜೊತೆ ತೆರೆಹಂಚಿಕೊಂಡಿದ್ದು ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ಗ್ಯಾಸ್‌ಲೈಟ್ ಸಿನಿಮಾ ಕೂಡ ಸಾರಾ ಕೈಯಲ್ಲಿದೆ. ಇನ್ನು ಅನುರಾಗ್ ಕಶ್ಯಪ್ ಅವರ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಆದಿತ್ಯ ರಾಯ್ ಕಪೂರ್ ಜೊತೆ ನಟಿಸುತ್ತಿದ್ದಾರೆ.
