Asianet Suvarna News Asianet Suvarna News

Sara Ali Khan ಒಂಚೂರು ನಾಚಿಕೆ ಇಲ್ವಾ; ಬಿಕಿನಿ ಧರಿಸಿದ್ದಕ್ಕೆ ಖಾನ್ ಪುತ್ರಿ ಟ್ರೋಲ್

 ಮಾಲ್ಡೀವ್ಸ್‌ನಲ್ಲಿ ಬಿಕಿನಿ ತೊಟ್ಟ ಸಾರಾ ಅಲಿ ಖಾನ್. ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿರುವುದು ಯಾಕೆ?

Sara ali khan trolled for wearing Bikini in Maldives vcs
Author
First Published Nov 26, 2022, 2:30 PM IST

ಸೈಫ್‌ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮುದ್ದಿನ ಮಗಳು ಸಾರಾ ಅಲಿ ಖಾನ್ ಇದೀಗ ಬಾಲಿವುಡ್‌ನ ಬಹುಬೇಡಿಕೆಯ ನಟಿ. ಯಾವ ಕಾರ್ಯಕ್ರಮದಲ್ಲಿ ನೋಡಿದ್ದರೂ ಸಾರಾ, ಯಾವ ಜಾಹೀರಾತು ನೋಡಿದ್ದರೂ ಸಾರಾ, ಯಾವ ನಿರ್ದೇಶಕರನ್ನು ಕೇಳಿದ್ದರೂ ಹೇಳುವುದು ಸಾರಾ....ಸಖತ್ ಹೈಪ್, ಡಿಮ್ಯಾಂಡ್ ಮತ್ತು ಲೈಮ್‌ ಲೈಟ್‌ನಲ್ಲಿರುವ ಸಾರಾ ಇದೀಗ ಮಾಲ್ಡೀವ್ಸ್‌ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.

ಹೌದು! ಸಾರಾ ಅಲಿ ಖಾನ್‌ನ ಸೋಷಿಯಲ್ ಮೀಡಿಯಾದಲ್ಲಿ ನೀವು ಫಾಲೋ ಮಾಡಿದ್ದರೆ ಚೆನ್ನಾಗಿ ಅರ್ಥ ಅಗಬಹುದು ಸಾರಾ ಇಸ್‌ ಬೀಜ್‌ ಬೇಬಿ ಎಂದು. ಬಿಡುವಿದ್ದಾಗಲೆಲ್ಲಾ ಬೀಜ್‌ ಕಡೆ ಪ್ರಯಾಣ ಮಾಡುತ್ತಾರೆ ಅದರಲ್ಲೂ ಮಾಲ್ಡೀವ್ಸ್‌ಗೆ ಮೂರ್ನಾಲ್ಕು ಸಲ ಭೇಟಿ ನೀಡಿದ್ದಾರೆ. ಈಗ ಅದೇ ಮಾಲ್ಡೀವ್ಸ್‌ನಲ್ಲಿ  ಬಿಕಿನಿ ಧರಿಸಿ ಸೈಕಲ್ ಹಿದಿದು ಪೋಸ್ ಕೊಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. 'ಸಮುದ್ರದ ಅಲೆಯ ರೀತಿ ಬದುಕಿ. ಕಪ್ಪೆ ಚಿಪ್ಪಿನಿಂದ ಹೊರ ಬನ್ನಿ. ಪ್ರಪಂಚ ಪ್ರೆಶರ್‌ನಿಂದ ಹೊರ ಬನ್ನಿ. ಸಮುದ್ರದ ಬದುಕು ಬ್ಯೂಟಿಫುಲ್' ಎಂದು ಸಾರಾ ಬರೆದುಕೊಂಡಿದ್ದರು. ಸಾರಾ ಆಂಟಿ ಸಾಬಾ ಪಟೌಡಿ 'ಕ್ಲೆವರ್' ಎಂದು ಕಾಮೆಂಟ್ ಮಾಡಿದ್ದರು. 

