ಕನ್ನಡದಲ್ಲೇ SPBಗೆ ಸಂತಾಪ ಸೂಚಿಸಿ ಖ್ಯಾತ ಗಾಯಕಿ ಎಸ್ .ಜಾನಕಿ ಕಣ್ಣೀರು
ಸಂಗೀತ ದಿಗ್ಗಜನ ನೆನೆದ ಹಿರಿಯ ಗಾಯಕಿ/ ಜಾನಕಿ ಕಣ್ಣಿನಲ್ಲಿ ಎಸ್‌ಪಿಬಿ/ ಬಾಲು ಸಂಗೀತ ಸಾಮ್ರಾಟನಾಗಿದ್ದು ಹೇಗೆ?/ ಕನ್ನಡದಲ್ಲಿಯೇ ವಿವರಣೆ ನೀಡಿದ ಜಾನಕಿ
ಬೆಂಗಳೂರು(ಸೆ. 27) ಸಂಗೀತದ ದೊಡ್ಡ ಖಜಾನೆಯನ್ನು ಬಿಟ್ಟು ನಡೆದ ಸ್ವರ ಸಾಮ್ರಾಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಹಿರಿಯ ಗಾಯಕಿ ಎಸ್. ಜಾನಕಿ ನೆನೆದಿದ್ದಾರೆ. ಕನ್ನಡದಲ್ಲಿಯೇ ಎಸ್‌ಪಿಬಿ ಅವರೊಂದಿಗಿನ ಬಾಂಧ್ಯವ ವಿವರಿಸಿರುವುದು ವಿಶೇಷ.
"
ಎಸ್ ಜಾನಕಿ ಹುಡುಕಿದ ಪ್ರತಿಭೆ; ಆ ತಾಯಿಯ ನೋವು
ಇಂಜಿನಿಯರ್ ಆಗಬೇಕಿದ್ದ ಬಾಲು ಗಾಯಕರಾಗಿ ಸಂಗೀತ ಲೋಕವನ್ನು ಆಳಿದ್ದು ಜಾನಕಿಯವರ ಆ ಒಂದು ಮಾತಿನಿಂದ. 16 ವರ್ಷಕ್ಕೆ ಸಂಗೀತ ಅಭ್ಯಾಸ ಶುರು ಮಾಡಿದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂಜಿನಿಯರ್ ಆಗಬೇಕಿತ್ತು ಆದರೆ ಗಾಯಕಿ ಜಾನಕಿ ಅವರು ಹೇಳಿದ ಈ ಮಾತುಗಳಿಂದ ಎಸ್‌ಪಿಬಿ ಗಾಯನವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು.
ಜಾನಕಿಯವರು ಎಸ್‌ಪಿಬಿ ತಮಗೆ ಪರಿಚಯವಾದ ರೀತಿ, ಅವರು ಸಂಗೀತ ಲೋಕದಲ್ಲಿ ಮುಂದುವರಿದು ಮಾಡಿದ ಸಾಧನೆ ಎಲ್ಲವನ್ನು ಕನ್ನಡದಲ್ಲಿಯೇ ವಿವರಿಸಿದ್ದಾರೆ. ನೋಡಿಕೊಂಡು ಬನ್ನಿ ..