- Home
- Entertainment
- Sandalwood
- ಇದ್ದಕ್ಕಿದ್ದಂತೆ ಚಿತ್ರರಂಗದಿಂದಲೇ ಮರೆಯಾದ ಈ ಸ್ಟಾರ್ ನಟಿಯರು ಈವಾಗೇನು ಮಾಡ್ತಿದ್ದಾರೆ ?
ಇದ್ದಕ್ಕಿದ್ದಂತೆ ಚಿತ್ರರಂಗದಿಂದಲೇ ಮರೆಯಾದ ಈ ಸ್ಟಾರ್ ನಟಿಯರು ಈವಾಗೇನು ಮಾಡ್ತಿದ್ದಾರೆ ?
ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮೋಡಿ ಮಾಡಿ, ಜನಮನ ಗೆದ್ದಿದ್ದ ನಟಿಯರು ಇದ್ದಕ್ಕಿಂತೆ ನಟನೆಯಿಂದಲೇ ದೂರ ಸರಿದರು. ಅವರಲ್ಲಿ ಟಾಪ್ ನಟಿಯರ ಮಾಹಿತಿ ಇಲ್ಲಿದೆ. ಇವರು ನಿಮಗೂ ನೆನಪಿದ್ದಾರ ಹೇಳಿ?

ಕನ್ನಡ ಚಿತ್ರರಂಗದಲ್ಲಿ ನಾಯಕರು ದೀರ್ಘಕಾಲ ಉಳಿಯುತ್ತಾರೆ. ಆದರೆ ನಾಯಕಿಗಳು, ಕೆಲವು ಹಿಟ್ ಸಿನಿಮಾಗಳನ್ನು ನೀಡಿ ನಂತರ ಸಿನಿಮಾರಂಗದಿಂದಲೇ ದೂರವಾಗುತ್ತಾರೆ. ಆಮೇಲೆ ಅವರು ಏನಾದರು? ಎಲ್ಲಿ ಹೋದರು? ಈವಾಗ ಎಲ್ಲಿದ್ದಾರೆ? ಅನ್ನೋದು ಯಾವುದೂ ಕೂಡ ಗೊತ್ತಿಲ್ಲದಂತೆ ಮರೆಯಾಗಿದ್ದಾರೆ. ಅಂತಹ ಒಂದಷ್ಟು ಕನ್ನಡ ನಟಿಯರ (Kannada Actresses) ಮಾಹಿತಿ ಇಲ್ಲಿದೆ…
ಅರ್ಚನಾ (Archana) :
ಇವರು ನೆನಪಿರಬೇಕು ಅಲ್ವಾ? ಯಜಮಾನ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು, ಅರ್ಚನಾ ಹಾಗೂ ವಿಷ್ಣುವರ್ಧನ್ ಜೋಡಿಯ ಓ ಮೈನಾ ಓ ಮೈನಾ ಹಾಡು ಇವತ್ತಿಗೂ ಕೂಡ ಜನಮನದಲ್ಲಿದೆ. ಅಲ್ಲದೇ ಈ ಹೃದಯ ನಿನಗಾಗಿ, ಮಾವ ಮಾವ ಮದುವೆ ಮಾಡು, ನೀಲಾಂಬರಿ ಸೇರಿ ಕನ್ನಡದ ಹಲವು ಸಿನಿಮಾಗಳಲ್ಲೂ ಸಹ ಅರ್ಚನಾ ಬಣ್ಣ ಹಚ್ಚಿದ್ದರು. ಇವರು ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು, ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಆದಿತ್ಯಾ ಸಿನಿಮಾ ಮೂಲಕ. ಮದುವೆಯಾದ ಬಳಿಕ ಇವರು ಸಿನಿಮಾದಿಂದ ದೂರ ಉಳಿದರು, ಆಮೇಲೆ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ ನಟಿ.
ರೇಖಾ (Rekha) :
ಹುಚ್ಚ ಸಿನಿಮಾ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ನಟಿ ರೇಖಾ, ಇವರು ನಟಿಸಿದ ಟೀನೇಜ್ ಲವ್ ಸ್ಟೋರಿ ಇರುವ ಚಿತ್ರ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಜಿಂಕೆ ಮರಿ ಓಡ್ತೈತೆ ನೋಡ್ಳಾ ಮಗಾ ಹಾಡನ್ನು, ಇವತ್ತಿಗೂ ಪಡ್ಡೆಗಳ ಬಾಯಲ್ಲಿ ಕೇಳಬಹುದು. ತೆಲುಗು ಸಿನಿಮಾಗಳಲ್ಲೂ, ರಿಯಾಲಿಟಿ ಶೋಗಳನ್ನು ಭಾಗವಹಿಸಿದ್ದ ರೇಖಾ ಇದ್ದಕ್ಕಿದ್ದಂತೆ ಸಿನಿಮಾದಿಂದ ದೂರ ಉಳಿದರು. 10 ವರ್ಷಗಳ ಬಳಿಕ ತೆಲುಗು ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅವರು ಇನ್ನೂ ಮದುವೆಯಾಗಿಲ್ಲ, ಜೊತೆಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಈ ನಟಿ.