Sara ali khan trolled for wearing Bikini in Maldives vcs

ಸಾರಾ ಈ ಬಿಕಿನಿ ಲುಕ್ ಸಖತ್ ಟ್ರೋಲ್ ಅಗುತ್ತಿದೆ. ನಿನಗೆ ನಾಚಿಕೆ ಮಾನ ಮರ್ಯಾದೆ ಇಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ, ಖಾನ್ ಕುಟುಂಬ ಹೆಣ್ಣಾಗಿ ಪದೇ ಪದೇ ಮೈ ಕಾಣುವಂತ ಬಟ್ಟೆ ಧರಿಸುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಬಿಕಿನಿ ಧರಿಸಿರುವುದು ಇದೇನು ಮೊದಲಲ್ಲ ಆದರೆ ಪ್ರತಿ ಸಲವೂ ನೆಗೆಟಿವ್ ಕಾಮೆಂಟ್ಸ್‌ಗಳು ಹರಿದು ಬರುತ್ತದೆ ಆದರೆ ಸಾರಾ ಡೋಂಟ್‌ ಕೇರ್‌ ಅಂತಾರೆ. 

ಸಾರಾ ಅಲಿ ಖಾನ್ ಜೊತೆ ಸಂಬಂಧ: ಮೌನ ಮುರಿದ ಕ್ರಿಕೆಟಿಗ ಶುಭಮನ್ ಗಿಲ್!

 

ಕೆಲವು ದಿನಗಳ ಹಿಂದೆ ಸಾರಾ ಮತ್ತು ವರುಣ್ ಧವನ್ ಬೀಚ್‌ ಬಳಿ ಸೆಲ್ಫಿ ಕ್ಲಿಕ್ ಮಾಡಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದರು. ಇಬ್ಬರೂ ಒಟ್ಟಿಗೆ ಪ್ರಯಾಣ ಮಾಡಿದ್ದಾರಾ ಏನು ಎಂಬ ಮಾಹಿತಿ ಇಲ್ಲ ಆದರೆ ಕೂಲಿ ನಂ.1 ಸಿನಿಮಾ ನಂತರ ಇಬ್ಬರು ಸಖತ್ ಕ್ಲೋಸ್ ಅಗಿದ್ದಾರೆ ಎನ್ನಬಹುದು. 

ಸಾರಾ ಮದುವೆ:

ನಟಿ ಸಾರಾ ಅಲಿ ಖಾನ್ ಅವರು ತನ್ನ ತಾಯಿಯೊಂದಿಗೆ ಅಂದರೆ ಅಮೃತಾ ಸಿಂಗ್ ಜೊತೆ ಶಿಫ್ಟ್ ಆಗಲು ಸಿದ್ಧವಾಗಿರುವ ವ್ಯಕ್ತಿಯನ್ನು ಮದುವೆಯಾಗುವುದಾಗಿ ಹೇಳುತ್ತಾರೆ. ಸಂದರ್ಶನವೊಂದರಲ್ಲಿ ಸಾರಾ ತನ್ನ ತಾಯಿಯೊಂದಿಗೆ ತನ್ನ ಸಂಬಂಧವನ್ನು ಚರ್ಚಿಸುತ್ತಿದ್ದರು. ನನ್ನ ತಾಯಿಯೇ ನನಗೆ ಸರ್ವಸ್ವ ಎಂದು ಸಾರಾ ಹೇಳಿದರು. 'ನನ್ನ ತಾಯಿ ನನಗೆ ಎಲ್ಲವೂ. ನನ್ನ ತಾಯಿಯಿಂದ ಓಡಿಹೋಗುವ ಹಕ್ಕು ನನಗಿಲ್ಲ' ಎಂದಿದ್ದಾರೆ ನಟಿ.  ಇದಲ್ಲದೆ, ಸಾರಾ ಅವರು ತನ್ನ ತಾಯಿಯೊಂದಿಗೆ ವಾಸಿಸಲು ಸಿದ್ಧರಿರುವ  ವ್ಯಕ್ತಿಯನ್ನು ಮದುವೆಯಾಗುವುದಾಗಿ ಹೇಳಿದರು ಮತ್ತು ನಾನು ನನ್ನ ತಾಯಿಯನ್ನು ಎಂದಿಗೂ ಬಿಡುವುದಿಲ್ಲ .ನನ್ನ ತಾಯಿ ಉದಾರವಾದಿ ಮಹಿಳೆ. ಅವರು ದೈನಂದಿನ ಜೀವನದಲ್ಲಿ ನನ್ನ ಮೂರನೇ ಕಣ್ಣು. ಅವರು ಎಲ್ಲಾ ಕಾರಣಗಳ ಹಿಂದೆ ಇದ್ದಾರೆ. ಅದಕ್ಕಾಗಿಯೇ ನಾನು ಅವಳಿಂದ ಓಡಿಹೋಗುವುದಿಲ್ಲ' ಎಂದಿದ್ದಾರೆ.

Follow Us:
Download App:
  • android
  • ios