ಮುಂಬೈ ವಿಮಾನ ನಿಲ್ದಾಣದಲ್ಲಿ ಜಾಹ್ನವಿ ಕಪೂರ್ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ತನ್ನ ಹಾರರ್-ಕಾಮೆಡಿ ಸಿನಿಮಾ ರೂಹಿ ಬಿಡುಗಡೆಯ ಮತ್ತು ತನ್ನ ಮುಂಬರುವ ಚಿತ್ರ ಗುಡ್ ಲಕ್ ಜೆರ್ರಿ ಚಿತ್ರದ ಸುತ್ತಾಟದಲ್ಲಿ ನಿರತರಾಗಿರುವ ಈ ನಟಿ ಅವರ ತಂದೆ ಬೋನಿ ಕಪೂರ್ ಅವರೊಂದಿಗೆ ಇದ್ದರು.

ಪಾಪರಾಜಿ ಖಾತೆ ಹಂಚಿಕೊಂಡ ವೀಡಿಯೊದಲ್ಲಿ ಜಾಹ್ನವಿ ಬೋನಿಯೊಂದಿಗೆ ಕಾರಿನಿಂದ ಇಳಿದು ಬರುವುದನ್ನು ಕಾಣಬಹುದು. ಪಾಪರಾಜಿಗಳು ಪೋಸ್ ನೀಡುವಂತೆ ವಿನಂತಿಸಿದಾಗ ನಟಿಯ ಗಮನವು ಅವಳ ತಂದೆಯ ಮೇಲೆ ಇತ್ತು.

ಅಭಿಷೇಕ್ ಎಲ್ಲೂ ಸಲ್ಲದ ನಟ, ಚಂದದ ಹೆಂಡ್ತಿ ಇದ್ದಾಳಷ್ಟೆ ಎಂದ ನೆಟ್ಟಿಗ

ನಿರ್ಗಮನ ಟರ್ಮಿನಲ್ಗೆ ತೆರಳುವ ಮೊದಲು ನಟಿ ಪಾಪರಾಜಿಗಳಿಗೆ ವಿಶ್ ಮಾಡಿದ್ದಾರೆ. ಆರಂಭಿಕ ಪ್ರಕ್ರಿಯೆ ಪೂರ್ಣಗೊಂಡ ನಂತರ, ಜಾಹ್ನವಿ ತಂದೆಗೆ ವಿದಾಯ ಹೇಳಿ ತನ್ನ ಲಗೇಜ್ ಟ್ರಾಲಿಯನ್ನು ಒಳಗೆ ತಳ್ಳಿದ್ದಾರೆ.

ಆದರೆ ನಟಿ ಕೊನೆಗೆ ಹೊರಡುವ ಮೊದಲು ಮತ್ತೊಮ್ಮೆ ಓಡಿ ಬಂದು ಅಪ್ಪನನ್ನು ಹಗ್ ಮಾಡುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋಗೆ ಫ್ಯಾನ್ಸ್ ಹಾರ್ಟ್ ರಿಯಾಕ್ಟ್ ಮಾಡಿದ್ದಾರೆ.