ಸಿಂಧೂ ಮೆನನ್ (Sindhu Menon):
ಮಲಯಾಳಿಯಾದರೂ ಹುಟ್ಟಿದ್ದು ಬೆಳೆದದ್ದು, ಗುರುತಿಸಿಕೊಂಡದ್ದು ಕನ್ನಡ ಚಿತ್ರರಂಗದಲ್ಲಿಯೇ. ಜೊತೆಗೆ ಮಲಯಾಲಂ, ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲನಟಿಯಾಗಿ ಕನ್ನಡ ಸಿನಿಮಾದಿಂದಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಿಂಧೂ ಮೆನನ್, ನಂದಿ ಸಿನಿಮಾದಲ್ಲಿ ಸುದೀಪ್ ಗೆ ನಾಯಕಿಯಾಗಿ, ಖುಷಿ ಸಿನಿಮಾದಲ್ಲಿ ವಿಜಯ್ ರಾಘವೇಂದ್ರಗೆ ನಾಯಕಿಯಾಗಿ ಗಮನ ಸೆಳೆದಿದ್ದರು. 2010ರಲ್ಲಿ ಐಟಿ ಫ್ರೊಫೆಶನಲ್ ಪ್ರಭು ಜೊತೆ ವಿವಾಹವಾದ ಬಳಿಕ ಸಿನಿಮಾದಿಂದ ದೂರ ಉಳಿದು ಸದ್ಯ ಯುಕೆನಲ್ಲಿ ಸೆಟಲ್ ಆಗಿದ್ದಾರೆ ಸಿಂಧೂ ಮೆನನ್. ಇವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ.
ದೀಪಾ ಸನ್ನಿಧಿ (Deepa Sannidhi):
ಸಿನಿ ರಸಿಕರಿಗೆ ಒಂಥರಾ ಕ್ರೇಜ್ ಹುಟ್ಟಿಸಿದ ಸಿನಿಮಾಗಳಲ್ಲಿ ಒಂದು ಪರಮಾತ್ಮ ಸಿನಿಮಾ, ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಪಾತ್ರ ಹೃದಯಕ್ಕೆ ಎಷ್ಟು ಹತ್ತಿರವಾಗಿತ್ತೋ ಅಷ್ಟೇ ಗಮನ ಸೆಳೆದ ಪಾತ್ರ ದೀಪಾ ಸನ್ನಿಧಿಯವರದ್ದು. ಹಾಗೇ ನೋಡಿದರೆ, ದೀಪಾ ಸನ್ನಿಧಿ ಕನ್ನಡದಲ್ಲಿ ನಟಿಸಿದ ಎಲ್ಲಾ ಸಿನಿಮಾಗಳು ಸಹ ಸೂಪರ್ ಹಿಟ್ ಆಗಿದ್ದವು. ಸಾರಥಿ, ಜಾನು, ಚೌಕ, ಸಕ್ಕರೆ, ಚಕ್ರವರ್ತಿ ಸಿನಿಮಾಗಳಲ್ಲಿ ದೀಪಾ ನಟಿಸಿದ್ದರು. ದರ್ಶನ್ ಜೊತೆಗಿನ ಚಕ್ರವರ್ತಿ ಇವರು ನಟಿಸಿದ ಕೊನೆಯ ಸಿನಿಮಾ. ಅವಕಾಶದ ಕೊರತೆಯಿಂದ ಈ ನಟಿ ಸಿನಿಮಾದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.
ಡೈಸಿ ಬೋಪಣ್ಣ (Daisy Bopanna) :
ಕೊಡಗಿನ ಬೆಡಗಿ ಡೈಸಿ ಬೋಪಣ್ಣ, ಗಾಳಿಪಟ ಚಿತ್ರದ ಮೂಲಕ ಕನ್ನಡಿಗರ ಮೋಸ್ಟ್ ಫೇವರಿಟ್ ನಟಿ ಎನಿಸಿಕೊಂಡರು. ಇವರು ಐಶ್ವರ್ಯ, ರಾಮ ಶಾಮ ಭಾಮ, ಸತ್ಯವಾನ್ ಸಾವಿತ್ರಿ, ಬಿಂಬ, ಸೇರಿ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದರು. ಕನ್ನಡದಲ್ಲಿ ಕೊನೆಯದಾಗಿ ಕ್ರೇಜಿ ಲೋಕ ಸಿನಿಮಾದಲ್ಲಿ ನಟಿಸಿದ್ದರು. 2012ರಲ್ಲಿ ಮುಂಬೈ ಮೂಲದ ಉದ್ಯಮಿಯನ್ನು ಮದುವೆಯಾಗಿ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ ಡೈಸಿ ಬೋಪಣ್ಣ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಹೊಸ ಹೊಸ ವಿಡೀಯೋ ಮೂಲಕ ಮನರಂಜನೆ ನೀಡೋದನ್ನು ಮಾತ್ರ ಮರೆತಿಲ್ಲ ನಟಿ.
ದಾಮಿನಿ (Damini):
ಉಪೇಂದ್ರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ದಾಮಿನಿ . ಇವರು ಸ್ವತಂತ್ರ ಪಾಳ್ಯ, ಅಸುರ ಸಿನಿಮಾದಲ್ಲೂ ನಟಿಸಿದ್ದರು. ಅಸುರ ಸಿನಿಮಾದ ನಂಗು ಮೊದಲು ನಿಂಗು ಮೊದಲು ಇಂಥ ಪ್ರೀತಿ ಪ್ರೇಮ ಹಾಡು ಇವತ್ತಿಗೂ ಪ್ರೇಮಿಗಳ ಹೃದಯದಲ್ಲಿ ಸದ್ದು ಮಾಡುತ್ತದೆ. ಆರಂಭದಲ್ಲಿ ಹಿಟ್ ಚಿತ್ರಗಳನ್ನು ನೀಡಿ, ನಂತರ ಸಾಲು ಸಾಲು ಸೋಲು ಅನುಭವಿಸಿ, ಅವಕಾಶ ವಂಚಿತರಾಗಿ ಸಿನಿಮಾದಿಂದ ದೂರವಾದರು ಎನ್ನಲಾಗುತ್ತೆ.