ಕೆಜಿಎಫ್‌ ಮೂಲಕ ವರ್ಲ್ಡ್ ಲೆವೆಲ್ ಆಕ್ಟರ್ ಎನಿಸಿಕೊಂಡಿರುವ ಯಶ್‌ಗೆ ಬಾಲಿವುಡ್‌ನಿಂದ ಬೇಡಿಕೆ ಬರ್ತನೇ ಇದೆ. ಇದೀಗ ಶಾರೂಖ್ ಸಿನಿಮಾದಲ್ಲಿ ಯಶ್ ನಟಿಸ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಾ ಇದೆ. 

ನವೀನ್ ಕುಮಾರ್ ಎಂಬ ಮೈಸೂರಿನ ಹುಡುಗ ಯಶ್ ಅನ್ನೋ ಹೆಸರಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ತನ್ನ ಸಾಮ್ರಾಜ್ಯ ಕಟ್ಟಿರೋದು ಜಗತ್ತಿಗೇ ಗೊತ್ತು. ಇವರ ನಟನೆಯ ಕೆಜಿಎಫ್‌ ಸಿನಿಮಾ ಎರಡು ಭಾಗಗಳಲ್ಲಿ ಬಂತು. ಕೆಜಿಎಫ್ ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳು ಯಶ್ ಅನ್ನೋ ಕನ್ನಡದ ಹುಡುಗನನ್ನು ವರ್ಲ್ಡ್ ಲೆವೆಲ್‌ಗೆ ಕೊಂಡೊಯ್ಯಿತು. ಇವರ ಕೆಜಿಎಫ್‌ ಸಿನಿಮಾಗಳಲ್ಲಿ ಬಾಲಿವುಡ್ ನಟ, ನಟಿಯರು ಕಾಣಿಸಿಕೊಂಡರು. ಇದೀಗ ಯಶ್ ಅವರ ಟಾಕ್ಸಿಕ್ ಸಿನಿಮಾದ ಘೋಷಣೆ ಆಗಿದೆ. ಯಶ್ ಈ ಸಿನಿಮಾ ಶೂಟಿಂಗ್‌ ಶುರುವಿಟ್ಟಿದ್ದಾರೆ ಅಂತ ಒಂದು ಸುದ್ದಿ ಇದೆ. ಆ ನಡುವೆಯೇ ಯಶ್‌ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಏನೇನೆಲ್ಲ ಸುದ್ದಿಗಳು ಹರಿದಾಡ್ತನೇ ಇವೆ.

ಸದ್ಯಕ್ಕೆ ಈಗ ಹೊಸ ಸುದ್ದಿಯೊಂದು ಕೇಳಿ ಬರ್ತಿದೆ. ಬಾಲಿವುಡ್ ಬಾದ್‌ಷಾ ಶಾರೂಖ್‌ ಜೊತೆಗೆ ಯಶ್ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿಯದು. ಯಶ್ ಈಗಾಗಲೇ ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆಯಾದರೂ, ಅಧಿಕೃತವಾಗಿಲ್ಲ. ಈ ಚಿತ್ರದಲ್ಲಿ ರಾವಣನಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಇದೀಗ ಹೊಸ ಸುದ್ದಿ ಏನೆಂದರೆ, ಮತ್ತೊಂದು ಬಾಲಿವುಡ್‌ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ನಟಿಸಲಿದ್ದಾರೆ ಎಂಬ ವದಂತಿ ಬಿಟೌನ್‌ ಅಂಗಳದಲ್ಲಿ ಗುಲ್ಲೆಬ್ಬಿಸಿದೆ. ಶಾರುಖ್‌ ಖಾನ್‌ ಜತೆಗೂ ಒಂದು ಸಿನಿಮಾದಲ್ಲಿ ನಟಿಸುವ ವಿಚಾರವೂ ಇದೀಗ ಮುನ್ನೆಲೆಗೆ ಬಂದಿದೆ.

ಯಶ್‌ ಗಡ್ಡದ ಬಗ್ಗೆ ಕಾಲೆಳೆದ ಹಂಸಲೇಖ, ಕಲಾರಂಗ ಕತ್ತಲೆಯತ್ತ ಹೋಗ್ತಿದೆ ಅಂದಿದ್ದೇಕೆ?

ಶಾರುಖ್‌ ಖಾನ್‌ ಜತೆ ಯಶ್‌ ಸಿನಿಮಾ ಮಾಡ್ತಾರಂತೆ. ಒಳ್ಳೆ ಕಥೆ ಸಿಕ್ಕರೆ ಇಬ್ಬರೂ ಒಟ್ಟಿಗೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ಯಶ್‌ ಸದ್ಯ ಟಾಕ್ಸಿಕ್‌ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಕಳೆದ ತಿಂಗಳ ಜನವರಿ 6ರಂದು ಯಶ್‌ ಬರ್ತ್‌ಡೇ ನಿಮಿತ್ತ ಟಾಕ್ಸಿಕ್‌ ಸಿನಿಮಾದ ಶೀರ್ಷಿಕೆ ರಿವೀಲ್‌ ಆಗಿದೆ. ಕನ್ನಡದ ಜತೆಗೆ ಭಾರತದ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಚ್ಚರಿಯ ವಿಚಾರ ಏನೆಂದರೆ, ಇಂಗ್ಲೀಷ್‌ನಲ್ಲೂ ಈ ಸಿನಿಮಾ ರಿಲೀಸ್‌ ಆಗಿಲಿದೆ. ಈ ನಡುವೆ, ಟಾಕ್ಸಿಕ್‌ ಹೊರತುಪಡಿಸಿ ಯಶ್‌ ಅವರ ಬೇರಾವ ಸಿನಿಮಾ ಘೋಷಣೆ ಆಗಿಲ್ಲ. ಆದರೆ, ಕೆಲ ಬಾಲಿವುಡ್‌ ಚಿತ್ರಗಳಲ್ಲಿ ಯಶ್‌ ನಟಿಸಲಿದ್ದಾರೆ ಎಂಬ ಪುಕಾರು ಹರಿದಾಡುತ್ತಲೇ ಇದೆ.

