ಸಾರಾ-ಜಾಹ್ನವಿ ಕೇದಾರನಾಥ ಯಾತ್ರೆಯಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದರು. ಭೈರವನಾಥ ದೇವಸ್ಥಾನಕ್ಕೆ ಹೋಗುವಾಗ ಅಲುಗಾಡುವ ಬಂಡೆಯ ಮೇಲೆ ಸಿಲುಕಿದ್ದ ಇವರನ್ನು ಸ್ಥಳೀಯರು ರಕ್ಷಿಸಿದರು. ಕಂಜೂಸ್ತನದಿಂದಾಗಿ ಕಡಿಮೆ ಬೆಲೆಯ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದರಿಂದ ತೀವ್ರ ಚಳಿಗೆ ನಡುಗಿ, ಆಮ್ಲಜನಕದ ಕೊರತೆಯಿಂದ ಬಳಲಿದ್ದರು. ಈ ಘಟನೆಯನ್ನು ಕಾಫಿ ವಿತ್ ಕರಣ್ ಶೋನಲ್ಲಿ ಬಹಿರಂಗಪಡಿಸಿದ್ದಾರೆ.

ಸಾರಾ ಆಲಿ ಖಾನ್ ಮತ್ತು ಜಾಹ್ನವಿ ಕಪೂರ್ ಬಾಲಿವುಡ್​ನ ಹ್ಯಾಪನಿಂಗ್ ಹೀರೋಯಿನ್‌ಗಳು. ಅದಕ್ಕೂ ಹೆಚ್ಚಾಗಿ ಪ್ರತಿಷ್ಠಿತ ಕುಟುಂಬದ ಈ ಇಬ್ಬರೂ ಗೆಳತಿಯರೂ ಹೌದು. ಈ ಹಿಂದೆ ಇವರು ಜೊತೆಯಾಗಿ ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್ ಶೋದಲ್ಲಿ ಭಾಗವಹಿಸಿ ಹಲ್​ಚಲ್​ ಕೂಡ ಸೃಷ್ಟಿಸಿದವರು. ಕರಣ್ ಜೋಹರ್​ ಅವರು ಯಾರ ಹೆಸರನ್ನೂ ಹೇಳದೇ ಇಬ್ಬರು ಸಹೋದರರ ನಡುವೆ ನೀವಿಬ್ಬರೂ ಈ ಹಿಂದೆ ಡೇಟಿಂಗ್‌ ಮಾಡ್ತಿದ್ರಿ, ಆ ಡೇಟಿಂಗ್‌ ಬಗ್ಗೆ ಒಂಚೂರು ಇಲ್ಲಿ ಹೇಳ್ತೀರಾ ಎಂದಾಗ ಗೆಳೆತಿಯರು ತಬ್ಬಿಬ್ಬಾಗಿದ್ದರು. ಇಬ್ಬರೂ ಟಾಪಿಕ್‌ ಚೇಂಜ್ ಮಾಡಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅವರ ಈ ರಿಯಾಕ್ಷನ್, ಅವರು ಯಾರ ಜೊತೆಗೆ ಡೇಟ್ ಮಾಡ್ತಿದ್ರು ಅನ್ನೋ ವಿಚಾರವನ್ನು ಈ ಕಾರ್ಯಕ್ರಮ ನೋಡಿದ ಕೆಲವರು ಹುಡುಕಿ ತೆಗೆದಿದ್ದರು. ಅಷ್ಟಕ್ಕೂ ಇವರಿಬ್ಬರು ಮಾಜಿ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಶಿಂಧೆ ಮೊಮ್ಮಕ್ಕಳಾದ ವೀರ್‌ ಪಹಾರಿಯಾ ಮತ್ತು ಶಿಖರ್‌ ಪಹಾರಿಯಾ ಸಹೋದರರ ಜೊತೆ ಡೇಟಿಂಗ್​ನಲ್ಲಿದ್ದಾರೆ ಎಂದೇ ಹೇಳಲಾಗುತ್ತಿದೆ. ತಾವು ವೀರ್‌ ಪಹಾರಿಯಾ ಜತೆಗೆ ಡೇಟ್‌ ಮಾಡು‌ತ್ತಿದ್ದೆ ಎಂಬ ವಿಚಾರವನ್ನು ಈ ಹಿಂದೆಯೇ ಸಾರಾ ಅಲಿಖಾನ್‌ ಹೇಳಿಕೊಂಡಿದ್ದರು. ನಾನು ಡೇಟ್‌ ಮಾಡಿದ ಏಕೈಕ ವ್ಯಕ್ತಿ ಅದು ವೀರ್.‌ ಅದಾದ ಬಳಿಕ ನನ್ನ ಜೀವನದಲ್ಲಿ ಬೇರಾರು ಇಲ್ಲ. ಇಬ್ಬರು ಸಹಮತಿ ಮೇಲೆಯೇ ಬೇರೆಯಾದೆವು ಎಂದಿದ್ದರು. ಆದರೆ ಜಾಹ್ನವಿ ಮಾತ್ರ ಶಿಖರ್​ ಜೊತೆ ದೇಶ-ವಿದೇಶ ಸುತ್ತುತ್ತಲೇ ಇದ್ದರೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಓರೆಗಿತ್ತಿಯರಾಗಲು ರೆಡಿಯಾಗ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. 

