ಬೋಲ್ಡ್‌ ವಿಷಯ ಇಟ್ಟುಕೊಂಡು, ಮುಜುಗರಪಟ್ಟುಕೊಳ್ಳದಂತೆ ಸಿನಿಮಾ ಮಾಡಬಹುದು ಎಂದು ತೆಲುಗು ಸಿನಿಮಾವೊಂದು ತೋರಿಸಿಕೊಟ್ಟಿದೆ. ಹಾಗಾದರೆ ಆ ಸಿನಿಮಾ ಯಾವುದು? 

ಇಂದಿನ ಕಮರ್ಷಿಯಲ್‌ ಬೇಡಿಕೆಗೆ ತಕ್ಕಂತೆ ಕೆಲ ಸಿನಿಮಾಗಳಲ್ಲಿ, ವಿಷಯ ಯಾವುದೇ ಇರಲೀ, ಅದರಲ್ಲಿ ಬೋಲ್ಡ್‌ನೆಸ್‌ ಟಚ್‌ ಕೊಡಲಾಗುವುದು, ಅಶ್ಲೀಲತೆಯನ್ನು ತುಂಬಲಾಗುವುದು. ಆದರೆ ತೆಲುಗು ಸಿನಿಮಾವೊಂದರಲ್ಲಿ ವಿಷಯವೇ ಬೋಲ್ಡ್‌ ಆಗಿದ್ದರೂ ಕೂಡ ಬಹಳ ಸರಳವಾಗಿ, ಅಶ್ಲೀಲತೆ ಇಲ್ಲದಂತೆ ತೋರಿಸಿರೋದಿಕ್ಕೆ ಮೆಚ್ಚಲೇಬೇಕು. 

ನಿರ್ದೇಶಕರ ಮೊದಲ ಪ್ರಯತ್ನ! 
ಕಾರ್ತಿಕ್‌ ರೊಪುಲು ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಅಡಲ್ಟ್‌ ಕಾಮಿಡಿ ಸಿನಿಮಾವನ್ನು ಮಾಡಲು ಧೈರ್ಯ ಮಾಡಿದ್ದರು, ಅಷ್ಟೇ ಅಲ್ಲದೆ ಯಶಸ್ಸು ಪಡೆದರು ಎನ್ನಬಹುದು. ಮೆರ್ಲ್‌ಪಕ ಗಾಂಧಿ ಅವರು ಈ ಸಿನಿಮಾಕ್ಕೆ ಕಥೆ ಬರೆದಿದ್ದರು. ಸಂತೋಷ್‌ ಶೋಭನ್‌, ಕಾವ್ಯಾ ಥಾಪರ್‌ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸಿನಿಮಾವಿದು. 

ಮಾನಸಿಕವಾಗಿ ನಾನು ಗಟ್ಟಿಗಿತ್ತಿ, ಸುಲಭವಾಗಿ ಕಣ್ಣೀರಿಡುವುದಿಲ್ಲ: ನಟಿ ನಯನತಾರಾ

ಮಕ್ಕಳಿಗೆ ಅಸಲಿ ವಿಷಯ ಹೇಳಲ್ಲ! 
‘ಏಕ್‌ ಮಿನಿ ಕಥಾ’ ಎಂಬ ಈ ಸಿನಿಮಾದಲ್ಲಿ ಪುರುಷರ ಖಾಸಗಿ ಅಂಗವನ್ನೇ ಪ್ರಧಾನವಾಗಿಟ್ಟುಕೊಂಡು ಸಿನಿಮಾವನ್ನು ಕಟ್ಟಿಕೊಡಲಾಗಿದೆ. ವಯಸ್ಸಿಗೆ ಬಂದಂತೆ ಹುಡುಗ, ಹುಡುಗಿಯರಿಗೆ ಲೈಂಗಿಕ ಶಿಕ್ಷಣ ಹೇಳಿಕೊಡಬೇಕು ಎಂಬ ವಾದ ಇಂದು ನಿನ್ನೆಯದಲ್ಲ. ಚಿಕ್ಕ ಮಕ್ಕಳು ಇಂದು ಲೈಂಗಿಕತೆ ಬಗ್ಗೆಯೋ ಅಥವಾ ಖಾಸಗಿ ಅಂಗಗಳ ಬಗ್ಗೆ ಪ್ರಶ್ನೆ ಕೇಳಿದಾಗ ಪಾಲಕರು ನಿಜವಾದ ವಿಷಯವನ್ನು ಹೇಳದೆ ಕಟ್ಟುಕಥೆ ಹೇಳುತ್ತಾರೆ. ಆ ಕಥೆಗಳನ್ನು ನಂಬಿಕೊಂಡು ಮಕ್ಕಳು ಬೆಳೆಯೋದುಂಟು. ಕೆಲವರಿಗೆ 
ಕಾಲಕ್ರಮೇಣ ವಿಷಯಗಳ ಅರಿವಾದರೆ, ಇನ್ನೂ ಕೆಲವರಿಗೆ ಕೊನೇ ತನಕ ಗೊತ್ತೇ ಆಗೋದಿಲ್ಲ. 

ಕನ್ನಡ ಕಿರುತೆರೆ ಸುಂದರ ನಟಿಯರನ್ನು ಶೂರ್ಪಣಕಿಗೆ ಹೋಲಿಸಿದ ಸೃಜನ್ ಲೋಕೇಶ್! ಇದಾಗುತ್ತಾ ವಿವಾದ?

