ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೊನ್ನಿಯನ್ ಸೆಲ್ವನ್ (Ponniyin Selvan) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ದೊಡ್ಡ ತಾರಾಬಳಗವಿರುವ ಪೊನ್ನಿಯನ್ ಸೆಲ್ವನ್ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಸದ್ಯ ಮೊದಲ ಭಾಗದ ಟೀಸರ್ ರಿಲೀಸ್ ಆಗಿದ್ದು ಟ್ರೆಂಡಿಂಗ್ ನಲ್ಲಿದೆ.
ಸೌತ್ ಸಿನಿಮಾರಂಗದಲ್ಲಿ ಮತ್ತೊಂದು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಆರ್ ಆರ್ ಆರ್ (RRR), ಕೆಜಿಎಫ್ 2 (KGF 2), 777 ಚಾರ್ಲಿ (777 Charlie) ಬಳಿಕ ಇದೀಗ ಮತ್ತೊಂದು ಸಿನಿಮಾ ಪೊನ್ನಿಯಿನ್ ಸೆಲ್ವನ್ ಬಿಡುಗೆಡೆಗೆ ಸಜ್ಜಾಗಿದ್ದು ಸದ್ಯ ಟೀಸರ್ ಮೂಲಕ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ಬಹುನಿರೀಕ್ಷೆಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳ ಸೆಳೆಯುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೊನ್ನಿಯನ್ ಸೆಲ್ವನ್ (Ponniyin Selvan) ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಪೊನ್ನಿಯನ್ ಸೆಲ್ವನ್ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಸದ್ಯ ಮೊದಲ ಭಾಗದ ಟೀಸರ್ ರಿಲೀಸ್ ಆಗಿದ್ದು ಟ್ರೆಂಡಿಂಗ್ ನಲ್ಲಿದೆ.
ಪೊನ್ನಿಯನ್ ಸೆಲ್ವನ್‌ನಲ್ಲಿ ದೊಡ್ಡ ತಾರಾಬಳಗವೇ ಇದೆ. ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai), ತಮಿಳಿನ ಖ್ಯಾತ ನಟರಾದ ವಿಕ್ರಮ್ (Vikram), ಕಾರ್ತಿ (Karthi), ಜಯಂ ರವಿ (Jayan Ravi) ಸೇರಿದಂತೆ ದೊಡ್ಡ ಕಾಲವಿದರ ದಂಡೇ ಸಿನಿಮಾದಲ್ಲಿದೆ. ಚೋಳ ಸಾಮ್ರಜ್ಯದ ಬಗ್ಗೆ ಇರುವ ಪೊನ್ನಿಯನ್ ಸಿನಿಮಾದಲ್ಲಿ ಕಲಾವಿದರ ಲುಕ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ನಟಿ ಐಶ್ವರ್ಯಾ ರೈ ಮತ್ತೊಮ್ಮೆ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಸಿನಿಮಾದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.
1955ರಲ್ಲಿ ಕಲ್ಕಿ ಕಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧರಿಸಿ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲ ನಟ ವಿಕ್ರಮ್, ಆದಿತ್ಯ ಕರಿಕಾಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಜಯಂ ರವಿ ರಾಜ ರಾಜ ಜೋಳ ಪಾತ್ರದಲ್ಲಿ ಮಿಂಚಿದ್ದಾರೆ. ನಟ ಕಾರ್ತಿ ವಲ್ಲವರಾಯನ್ ವಂಗಿಯಾದೇವನ್ ಪಾತ್ರ ಮಾಡಿದ್ದಾರೆ. ಇನ್ನು ನಟಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡರೆ ಮತ್ತೊಂದು ಪಾತ್ರ ಸಾರಾ ಅರ್ಜುನ್ ಪಾತ್ರದಲ್ಲಿ ಮಿಂಚಿದ್ದಾರೆ. ನಟಿ ತ್ರಿಷಾ ಕುಂದವೈ ಪಿರಟ್ಟಿಯಾರ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ನಟಿ ಶೋಭಿತಾ ನಾವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
Ponniyin Selvan; ಐಶ್ವರ್ಯಾ ಲುಕ್‌ಗೆ ಫ್ಯಾನ್ಸ್ ಫಿದಾ, ಉಳಿದವರ ಗೆಟಪ್ ಹೇಗಿದೆ?
