ಬೆಂಗಳೂರು/ ಚೆನ್ನೈ(ಅ. 09) ಸ್ಯಾಂಡಲ್ ವುಡ್  ಹಿರಿಯ ನಿರ್ದೇಶಕ ವಿಜಯ ರೆಡ್ಡಿ ನಿಧನರಾಗಿದ್ದಾರೆ  ಸ್ಟಾರ್ ಡೈರೆಕ್ಟರ್ ಎನಿಸಿಕೊಂಡಿದ್ದ ವಿಜಯ ರೆಡ್ಡಿ, ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಹುಅಂಗಾಗ ವೈಫಲ್ಯದಿಂದ ವಿಜಯ ರೆಡ್ಡಿ  ಕೊನೆ ಉಸಿರು ಎಳೆದಿದ್ದು ಅವರಿಗೆ 84 ವರ್ಷ ವಯಸ್ಸಾಗಿತ್ತು.

ಕನ್ನಡದಲ್ಲಿ ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳ ನಿರ್ದೇಶನ ಮಾಡಿದ್ದು, ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿದೆ.

ಎಸ್‌ಪಿಬಿಗೆ ಕನ್ನಡದಲ್ಲೇ ಸಂತಾಪ ಸೂಚಿಸಿ ಕಣ್ಣೀರು ಹಾಕಿದ ಜಾನಕಿ

1970ರಲ್ಲಿ ರಂಗಮಹಲ್ ರಹಸ್ಯ ವಿಜಯ್ ರೆಡ್ಡಿಯ ಮೊದಲ ಸಿನಿಮಾ.ಡಾ. ರಾಜ್ ಕುಮಾರ್ ಅಭಿನಯದ ಗಂಧದ ಗುಡಿ, ಮಯೂರ, ಶ್ರೀನಿವಾಸ ಕಲ್ಯಾಣ, ಬಡವರ ಬಂಧು, ಸನಾದಿ ಅಪ್ಪಣ್ಣ, ನೀ ನನ್ನ ಗೆಲ್ಲಲಾರೆ, ಭಕ್ತ ಪ್ರಹ್ಲಾದ, ಹುಲಿಯ ಹಾಲಿನ ಮೇವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.

ಆಟೋ ರಾಜ, ಮುಳ್ಳಿನ ಗುಲಾಬಿ, ಖದೀಮ ಕಳ್ಳರು, ಕುಂತಿ ಪುತ್ರ, ಮೋಜುಗಾರ ಸೊಗಸುಗಾರ ವಿಜಯ ನಿರ್ದೇಶನದ ಮತ್ತಷ್ಟು ಸಿನಿಮಾಗಳು.  ಇತ್ತಿಚೆಗಷ್ಟೆ ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಗಾನ ಲೋಕವನ್ನು ಅಗಲಿದ್ದರು.