ಇದರ ನಡುವೆಯೇ, ಇದೀಗ ಈ ಇಬ್ಬರು ಸ್ನೇಹಿತರು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಬಗ್ಗೆ ರಿವೀಲ್​ ಆಗಿದೆ. ಕೇದಾರನಾಥ ಯಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. 2022ರಲ್ಲಿ ನಡೆದ ಈ ಘಟನೆಯ ವಿಡಿಯೋ ಇದೀಗ ಪುನಃ ವೈರಲ್​ ಆಗುತ್ತಿದೆ. ಕೇದಾರನಾಥದಲ್ಲಿ ಬಂಡೆಯಿಂದ ಬೀಳುವ ಹಂತದಲ್ಲಿದ್ದ ಈ ನಟಿಯರು ಅದ್ಹೇಗೋ ಪಾರಾಗಿ ಬಂದಿದ್ದು, ಸಾವಿನ ಸಮೀಪ ಹೋಗಿ ಬಂದಿರುವುದಾಗಿ ತಿಳಿಸಿದ್ದಾರೆ. ಕಾಫಿ ವಿತ್ ಕರಣ್​ನಲ್ಲಿ ನಟಿಯರು ಈ ವಿಷಯ ಹೇಳಿದ್ದಾರೆ. ಸಾರಾ ಮತ್ತು ಜಾಹ್ನವಿ ಕಪೂರ್​ ಕೇದಾರನಾಥದ ಬಗ್ಗೆ ಮಾತನಾಡುತ್ತಾ, ಗುಡ್ಡವನ್ನು ಹತ್ತುವಾಗ ಅವರು ಹೇಗೆ ಸಿಲುಕಿಕೊಂಡರು ಮತ್ತು ಬೀಳುವ ಅಂಚಿನಲ್ಲಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮೈನಸ್ ಏಳು ಡಿಗ್ರಿ ಸೆಲ್ಸಿಯಸ್ ಹವಾಮಾನದಲ್ಲಿ ತಾವು ಬಹುತೇಕ ಹೆಪ್ಪುಗಟ್ಟಿದ್ವಿ, ಬದುಕುವ ಆಸೆಯನ್ನೇ ಕಳೆದುಕೊಂಡಿದ್ವಿ ಎನ್ನುವುದನ್ನು ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆಗೆ ಇರುವಂತೆ ನಿಮ್ಮ ಕೈಯಲ್ಲಿಯೂ ಹೀಗೆ ಲೈನ್​ ಇದ್ಯಾ? ಹಾಗಿದ್ರೆ...