ಋತುಮತಿಯಾದರೆ ಏನು ಹೇಳ್ತಾರೆ? 
ಚಿಕ್ಕ ಮಕ್ಕಳು ಹೆಣ್ಣು ಋತುಮತಿಯಾಗೋದು ಅಂದ್ರೆ ಏನು ಎಂದು ಪ್ರಶ್ನೆ ಕೇಳಬಹುದು. ಆಗ ಕೆಲವರು ಕಾಗೆ ಬಂದು ಮುಟ್ಟಿ ಹೋಗುತ್ತದೆ, ಹಾಗಾಗಿ ನಾವು ನಾಲ್ಕು ದಿನ ಹೊರಗಡೆ ಇರ್ತೀವಿ ಎಂದು ಹಳ್ಳಿಗಳಲ್ಲಿ ಇಂದು ಕೂಡ ಹೇಳುವ ಪದ್ಧತಿ ಇದೆ. ಇದನ್ನೇ ಮಕ್ಕಳು ಹೌದು ಅಂತ ನಂಬಿಕೊಂಡು ಕೂರುವರು. ಗಂಡಾಗಲೀ, ಹೆಣ್ಣಾಗಲೀ ಈ ವಿಷಯದ ಬಗ್ಗೆ ತಿಳಿಕೆ ಇದ್ದರೆ ತುಂಬ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಇದ್ದಕ್ಕಿದ್ದಂತೆ ಚಿತ್ರರಂಗದಿಂದಲೇ ಮರೆಯಾದ ಈ ಸ್ಟಾರ್ ನಟಿಯರು ಈವಾಗೇನು ಮಾಡ್ತಿದ್ದಾರೆ ?

ಸಿನಿಮಾದ ಒನ್‌ಲೈನ್‌ ಕಥೆ ಏನು?
ಈಗ ಸಿನಿಮಾ ವಿಚಾರಕ್ಕೆ ಬರೋಣ. ಚಿಕ್ಕ ವಯಸ್ಸಿನಲ್ಲಿದ್ದಾಗ ಈ ಸಿನಿಮಾದ ನಾಯಕನಿಗೆ ತನ್ನ ಖಾಸಗಿ ಅಂಗದ ಬಗ್ಗೆ ಒಂದು ತಪ್ಪು ಕಪ್ಪನೆ ಬರುತ್ತದೆ. ತಂದೆ ಬಳಿ ಆ ವಿಷಯದ ಬಗ್ಗೆ ಅವನು ಪ್ರಸ್ತಾಪ ಮಾಡಿಕೊಂಡಾಗ, ಅಪ್ಪ “ಅಧಿಕಪ್ರಸಂಗ ಮಾಡುತ್ತೀಯಾ” ಎಂದು ಬೈದು, ಬಾಯಿ ಮುಚ್ಚಿಸಿರುತ್ತಾನೆ. ಆ ಹೀರೋ ಪ್ರೌಢಾವಸ್ಥೆಗೆ ಬಂದಾಗಲೂ ಅದೇ ವಿಚಾರ ಅವನ ತಲೆಗೆ ಹೊಕ್ಕಿರುತ್ತದೆ. ಪ್ರಾಮಾಣಿಕವಾಗಿ ಪ್ರೀತಿಸಿ, ಮದುವೆಯಾದರೂ ಕೂಡ ಪತ್ನಿಯ ಜೊತೆ ಸಂಸಾರ ಮಾಡಲು ಅವನು ಹಿಂದೇಟು ಹಾಕುತ್ತಾನೆ. ಇದೇ ಆಮೇಲೆ ಒಂದಷ್ಟು ಮನಸ್ತಾಪಕ್ಕೆ ಗುರಿಯಾಗುತ್ತದೆ. ಆಮೇಲೆ ಏನಾಗುತ್ತದೆ? ಈ ಸಮಸ್ಯೆ ಹೇಗೆ ಬಗೆಹರಿಯುತ್ತದೆ? ತನ್ನ ಸಮಸ್ಯೆಯನ್ನು ಯಾರಿಗೂ ಹೇಳಿಕೊಳ್ಳಲಾಗದೆ ಹೀರೋ ಹೇಗೆ ಒದ್ದಾಡುತ್ತಾನೆ? ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎನ್ನೋದನ್ನು ಸಿನಿಮಾದಲ್ಲಿ ನೋಡಿದರೆ ಚೆಂದ! 

ಈ ಕತೆಗೆ ತಕ್ಕಂತೆ ಸಿನಿಮಾದಲ್ಲಿ ಒಂದು ಇಂಟಿಮಸಿ ದೃಶ್ಯ ಇರಬಹುದು. ಇದನ್ನು ಬಿಟ್ಟರೆ ಕಥೆ ವಿಷಯ ಬೋಲ್ಡ್‌ ಆಗಿದ್ದರೂ ಕೂಡ, ಇಡೀ ಸಿನಿಮಾವನ್ನು ಅಶ್ಲೀಲವಾಗಿ ಚಿತ್ರೀಕರಣ ಮಾಡಿಲ್ಲ, ಮುಜುಗರಪಟ್ಟುಕೊಳ್ಳುವಂತೆಯೂ ಇಲ್ಲ.