ನಟ ಸಂಜಯ್ ದತ್ ಅವರು ಮಂಗಳವಾರ ಮುಂಬೈನಲ್ಲಿ ತಮ್ಮ ಮೊದಲ ಕೊರೋನಾ ಲಸಿಕೆ ಪಡೆದಿದ್ದಾರೆ. 61 ವರ್ಷದ ಸಂಜಯ್ ದತ್ ಅವರು ಲಸಿಕೆ ಕೇಂದ್ರದಲ್ಲಿ ಶಾಟ್ ಸ್ವೀಕರಿಸುವ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಲಸಿಕೆ ನೀಡಿದ ವೈದ್ಯರನ್ನು ಅಭಿನಂದಿಸಿದ್ದಾರೆ. COVID-19 ಲಸಿಕೆಯ ಮೊದಲ ಡೋಸ್ ಪಡೆದ ಖ್ಯಾತನಾಮರ ಪಟ್ಟಿಗೆ ಸಂಜಯ್ ದತ್ ಇತ್ತೀಚಿನ ಸೇರ್ಪಡೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ ನಟ.

ವಿಮಾನ ಹತ್ತೋ ಮುನ್ನ ಅಪ್ಪನ ಮತ್ತೊಮ್ಮೆ ಹಗ್ ಮಾಡೋಕೆ ಓಡಿ ಬಂದ ಜಾಹ್ನವಿ.

ಬಿಕೆಸಿ ಲಸಿಕೆ ಕೇಂದ್ರದಲ್ಲಿ ಇಂದು ನನ್ನ ಮೊದಲ ಶಾಟ್ ಕೋವಿಡ್ -19 ಲಸಿಕೆ ಸ್ವೀಕರಿಸಿದೆ. ಇದಕ್ಕಾಗಿ ಡಾ. ಧೇರ್ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ! ಅವರ ಕಠಿಣ ಪರಿಶ್ರಮದ ಬಗ್ಗೆ ಗೌರವವಿದೆ. ಜೈ ಹಿಂದ್ ಎಂದು ಬರೆದಿದ್ದಾರೆ.

ಕಳೆದ ವರ್ಷ ಸಂಜಯ್ ದತ್ ಅವರ ಆರೋಗ್ಯ ಸ್ಥಿತಿಯಿಂದಾಗಿ ಅಕ್ಟೋಬರ್‌ನಲ್ಲಿ ಕೆಲಸದಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದರು. ಕ್ಯಾನ್ಸರ್ ಚಿಕಿತ್ಸೆ ತಿಂಗಳ ನಂತರ ಕೆಲಸ ಪುನರಾರಂಭಿಸಿದ್ದರು.