ಪೊನ್ನಿಯನ್ ಸೆಲ್ವನ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು ಟೀಸರ್ ಕೂಡ ಬಹುಭಾಷೆಯಲ್ಲಿ ರಿಲೀಸ್ ಆಗಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲಿ ಪೊನ್ನಿಯನ್ ಸೆಲ್ವನ್ ಟೀಸರ್ ಅಬ್ಬರಿಸುತ್ತಿದೆ. ಅಂದಹಾಗೆ ಪೊನ್ನಿಯಿನ್ ಸೆಲ್ವನ್ ಸಿನಿಮಾಗೆ ಕನ್ನಡದ ಸ್ಟಾರ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್ ನೀಡಿದ್ದಾರೆ. ಹೌದು, ಪೊನ್ನಿಯಿನ್ ಸೆಲ್ವನ್ ಸಿನಿಮಾದ ಕನ್ನಡ ಟೀಸರ್ ಅನ್ನು ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ದಾರೆ. ಕನ್ನಡ ಟೀಸರ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಹಾರೈಸಿದ್ದಾರೆ.
'ನಾನು ಮಣಿರತ್ನಂ ಸರ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಪ್ರತಿಭಾವಂತ ಸಿನಿಮಾ ನಿರ್ದೇಶಕರ ಮುಂದಿನ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞನಾಗಿರುತ್ತೇನೆ' ರಕ್ಷಿತ್ ಶೆಟ್ಟಿ ಹೇಳಿದ್ದಾರೆ. 'ಟೀಸರ್ ಅದ್ಭುತವಾಗಿದೆ. ಇಡೀ ತಂಡಕ್ಕೆ ಒಳ್ಳಯದಾಗಲಿ'ಎಂದು ಸಿಂಪಲ್ ಸ್ಟಾರ್ ಟೀಸರ್ ರಿಲೀಸ್ ಮಾಡಿ ಸಿನಿಮಾತಂಡವನ್ನು ಹಾಡಿಹೊಗಳಿದ್ದಾರೆ.
ಏನು..! ಐಶ್ವರ್ಯಾ ರೈ ಕನ್ನಡಕ್ಕೆ ಬರ್ತಾರಂತಾ?
ಪೊನ್ನಿಯಿನ್ ಸೆಲ್ವನ್ ಸಿನಿಮಾದ ಟೀಸರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಕಾರ್ಯಕ್ರಮದಲ್ಲಿ ತಮಿಳು ನಟ ವಿಕ್ರಮ್ ಗೈರಾಗಿದ್ದರು. ವಿಕ್ರಮ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಬಹುನಿರೀಕ್ಷೆಯ ಸಿನಿಮಾದ ಟೀಸರ್ ಕಾರ್ಯಕ್ರಮದಲ್ಲಿ ಗೈರಾಗಿದ್ದರು. ವಿಕ್ರಮ್‌ಗೆ ಹೃದಯಾಘಾತವಾಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಬಳಿಕ ಪುತ್ರ ಧ್ರುವ ವಿಕ್ರಮ್ ಮಾಹಿತಿ ಹಂಚಿಕೊಂಡು ಅಪ್ಪನಿಗೆ ಹೃದಯಾಘಾತವಾಗಿಲ್ಲ, ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಸದ್ಯ ವಿಕ್ರಮ್ ಚೇತರಿಸಿಕೊಳ್ಳುತ್ತಿದ್ದಾರೆ. ಬೇಗ ಗುಣಮುುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
