ಲಾಕ್ ಡೌನ್‌ ಮುಗೀತು, ಇನ್ನಾದ್ರೂ ಹೊರಗೆ ಓಡಾಡೋಣ ಅಂದರೆ ಕೋವಿಡ್ ಎಲ್ಲಿ ಅಟಕಾಯಿಸಿಕೊಂಡು ಬಿಡುತ್ತೋ ಅನ್ನೋ ಭಯ. ಈ ಭಯಕ್ಕೆ ರಾಜಧಾನಿ ಬೆಂಗಳೂರಿನ ಹಲವರು ಈ ಮಹಾನಗರವನ್ನೇ ಬಿಟ್ಟು ‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ..’ ಅಂತ ಗುನು ಗುನಿಸುತ್ತಾ ತಮ್ಮೂರಿನ ದಾರಿ ಹಿಡಿಯುತ್ತಿದ್ದಾರೆ. ಸ್ಯಾಂಡಲ್ ವುಡ್‌ನ ಸ್ಟಾರ್ ಗಳಲ್ಲಿ ಹಲವರಿಗೆ ಫಾರ್ಮ್ ಹೌಸ್ ಇದೆ. ಹಸಿರು ತುಂಬಿರುವ ಫಾರ್ಮ್ ಹೌಸ್, ಆಗಾಗ ಸಿಟಿ ಅಂತ ಅವರು ಓಡಾಡುತ್ತಾ ಇದ್ದಾರೆ. ಆದರೆ ಸ್ಯಾಂಡಲ್ ವುಡ್‌ನ ಒಂದು ತಾರಾ ಜೋಡಿ ಮಾತ್ರ ಇವರೆಲ್ಲರಿಗಿಂತ ಡಿಫರೆಂಟ್. 

 ಈ ಜೋಡಿಯ ಯಾರು ಅಂತ ಹೇಳೋ ಮೊದಲು ಇವರ ಕತೆ ಹೇಳ್ಬೇಕು. ಒಬ್ಬ ಮಲೆನಾಡಿನ ಹುಡುಗ, ಮತ್ತೊಬ್ಬಾಕೆ ಬೇರೆ ರಾಜ್ಯದ ಹುಡುಗಿ. ಆ ಹುಡುಗ ಹುಡುಗಿ ಒಂದು ಸಿನಿಮಾದ ಮೂಲಕ ಪರಸ್ಪರ ಪರಿಚಯವಾಗ್ತಾರೆ. ನಿಧಾನಕ್ಕೆ ಸ್ನೇಹಿತರಾಗುತ್ತಾರೆ. ಆ ಸ್ನೇಹ ಪ್ರೀತಿಯ ರೂಪವನ್ನು ತಾಳಲಿಕ್ಕೆ ಹೆಚ್ಚು ಟೈಮ್ ತಗೊಳಲ್ಲ. ಈ ಹುಡುಗ ಹುಡುಗಿ ಬಿಂದಾಸ್ ಆಗಿ ಓಡಾಡ್ತಿರೋದನ್ನು ಜನ ಅಷ್ಟೇನೂ ಸೀರಿಯಸ್ ಆಗಿ ತಗೊಳಲ್ಲ. ಏಕೆಂದರೆ ಒಂದು ಸಿನಿಮಾ ಬಂತು ಅಂದಾಗ ಅದರ ಹೀರೋ ಹೀರೋಯಿನ್ ಜೊತೆಯಾಗಿ ಓಡಾಡೋದು ಕಾಮನ್ ಅಂತ ಅವರಿಗೂ ಗೊತ್ತು. ಆದರೆ ಯಾವಾಗ ಇವರ ಒಡನಾಟ ಸಿನಿಮಾ, ನಟನೆಯ ಲೆವೆಲ್‌ಅನ್ನು ಮೀರಿ ಬೆಳೆಯುತ್ತೋ ಆಗ ಇವರು ಸ್ಯಾಂಡಲ್‌ವುಡ್‌ನ ಲವರ್ ಗಳಾಗಿ ಗುರುತಿಸಿಕೊಳ್ಳುತ್ತಾರೆ. ಎಷ್ಟೋ ವರ್ಷದ ಪ್ರೀತಿ ಮದುವೆಯಲ್ಲಿ ಕೊನೆಯಾಗುತ್ತದೆ. 

 

ಹೀಗೆ ಒಂದಾದ ಸ್ಯಾಂಡಲ್ ವುಡ್ ಜೋಡಿ ದಿಗಂತ್ ಮಂಚಾಲೆ ಮತ್ತು ಐಂದ್ರಿತಾ ರೇ. ದಿಗಂತ್ ಮಲೆನಾಡು ಶಿರಸಿಯ ಹುಡುಗ, ಐಂದ್ರಿತಾ ಬೆಂಗಾಲಿ ಬೆಡಗಿ. ಈಗ ಮಲೆನಾಡ ಹೆಣ್ಣೇ ಆಗಿ ಬಿಟ್ಟಿದ್ದಾರೆ. 
ಹೌದು, ಪರಿಸರವನ್ನು ಬಹಳ ಇಷ್ಟ ಪಡುವ ಈಕೆ ಮತ್ತು ಪ್ರಕೃತಿ ಸೌಂದರ್ಯದ ನಡುವೆಯೇ ಹುಟ್ಟಿ ಬೆಳೆದ ದಿಗಂತ್ ಇಬ್ಬರೂ ಬೆಟ್ಟವೇರುವ ಫೋಟೋಗಳು ಸೋಷಲ್‌ ಮೀಡಿಯಾದಲ್ಲಿ ಸಖತ್ ಜನಪ್ರಿಯವಾಗುತ್ತಿದೆ. ಬರೀ ಬೆಟ್ಟವೇರೋದು ಮಾತ್ರವಲ್ಲ. ಒಂದು ದೊಡ್ಡ ಬಂಡೆಯನ್ನು ಏರುವ ಸಾಹಸವನ್ನು ಇವರು ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ಶೇರ್ ಮಾಡಿದ್ದಾರೆ. ಐಂದ್ರಿತಾ ಕಷ್ಟಪಟ್ಟು ಬಂಡೆಯೇರುವ ಸಾಹಸ ಮಾಡುತ್ತಿದ್ದರೆ, ಕೆಳಗೆ ಮೊಬೖಲ್‌ನಲ್ಲಿ ಈ ಬಂಡೆಯೇರುವ ಸಾಹಸವನ್ನು ದಿಗಂತ್ ವೀಡಿಯೋ ಮಾಡ್ತಿರೋದು, ಮಂಡಿ ಊರಬೇಡ ಅಂತೆಲ್ಲ ಎಚ್ಚರಿಸುತ್ತಿರೋದು ಈ ವೀಡಿಯೋದಲ್ಲಿದೆ. ಜೊತೆಗೆ ದಿಗಂತ್ ಬಂಡೆಯ ಮೇಲೆ ಮಾಡುವ ಸಾಹಸವನ್ನೂ ಪೋಸ್ಟ್ ಮಾಡಿದ್ದಾರೆ. 