ಕೆಜಿಎಫ್ ಸಿನಿಮಾ (kgf movie) ಮೂಲಕ ತಮ್ಮ ಖ್ಯಾತಿಯನ್ನು ಹಿರಿದಾಗಿಸಿಕೊಂಡ ಯಶ್‌, ಕರ್ನಾಟಕ ಮಾತ್ರವಲ್ಲದೆ, ದೇಶ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಡುವೆ ಹಿಂದಿ ಚಿತ್ರೋದ್ಯಮದಲ್ಲೂ ನೆಲೆಕಂಡುಕೊಳ್ಳಲು ಬಯಸಿದ್ದಾರಂತೆ. ಈಗಾಗಲೇ ಶಾರುಖ್‌ ಖಾನ್‌ ಮತ್ತು ಯಶ್‌ ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಮನಸ್ಸು ಮಾಡಿದ್ದಾರಂತೆ. ಅದರಂತೆ ಒಂದೊಳ್ಳೆ ಪ್ರಾಜೆಕ್ಟ್‌ಗಾಗಿ (project) ಈ ಜೋಡಿ ಕಾಯುತ್ತಿದೆ. ಅದು ಸಿಗುತ್ತಿದ್ದಂತೆ, ಸಿನಿಮಾ ಶುರುವಾಗಲಿದೆ ಎಂದು ಮುಂಬೈ ಮೂಲಗಳು ವರದಿ ಮಾಡಿವೆ. ಮತ್ತೊಂದು ಕಡೆ ಇದೇ ಸುದ್ದಿಯನ್ನು ಯಶ್‌ ಆಪ್ತ ಮೂಲಗಳು ಅಲ್ಲಗೆಳೆದಿವೆ. ಸದ್ಯಕ್ಕೆ ಯಶ್‌ ಅವರು ಕೈಯಲ್ಲಿರುವ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ ಎಂಬ ಸ್ಪಷ್ಟನೆ ನೀಡಿವೆ. ಈ ನಡುವೆ ರಾಮಾಯಣ ಸಿನಿಮಾ ವಿಚಾರವನ್ನು ನೋಡುವುದಾದರೆ, ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟ ಯಶ್‌ 150 ಕೋಟಿ ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇಷಾ ಕೊಪ್ಪೀಕರ್-ಟಿಮ್ಮಿ ನಾರಂಗ ಮಧ್ಯೆ ಪ್ರೀತಿ ಜಿಂಟಾ ಹೆಸರೇಕೆ ಬಂತು; ರಿಯಲ್ ಕಥೆ ಶುರುವಾಗಿದ್ದೇ ಅಲ್ಲಿ..!

ಯಶ್ ಇರಲಿ, ರಿಷಬ್ ಶೆಟ್ಟಿ ಇರಲಿ ನಮ್ಮ ನೆಲದಿಂದ ಸಿನಿಮಾ ಆರಂಭಿಸಿ ಅದನ್ನು ವರ್ಲ್ಡ್ ಲೆವೆಲ್‌ಗೆ (worls level) ಕೊಂಡೊಯ್ದವರು. ಅವರು ಬಾಲಿವುಡ್‌ ಮಂದಿಯನ್ನು ಕನ್ನಡಕ್ಕೆ ಕರೆತರಬಹುದೇ ಹೊರತು ಅಲ್ಲಿ ಹೋಗಿ ನಟಿಸಲ್ಲ ಅನ್ನೋದು ಕೆಲವು ಆಪ್ತರ ಮಾತು. ಇದೇ ರೀತಿಯ ಮಾತನ್ನು ಈ ಹಿಂದೆ ಯಶ್, ರಿಷಬ್ ಹೇಳಿದ್ದರು. ಆದರೆ ಕಾಲ ಬದಲಾದಂತೆ ಯೋಚನೆ ಬದಲಾಗಬಹುದು. ಶಾರೂಖ್ ಜೊತೆಗೆ ನಟಿಸಲು ಯಶ್ ಗ್ರೀನ್ ಸಿಗ್ನಲ್ ನೀಡಬಹುದೇನೋ ಎಂಬ ಮಾತು ಬಾಲಿವುಡ್ (bollywood) ಆಕಾಶದಲ್ಲಿ ಹಾರಾಡ್ತಾ ಇದೆ.