Asianet Suvarna News Asianet Suvarna News

30 ವರ್ಷಗಳ ಬಳಿಕ ತವರೂರು ಕಾಶ್ಮೀರಕ್ಕೆ ಬಾಲಿವುಡ್​ ನಟಿ: ಅಂದಿನ ಕರಾಳ ದಿನ ನೆನೆದ ಸಂದೀಪಾ

 ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ ಕಾಶ್ಮೀರದಿಂದ ವಲಸೆ ಬಂದ ಬಾಲಿವುಡ್​ ತಾರೆ ಸಂದೀಪಾ ಧರ್​
 

Sandeepa Dhar visits her abandoned Srinagar house after 30 years suc
Author
First Published Oct 12, 2023, 2:27 PM IST

ಕಳೆದ ವರ್ಷ ಮಾರ್ಚ್​ನಲ್ಲಿ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಇನ್ನೂ ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ನರಮೇಧ ಹೇಗೆ ನಡೆದಿತ್ತು ಎಂದು ಎಳೆಎಳೆಯಾಗಿ ಕ್ರೌರ್ಯದ ಮುಖ ಬಿಚ್ಚಿಟ್ಟ ಈ ಚಿತ್ರದಲ್ಲಿ ತೋರಿಸಿರುವುದೆಲ್ಲಾ ಸುಳ್ಳು ಎಂದು ಒಂದು ವರ್ಗ ಇಂದಿಗೂ ಹೇಳುತ್ತಲೇ ಬಂದಿದೆ. 'ದಿ ಕಾಶ್ಮೀರ್ ಫೈಲ್ಸ್ ಕೇವಲ ಚಲನಚಿತ್ರವಲ್ಲ. ಇದು ನರಮೇಧದಿಂದ ಬಳಲುತ್ತಿರುವ ಎಲ್ಲ ಜನರನ್ನು ಪ್ರತಿನಿಧಿಸುವ ಚಿತ್ರವಾಗಿದೆ. ಚಿತ್ರವು ಯಾವಾಗಲೂ ಜನರ ಹೃದಯಕ್ಕೆ ಹತ್ತಿರವಾಗಿರಬೇಕು. ಅಂತೆಯೇ  ವಿವೇಕ್ ಅಗ್ನಿಹೋತ್ರಿ ಮತ್ತು ಚಿತ್ರದೊಂದಿಗೆ ಭಾಗಿಯಾಗಿರುವ ಎಲ್ಲ ಜನರು ಈ ಚಿತ್ರದಲ್ಲಿ ಇದನ್ನೇ ಮಾಡಿದ್ದಾರೆ. ಈ ಚಿತ್ರ ಬಿಡುಗಡೆಯಾದಾಗಿನಿಂದ ಇದು ಒಂದು ವರ್ಗವನ್ನು ಬಹಳ ನೋಯಿಸುತ್ತಿದೆ. ಇವೆಲ್ಲಾ ಕಟ್ಟುಕಥೆ, ಇಂಥ ಘಟನೆ ಸಂಭವಿಸಿಯೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಅದನ್ನು ಸಾಬೀತು ಪಡಿಸಲೂ ನೋಡಿದರು. ಆದರೆ ಅದು ಸಾಧ್ಯವಾಗಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಇದು ಚಿಂದಿ ಉಡಾಯಿಸಿದಾಗ ಅದು ಕೂಡ ಕೆಲವರ ಅಸಮಾಧಾನಕ್ಕೆ ಕಾರಣವಾಯಿತು. ಚಿತ್ರದ  ನೈಜತೆಯನ್ನು ಅವಮಾನಿಸುವ ಪ್ರಯತ್ನವೂ ನಡೆಯಿತು ಎಂದು ಅನುಪಮ್ ಖೇರ್​ ಬೇಸರದಿಂದ ನುಡಿದಿದ್ದರು. 

