ಪ್ರಚಾರ ಪ್ರಿಯರ ನಡುವೆ ಅಭಿಮಾನಿಗಳ ಮನಗೆದ್ದ ನಟಿ ಸಾರಾ ಅಲಿ: ವಿಡಿಯೋ ಮಾಡುವವರ ಮೇಲೆ ಕಿಡಿ
ಪ್ರಚಾರಕ್ಕಾಗಿ ಸಹಾಯ ಹಸ್ತ ನೀಡುವವರ ನಡುವೆ ಅಭಿಮಾನಿಗಳ ಮನಗೆದ್ದ ನಟಿ ಸಾರಾ ಅಲಿ: ವಿಡಿಯೋ ಮಾಡುವವರ ಮೇಲೆ ಕಿಡಿ ಕಾರಿದ ನಟಿ. ಆಗಿದ್ದೇನು?
ಒಂದಿಷ್ಟು ಮಂದಿಗೆ ಸಹಾಯ ಮಾಡಿದಂತೆ ಪೋಸ್ ಕೊಟ್ಟು ಅದರ ಫೋಟೋ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವವರಿಗೇನೂ ಕಮ್ಮಿ ಇಲ್ಲ. ಮಾಡಿರುವುದು ಒಂದು ರೂಪಾಯಿ ಕೆಲಸವಾದರೆ, ಅವರಿಗೆ ಪ್ರಚಾರ ಸಿಗುವುದು ಸಾವಿರಾರು ರೂಪಾಯಿಯಂತೆ. ಪ್ರಚಾರಕ್ಕಾಗಿಯೇ ಸಹಾಯ ಮಾಡುವವರೂ ಹಲವಾರು ಮಂದಿ ಇದ್ದಾರೆ. ಸಹಾಯ ಮಾಡುವ ಮನಸ್ಸು ಇರದಿದ್ದರೂ, ಒಂದಿಷ್ಟು ಜನಪ್ರಿಯತೆ ಗಳಿಸಿಕೊಳ್ಳಲು ಸಹಾಯಹಸ್ತ ಚಾಚುವವರನ್ನು ದಿನನಿತ್ಯವೂ ನೋಡಬಹುದು. ಅಂಥವರುಗಳ ಮಧ್ಯೆ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ವಿಭಿನ್ನವಾಗಿ ನಿಲ್ಲುತ್ತಾರೆ.
ಈಚೆಗೆ ಸಾರಾ ಅಲಿ ಖಾನ್ ಅವರು, ನಿರಾಶ್ರಿತರಿಗೆ ಊಟ ನೀಡುತ್ತಿದ್ದರು. ನಟ-ನಟಿಯರ ಹಿಂದೆ ಸದಾ ಸುತ್ತುವ ಪಾಪರಾಜಿಗಳು ಇದನ್ನು ವಿಡಿಯೋ ಮಾಡತೊಡಗಿದರು. ಇದರಿಂದ ಸಾರಾ ಸಿಟ್ಟುಗೊಂಡರು. ದಯವಿಟ್ಟು ಇವುಗಳ ವಿಡಿಯೋ ಮಾಡಬೇಡಿ ಎಂದು ಆರಂಭದಲ್ಲಿ ಮನವಿ ಮಾಡಿಕೊಂಡರು. ಸ್ವಲ್ಪ ಸಮಯದ ಬಳಿಕ ವಿಡಿಯೋ ಮತ್ತೆ ಮಾಡಲು ಶುರು ಮಾಡಿದಾಗ ಪಾಪರಾಜಿಗಳ ವಿರುದ್ಧದ ನಟಿ ಹರಿಹಾಯ್ದರು ಕೂಡ. ವಿಡಿಯೋ ಆಫ್ ಮಾಡುವಂತೆ ಮನವಿ ಮಾಡಿಕೊಳ್ಳುತ್ತಲೇ ಯಾಕೆ ಹೀಗೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇದರ ವಿಡಿಯೋ ವೈರಲ್ ಆಗಿದ್ದು, ನಟಿಯ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಸೇವೆ ಸಲ್ಲಿಸುವವರು ಯಾವತ್ತೂ ಪ್ರಚಾರ ಬಯಸುವುದಿಲ್ಲ. ಪ್ರಚಾರಕ್ಕೆ ಸೇವೆ ಸಲ್ಲಿಸುವ ದೊಡ್ಡ ವರ್ಗವೇ ಇದೆ. ಆದರೆ ನಟಿ ಸಾರಾ ಅಲಿ ಖಾನ್ ಎಲ್ಲರಿಗಿಂತ ಭಿನ್ನರು ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಕಂಗನಾ ಹಾದಿ ತುಳಿಯಲಿದ್ದಾರಾ ಸೈಫ್ ಅಲಿ ಪುತ್ರಿ? ರಾಜಕೀಯ ಎಂಟ್ರಿಗೆ ಸುಳಿವು ನೀಡಿದ ನಟಿ ಹೇಳಿದ್ದೇನು?