ಮತ್ತೆ ಸ್ಲಿಮ್ ಆದ ಇಲಿಯಾನ ವರ್ಕ್ಔಟ್ ಚಿತ್ರಗಳು ಬಿಸಿ ದೋಸೆ! 

ಮಡ್ಡಿಫಿಂಗರ್ಸ್ ರಾಕ್‌ ಕ್ಲೈಂಬಿಂಗ್ ತಂಡದ ಜೊತೆಗೆ ಈ ಜೋಡಿ ಬೆಟ್ಟವೇರಿದ್ದಾರೆ. ಮೊದಲಿಗೆ ಐಂದ್ರಿತಾ ಬೆಟ್ಟದ ತುದಿಯಲ್ಲಿರುವ ಬಂಡೆಯನ್ನು ಹಗ್ಗದ ಸಹಾಯವಿಲ್ಲದೇ ಪ್ರಯಾಸಪಟ್ಟು ಏರಿದ್ದಾರೆ. ಇತರರು ಚಪ್ಪಾಳೆ ತಟ್ಟುವ ಮೂಲಕ ಐಂದ್ರಿತಾರ ಈ ಸಾಹಸವನ್ನು ಹೊಗಳಿದ್ದಾರೆ. ದಿಗಂತ್ ಮತ್ತೊಂದು ಬಂಡೆಯನ್ನೇರುವ ಸಾಹಸ ಮಾಡಿದ್ದಾರೆ. ಆದರೆ ತುದಿ ಮುಟ್ಟುವುದು ಅವರಿಂದ ಸಾಧ್ಯವಾಗಿಲ್ಲ. 

 

 
 
 
 
 
 
 
 
 
 
 
 
 

Leavin my baggage behind👉🏼 @diganthmanchale 😏 #ridingintosunday #saturdaymood

A post shared by Aindrita Ray (@aindrita_ray) on Jul 4, 2020 at 10:25am PDT

ಕೆಲವು ವರ್ಷಗಳ ಕೆಳಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರುವ ಈ ತಾರಾ ದಂಪತಿ ಇದೀಗ ಕೊರೋನಾ ಟೈಮ್‌ನಲ್ಲಿ ಬೆಟ್ಟವೇರಿ ರಾಕ್‌ ಕ್ಲೈಂಬಿಂಗ್ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಐಂದ್ರಿತಾ ತಮ್ಮ ಪೋಸ್ಟ್ ನಲ್ಲಿ ಬೆಟ್ಟವೇರೋದು, ಪ್ರಕೃತಿಗೆ ಹತ್ತಿರವಾಗೋದರಿಂದ ನಮ್ಮೆಲ್ಲ ಟೆನ್ಶನ್, ಕಷ್ಟಗಳು ಮಾಯವಾಗುತ್ತವೆ ಎಂದು ಬರೆದುಕೊಂಡಿದ್ದಾರೆ.

ಮಾಜಿ ಪೋರ್ನ್ ನಟಿ ಸನ್ನಿ‌ ಲಿಯೋನ್‌ಗಿದ್ದಾಳೆ ಒಬ್ಳು ಗರ್ಲ್ ಫ್ರೆಂಡ್! 

ದಿಗಂತ್ ‘ಮಾರಿಗೋಲ್ಡ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರೆ ಐಂದ್ರಿತಾ ‘ಗರುಡ’ ಹಾಗೂ ‘ಪ್ರೇಮಂ ಪೂಜ್ಯಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಟೈಮ್‌ನಲ್ಲಿ ಚಿತ್ರೀಕರಣ ಸ್ಥಗಿತಗೊಂಡಿರುವ ಕಾರಣ ಬೆಟ್ಟ, ಗುಡ್ಡ ಸುತ್ತಾಟ, ಬಂಡೆಯೇರುವ ಸಾಹಸ ಮಾಡುತ್ತಿದ್ದಾರೆ. ಬೆಟ್ಟವೇರೋದು, ಸೖಕಲಿಂಗ್ ಮಾಡೋದು, ಮನೆಯಲ್ಲಿ ಗಾರ್ಡನಿಂಗ್ ಮಾಡೋದು ಈ ಜೋಡಿಯ ಪ್ರೀತಿಯ ಹವ್ಯಾಸ. 

ನಂಗೆ ಮದ್ವೆ ಆಗು ಅಂದಿದ್ರು ದುಲ್ಖರ್ ಅಂತಾರಲ್ಲ ಈ ನಿತ್ಯಾ!