ಇದನ್ನು ವಿರೋಧಿಸುವವರು ಎಷ್ಟೇ ಇದ್ದರೂ, ಖುದ್ದು ಕಣ್ಣಾರೆ ಕಂಡಿರುವ ಹತ್ಯಾಕಾಂಡದ ವಿರುದ್ಧ ಇದಾಗಲೇ ಹಲವರು ದನಿ ಎತ್ತಿದ್ದಾರೆ. ಇದೀಗ ಕಾಶ್ಮೀರದಲ್ಲಿ ಬದಲಾವಣೆಯಾಗುತ್ತಿದೆ. ಉಗ್ರರ ನಾಡು ಎಂದು ಕಾಲಿಡಲು ಹೆದರುತ್ತಿರುವ ಸ್ಥಿತಿ ಇಂದು ಮರೆಯಾಗುತ್ತಿದೆ. ಆರ್ಟಿಕಲ್​ 370 ತೆಗೆದ ಬಳಿಕ ಅಲ್ಲಿಯ ಚಿತ್ರಣ ಬದಲಾಗಿದ್ದು, ಜನರು ಧೈರ್ಯದಿಂದ  ಕಾಶ್ಮೀರದತ್ತ ಮುಖಮಾಡುತ್ತಿದ್ದಾರೆ. ಇದೀಗ 30 ವರ್ಷಗಳ ಬಳಿಕ ತಮ್ಮ ತವರು ಕಾಶ್ಮೀರಕ್ಕೆ ಹೋಗಿ ಅಂದಿನ ಸ್ಥಿತಿಯನ್ನು, ಕರಾಳ ದಿನವನ್ನು ನೆನಪಿಸಿಕೊಂಡಿದ್ದಾರೆ ಬಾಲಿವುಡ್​ ತಾರೆ ಸಂದೀಪಾ ಧರ್​. ಕಾಶ್ಮೀರಿ ಪಂಡಿತರಾಗಿರುವ ಸಂದೀಪಾ ಅವರು 30 ವರ್ಷಗಳ ಹಿಂದೆ ಹೇಗೆ ತಮ್ಮ ಇಡೀ ಕುಟುಂಬ ಜೀವ ಭಯದಲ್ಲಿ  ಶ್ರೀನಗರದಿಂದ ರಾತ್ರೋರಾತ್ರಿ ಓಡಿಬಂದಿತ್ತು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.  ಒಂದೇ ಸೂಟ್‌ಕೇಸ್‌ನಲ್ಲಿ ನಮಗೆ ಸಾಧ್ಯವಿರುವ ಎಲ್ಲವನ್ನೂ ಪ್ಯಾಕ್ ಮಾಡಿ ಪಲಾಯನ ಮಾಡಿದ್ದೆವು ಎಂದಿದ್ದಾರೆ.

ಪ್ಯಾಲೆಸ್ತೀನ್​ ಉಗ್ರರ ಗುಂಡಿಗೆ ನಾಗಿನ್​ ಸೀರಿಯಲ್​ ಖ್ಯಾತಿಯ ನಟಿ ಮಧುರಾ ಸಂಬಂಧಿಕರ ಇಡೀ ಕುಟುಂಬ ಬಲಿ!

ಈಗ ಅವರು ಇರುವ ಮನೆಯ  ಅವಶೇಷ ಮಾತ್ರ ಉಳಿದಿದೆ. ತಮ್ಮ ಇನ್ಸ್​ಸ್ಟಾಗ್ರಾಮ್​ ಖಾತೆಯಲ್ಲಿ ಅವರು ಈ ವಿಷಯವನ್ನು ಬರೆದುಕೊಂಡಿದ್ದಾರೆ. ಮೂರು ದಶಕಗಳ ಹಿಂದೆ ಹೇಗೆ ತಾವು ಜೀವಭಯದಿಂದ ಓಡಿ ಹೋದೆವು ಎನ್ನುವುದನ್ನು ವಿವರಿಸಿದ್ದಾರೆ. ಇಡೀ ಮನೆಯ ಅವಶೇಷ ತೋರಿಸಿರುವ ಅವರು, ತಾವು ಹೇಗೆ ಇಲ್ಲಿ ಆಟವಾಡಿಕೊಂಡಿದ್ದೆವು ಎಂದು ಬಾಲ್ಯದ ನೆನಪನ್ನು ಮಾಡಿಕೊಂಡಿದ್ದಾರೆ.  1990 ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸಮಯದಲ್ಲಿ ತಮ್ಮ ಕುಟುಂಬ  ಕಾಶ್ಮೀರದಿಂದ ವಲಸೆ ಹೋಗಬೇಕಾಯಿತು.  ತಮ್ಮ ಕುಟುಂಬವು ಟ್ರಕ್‌ನ ಹಿಂಬದಿಯಲ್ಲಿ ಮಧ್ಯರಾತ್ರಿಯಲ್ಲಿ ತಮ್ಮ ತಾಯ್ನಾಡನ್ನು ಹೇಗೆ ತೊರೆಯಬೇಕಾಯಿತು ಎಂಬುದಾಗಿ ಈ ಹಿಂದೆಯೇ ನಟಿ ವಿವರಿಸಿದ್ದರು.