ಅಷ್ಟಕ್ಕೂ ಸಾರಾ ಅಲಿ ಖಾನ್ ಸದಾ ಸುದ್ದಿಯಲ್ಲಿ ಇರುವುದು ಹಿಂದೂ ದೇವಾಲಯಗಳಿಗೆ ಭೇಟಿ ಕೊಡುವುದರಿಂದ. ಕೆಲ ತಿಂಗಳ ಹಿಂದೆ ಇವರ ಅಮರನಾಥ ಯಾತ್ರೆ ಕೈಗೊಂಡಿದ್ದರು. ‘ಹರ ಹರ ಮಹದೇವ’ ಎಂದು ಜೈಕಾರ ಕೂಗಿದ್ದರು, ಈ ಮಾತನ್ನು ಕೇಳಿ ಕೆಲವರು ಕಿಡಿ ಕಾರುತ್ತಿದ್ದರೆ, ಇನ್ನು ಕೆಲವರು ನೀವೂ ಹಿಂದೂ ಧರ್ಮಕ್ಕೆ ಬಂದು ಬಿಡಿ ಎಂದಿದ್ದರು. ಈಕೆಯ ಅಮ್ಮ ಕೂಡ ಹಿಂದೂ ಎನ್ನುವುದನ್ನು ಮರೆಯಬೇಡಿ ಎಂದಿದ್ದರು, ಇನ್ನು ಕೆಲವರು ಹಾಗೆ ನೋಡಿದರೆ ಹೆಚ್ಚಿನ ಮುಸ್ಲಿಂ ಜನರ ಪೂರ್ವಜರು ಹಿಂದೂಗಳೇ ಆಗಿರುತ್ತಾರೆ. ಆದ್ದರಿಂದ ಹಿಂದೂವಂಥ ಪವಿತ್ರ ಧರ್ಮವನ್ನು ನಿಮ್ಮದಾಗಿಸಿಕೊಳ್ಳಿ ಎಂದಿದ್ದರು. ಸಾರಾ ಅಲಿ ಖಾನ್ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಸಿನಿಮಾದ ಪ್ರಚಾರಕ್ಕಾಗಿ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದ್ದೂ ಇದೆ. ಆದರೆ ಅಮರನಾಥ ಯಾತ್ರೆಗೆ ಹೋದ ಮೇಲೆ ಹಲವರು ಬಾಯಿ ಮುಚ್ಚಿದ್ದಾರೆ. ಅಂದಹಾಗೆ ವಿಕ್ಕಿ ಕೌಶಲ್ ಅವರ ಜೊತೆ ನಟಿ ಸಾರಾ ಅಲಿ ಖಾನ್ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಸಕತ್ ಹಿಟ್ ಆಗಿದೆ. 87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇಂತಿಪ್ಪ ನಟಿ, ರಾಜಕೀಯ ಪ್ರವೇಶದ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಅದೀಗ ವೈರಲ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 'ಮರ್ಡರ್ ಮುಬಾರಕ್' ಮತ್ತು 'ಏ ವತನ್ ಮೇರೆ ವತನ್' ಚಿತ್ರಗಳ ಯಶಸ್ಸಿನ ಬಳಿಕ ಸಾರಾ ಅವರು, ತಾವು ರಾಜಕೀಯಕ್ಕೆ ಬರಲು ರೆಡಿಯಾಗಿರುವುದಾಗಿ ತಿಳಿಸಿದ್ದಾರೆ. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುಭವ್ ಸಿಂಗ್ ಬಸ್ಸಿ ಅವರ ಜೊತೆಗಿನ ಸಂದರ್ಶನದ ಸಮಯದಲ್ಲಿ ರಾಜಕೀಯದ ಕುರಿತು ನಟಿ ಮಾತನಾಡಿದ್ದಾರೆ. ‘ನೀವು ರಾಜಕೀಯಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ನಟಿ, ಸಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ. ಜೊತೆ ಈಚೆಗೆ ಆಂಗ್ಲ ಮಾಧ್ಯಮವೊಂದು ಮಾಡಿದ ಸಂದರ್ಶನದ ಸಂದರ್ಭದಲ್ಲಿಯೂ ರಾಜಕೀಯ ಎಂಟ್ರಿ ಕುರಿತು ನಟಿ ಹೇಳಿದ್ದಾರೆ. 'ನಾನು ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದೇನೆ. ಅದಕ್ಕಾಗಿಯೇ ನಾನು ಜೀವನದಲ್ಲಿ ನಂತರ ರಾಜಕೀಯಕ್ಕೆ ಪ್ರವೇಶಿಸಲು ಬಯಸುತ್ತೇನೆ, ಆದರೆ ಇದು ಬ್ಯಾಕಪ್ ಯೋಜನೆ ಅಲ್ಲ' ಎಂದು ಸಾರಾ ಹೇಳಿದ್ದಾರೆ. ಅಂದಹಾಗೆ, ಸೈಫ್ ಅಲಿ ಖಾನ್ (Saif Ali Khan) ಅವರ ಎರಡೂ ಪತ್ನಿಯರು ಹಿಂದೂಗಳೇ. ಮೊದಲನೆಯ ಪತ್ನಿ ಅಮೃತಾ ಸಿಂಗ್. ಅವರ ಮಗಳು ಸಾರಾ ಅಲಿ ಖಾನ್. ಸೈಫ್ ಅವರ ಎರಡನೆಯ ಪತ್ನಿ ಕರೀನಾ ಕಪೂರ್. ಈ ಜೋಡಿಗೆ ಇಬ್ಬರು ಮಕ್ಕಳು.
ಹೆಣ್ಣುಮಕ್ಕಳು ಐಸ್ಕ್ರೀಂ ಹೇಗೆ ತಿನ್ಬೇಕು ಎನ್ನೋದನ್ನು ಹೇಳಿಕೊಟ್ಟ ಹಾಟ್ ಬ್ಯೂಟಿ ಶೆರ್ಲಿನ್ ಚೋಪ್ರಾ!