ಇದಕ್ಕೆ ಕಾರಣ ತಮ್ಮ ಕಂಜೂಸ್​ತನ ಎಂದು ಸಾರಾ ಒಪ್ಪಿಕೊಂಡಿದ್ದಾರೆ. ₹6,000 ಉಳಿಸುವ ಪ್ರಯತ್ನದಲ್ಲಿ, ಸಾರಾ ಅಂಥ ಶೀತದ ತಾಪಮಾನದ ಹೊರತಾಗಿಯೂ, ಹೀಟರ್ ಇಲ್ಲದ ಕಡಿಮೆ ಬೆಲೆಯ ಹೋಟೆಲ್ ಅನ್ನು ಬುಕ್ ಮಾಡಿದ್ದರು. ಪರಿಣಾಮವಾಗಿ, ಇಬ್ಬರೂ ನಟಿಯರು ತಮ್ಮಲ್ಲಿರುವ ಪ್ರತಿಯೊಂದು ಬಟ್ಟೆಯನ್ನು ಧರಿಸಿದ್ದರು, ಆದರೆ ಇನ್ನೂ ನಡುಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಚಳಿ ತುಂಬಾ ತೀವ್ರವಾಗಿತ್ತೆಂದರೆ ಅವರ ಆಮ್ಲಜನಕದ ಮಟ್ಟವು ಅಪಾಯಕಾರಿಯಾಗಿ ಕಡಿಮೆಯಾಯಿತು ಮತ್ತು ಚೇತರಿಸಿಕೊಳ್ಳಲು ಅವರಿಗೆ ಆಮ್ಲಜನಕವನ್ನು ನೀಡಬೇಕಾಯಿತು. ಅವರು ಆ ಅಗ್ನಿಪರೀಕ್ಷೆ ಎದುರಿಸಬೇಕಾಯ್ತು ಎಂದಿದ್ದಾರೆ.

 ಇನ್ನು ಬಂಡೆಯ ವಿಷಯದ ಬಗ್ಗೆ ಮಾತನಾಡಿದ್ದ ಅವರು, ನಾವಿಬ್ಬರೂ ಭೈರವನಾಥ್‌ಗೆ ಹೋಗಲು ನಿರ್ಧರಿಸಿದ್ದೆವು. ಅದು ದಾರಿ ನೋಡೋಕೆ ಸುಲಭ ಅಂತ ಅನಿಸಿತ್ತು. ಇಬ್ಬರೇ ಬಂಡೆಗಳನ್ನು ಹತ್ತುವುದೆಂದು ನಿರ್ಧರಿಸಿದ್ದೆವು. ಜಾಹ್ನವಿ ಕೂಡ ಇಬ್ಬರೇ ಹೋಗೋಣ ಎಂದರು. ಕೆಲವು ದೂರು ಪ್ರಯಾಣ ಮಾಡುತ್ತಿದ್ದಂತೆ, ಅಲುಗಾಡುತ್ತಿದ್ದ ಬಂಡೆ ಮೇಲೆ ನಿಂತಿದ್ದ ನಮಗೆ ತಾವು ಅಪಾಯದಲ್ಲಿ ಇರುವುದು ಮನವರಿಕೆಯಾಗಿತ್ತು. ಆಗ ಡ್ರೈವರ್ ನೋಡಿ ಸ್ಪೆಷಲ್ ಫೋರ್ಸ್ ಸಹಾಯದಿಂದ ನಮ್ಮ ರಕ್ಷಣೆ ಮಾಡಲಾಯಿತು ಎಂದಿದ್ದಾರೆ.

ಯೌವನಕ್ಕಿಂತ ವಯಸ್ಸಾದ್ಮೇಲೆ ಶಿಲ್ಪಾ ಶೆಟ್ಟಿ ಸುಂದ್ರಿಯಾಗಲು ಕಾರಣ ಕೊನೆಗೂ ರಿವೀಲ್​!