ಕಾಶ್ಮೀರಿ ಫೈಲ್ಸ್​ ಚಿತ್ರದ ಬಿಡುಗಡೆಯ ಬಳಿಕ ಅದರಲ್ಲಿ ತೋರಿಸಿರುವ ಒಂದೊಂದು ವಿಷಯವೂ ಸತ್ಯವಾದದ್ದು ಎಂದಿದ್ದರು. ಅದಕ್ಕೆ ತಾವೇ ಸಾಕ್ಷಿ ಎಂದಿದ್ದ ನಟಿ, ಇಂಥ ಕಟು ಸತ್ಯವನ್ನು ಪ್ರಪಂಚಕ್ಕೆ ತೋರಿಸಿದ್ದ  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಧನ್ಯವಾದ ಹೇಳಿದ್ದರು. ಅದು ನನ್ನ ಸ್ವಂತ ಕಥೆಯಂತೆ ತೋರುತ್ತಿದೆ ಎಂದರು. ಅಂದಿನ ದಿನ ಇಂದಿಗೂ ನೆನಪಿದೆ. ಕಾಶ್ಮೀರಿ ಪಂಡಿತರ ಮಾರಣ ಹೋಮ ನಡೆಯುತ್ತಿತ್ತು. ಕಾಶ್ಮೀರಿ ಪಂಡಿತರು  ಮಹಿಳೆಯರನ್ನು ಅಲ್ಲಿಯೇ ಬಿಟ್ಟು ಕಾಶ್ಮೀರವನ್ನು ತೊರೆಯಬೇಕೆಂದು ಅವರು ಘೋಷಿಸಿದ್ದರು.  ನನ್ನ ಕುಟುಂಬವು  ಪಲಾಯನ ಮಾಡಲು ನಿರ್ಧರಿಸಿತು, ಟ್ರಕ್‌ನ ಹಿಂಭಾಗದಲ್ಲಿ ನಮ್ಮನ್ನೆಲ್ಲಾ ಮರೆ ಮಾಡಿಸಿ ಕರೆದುಕೊಂಡು ಬರಲಾಗಿತ್ತು. ನನ್ನ ಚಿಕ್ಕ ಸೋದರಳಿಯ ಸಹೋದರಿಯನ್ನು ನನ್ನ ತಂದೆಯ ಕಾಲುಗಳ ಹಿಂದೆ ಸೀಟಿನ ಕೆಳಗೆ ಮರೆಮಾಡಿ ಕರೆದುಕೊಂಡು ಬಂದಿದ್ದರು. ಏಕೆಂದರೆ ಹುಡುಗಿಯರು, ಮಹಿಳೆಯರನ್ನು ಅಲ್ಲಿಯೇ ಬಿಡುವಂತೆ ಆದೇಶವಾಗಿದ್ದರಿಂದ ಮರೆ ಮಾಡುವುದು ಅನಿವಾರ್ಯವಾಗಿತ್ತು ಎಂದು ಈ ಹಿಂದೆ  ನಟಿ ಹೇಳಿದ್ದರು.

ಕುಡುಕನಿಂದ ನಟಿಗೆ ವಿಮಾನದಲ್ಲಿ ರಾತ್ರಿಯೆಲ್ಲ ಕಿರುಕುಳ! ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ದಿವ್ಯಪ್ರಭಾ

 

Follow Us:
Download App:
  • android
  • ios