ಸ್ಯಾಂಡಲ್‌ವುಡ್ ನಟಿ ರಮ್ಯಾ ಕೂಡ ದೀಪಿಕಾ ಪಡುಕೋಣೆನ್ನು ಬೆಂಬಲಿಸಿ ಟ್ವಿಟ್ ಮಾಡಿದ್ದಾರೆ. ಮಹಿಳೆಯರನ್ನು ಪ್ರತಿಯೊಂದಕ್ಕೂ ಟೀಕೆ ಮಾಡಲಾಗುತ್ತಿದೆ ಎಂಬರ್ಥದಲ್ಲಿ ಮಾತನಾಡಿ ಸ್ಯಾಂಡಲ್ವುಡ್ ಪದ್ಮಾವತಿ ದೀಪಿಕಾಗೆ ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರು: ವಿವಾದಕ್ಕೀಡಾದ ನಟಿಮಣಿಯರ ಪರ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಬ್ಯಾಟಿಂಗ್ ಮಾಡಿದ್ದಾರೆ. ವಿಚ್ಛೇದನದ ಕಾರಣಕ್ಕೆ ನಟಿ ಸಮಂತಾ ರುತ್ ಪ್ರಭು ಅವರನ್ನು ಟೀಕಿಸಲಾಯಿತು. ಪ್ರತ್ಯೇಕಗೊಂಡ ಕಾರಣಕ್ಕೆ ನಟಿ ರಶ್ಮಿಕಾರನ್ನು ಟೀಕಿಸಲಾಯಿತು ಈತ ಬಟ್ಟೆಯ ಕಾರಣ್ಕಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ಟೀಕಿಸಲಾಗುತ್ತಿದೆ. ಹೀಗೆಯೇ ಇಂತಹ ಹಲವು ವೈಯಕ್ತಿಕ ಕಾರಣಕ್ಕೆ ಮಹಿಳೆಯರನ್ನು ಟೀಕಿಸಲಾಗುತ್ತಿದೆ. ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಮಹಿಳೆಯರು ದೇವಿ ದುರ್ಗೆಯ ಸ್ವರೂಪವಾಗಿದ್ದು, ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ ಎಂದು ನಟಿ ರಮ್ಯಾ ಹೇಳಿದ್ದಾರೆ.
ಪಠಾಣ್ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಅವರ ಅರೆಬರೆ ಬಟ್ಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಬಾಲಿವುಡ್ ಕಿಂಗ್ ಶಾರೂಖ್ ಖಾನ್ ನಟನೆಯ ಈ ಬೇಷರಂ ರಂಗ್ ಹಾಡು ಬಿಡುಗಡೆಯಾದಾಗಿನಿಂದಲೂ ತೀವ್ರ ವಿವಾದ ಸೃಷ್ಟಿಯಾಗಿದ್ದು, ಸಿನಿಮಾಗೆ ನಿಷೇಧ ಹೇರಲು ಆಗ್ರಹಿಸಲಾಗಿದೆ. ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು, ಕೇಸರಿ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಾಯ್ಕಾಟ್‌ಗೆ ಕರೆ ನೀಡಲಾಗಿದೆ.
40ನೇ ವಯಸ್ಸಿಗೆ 40ನೇ ಸಿನಿಮಾ ಸಹಿ ಮಾಡಿದ ರಮ್ಯಾ; ಮಿಸ್ ಮಾಡ್ದೆ ನೋಡಲೇ ಬೇಕಾದ ಚಿತ್ರಗಳಿವು
ಅಲ್ಲದೇ ನಟ ಪ್ರಕಾಶ್ ರೈ ಕೂಡ ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ದೀಪಿಕಾ ಪಡುಕೋಣೆ ಹಾಗೂ ಶಾರೂಕ್ ಖಾನ್ ಬೆಂಬಲಿಸಿ ಟ್ವಿಟ್ ಮಾಡಿದ್ದರು. ಇದು ಅಸಹ್ಯಕರ, ಇಂತಹದನ್ನು ಎಲ್ಲಿಯವರೆಗೆ ಸಹಿಸಬೇಕು. ಇದೊಂತರ ಬಣ್ಣದ ಬಗೆಗಿನ ಅಂಧತ್ವ (ಕಾಮಾಲೆ ಕಣ್ಣಿಗೆ ಕಾಣ್ಸೋದೆಲ್ಲ ಹಳದಿ ಎಂಬಂರ್ಥದಲ್ಲಿ) ಮಾತನಾಡಿದ್ದರು. ಈಗ ಸ್ಯಾಂಡಲ್‌ವುಡ್ ನಟಿ ರಮ್ಯಾ ಕೂಡ ದೀಪಿಕಾ ಪಡುಕೋಣೆನ್ನು ಬೆಂಬಲಿಸಿ ಟ್ವಿಟ್ ಮಾಡಿದ್ದಾರೆ. ಮಹಿಳೆಯರನ್ನು ಪ್ರತಿಯೊಂದಕ್ಕೂ ಟೀಕೆ ಮಾಡಲಾಗುತ್ತಿದೆ ಎಂಬರ್ಥದಲ್ಲಿ ಮಾತನಾಡಿ ಸ್ಯಾಂಡಲ್ವುಡ್ ಪದ್ಮಾವತಿ ದೀಪಿಕಾಗೆ ಬೆಂಬಲ ಸೂಚಿಸಿದ್ದಾರೆ.
BGS Utsav 2022: ಮದುವೆ ಏಕೆ ಆಗಬೇಕೆಂದು ಅರ್ಥವಾಗುತ್ತಿಲ್ಲ: ಮೋಹಕ ತಾರೆ ರಮ್ಯಾ
ಟಾಲಿವುಡ್ ನಟಿ ಸಮಂತಾ ರುತ್ ಪ್ರಭು, ನಟ ನಾಗಚೈತನ್ಯ ಜೊತೆ ತಮ್ಮ ವೈವಾಹಿಕ ಸಂಬಂಧವನ್ನು ಮುರಿದುಕೊಂಡಾಗ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ವೈಯಕ್ತಿಕವಾಗಿ ನಿಂದಿಸಿದ್ದರು. ಇದಕ್ಕೂ ಮೊದಲು ನಟಿ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆಗಿನ ತನ್ನ ನಿಶ್ಚಿತಾರ್ಥವನ್ನು ಮುರಿದುಕೊಂಡಾಗಲೂ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈಗ ದೀಪಿಕಾ ಬಟ್ಟೆಯ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ಸಿನಿಮಾರಂಗದಲ್ಲಿ ಮಹಿಳೆಯರನ್ನೇ ಪ್ರತಿಯೊಂದಕ್ಕೂ ಟೀಕೆ ಮಾಡಲಾಗುತ್ತಿದೆ ಎಂದು ಟ್ವಿಟ್ ಮಾಡಿದ್ದಾರೆ.
ಶಾರುಖ್ ಖಾನ್ ಸಿನಿಮಾಕ್ಕೆ ಮುಗಿಯದ ಗೋಳು; ಪಠಾಣ್‌ಗೂ ಕಾಡುತ್ತಿದೆ ನಿಷೇಧದ ಭೀತಿ!