ಹಿರಿಯ ನಟ, ಕಲಾವಿದ, ಬರಹಗಾರ ಕೃಷ್ಣ ನಾಡಿಗ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೃಷ್ಣ ನಾಡಿಗ್ ಲಗ್ನಪತ್ರಿಕೆ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಚಿತ್ರೀಕರಣದ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡ ಕಾರಣ ಕ್ಲಿನಿಕ್ ನಲ್ಲಿ ಇಸಿಜಿ ಮಾಡಿಸಿದ್ದಾರೆ.

ನಂತರ ಎದೆ ನೋವು ಹೆಚ್ಚಾದ ಕಾರಣ ಜಯದೇವಾ ಆಸ್ಪತ್ರೆಗೆ ಕರೆದೊಯ್ಯು ಸಂದರ್ಭ ಮೃತ ಪಟ್ಟಿದ್ದಾರೆ. ಕಿರುತೆರೆ ಧಾರವಾಹಿಯಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಪೈಲ್ವಾನ್, ಆದಿ ಲಕ್ಷ್ಮಿ ಪುರಾಣ ಹೀಗೆ ಇನ್ನು ಸಾಕಷ್ಟು ಚಿತ್ರಗಳಲ್ಲಿ ಇವರು ನಟಿಸಿದ್ದರು.

ಕಿರುತೆರೆ ಧಾರವಾಹಿಯಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಪೈಲ್ವಾನ್ . ಆದಿ ಲಕ್ಷ್ಮಿ ಪುರಾಣ ಹೀಗೆ ಇನ್ನು ಸಾಕಷ್ಟು ಚಿತ್ರಗಳಲ್ಲಿ ಇವರು ನಟಿಸಿದ್ದರು.

ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿ - ಆಸ್ಕರ್ ಪುರಸ್ಕೃತೆ ನಿಧನ

ನಾಡಿಗ್ ಚಿಕ್ಕಮಗಳೂರು ಮೂಲದವರು. ನಾಟಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡ ಇವರು ಪುಟ್ಟಣ್ಣ ಕಣಗಾಲ್ ಚಿನಿಮಾಗಳನ್ನು ನೋಡಿ ನಿರ್ದೇಶಕನಾಗುವ ಕನಸು ಹೊತ್ತು ಬಂದಿದ್ದರು. ಆದರೆ ಆಗಿದ್ದು ನಟ.

ನಿರ್ದೇಶನದ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದ ಅವರು ಕರೆಯೇ ಕೋಗಿಲೆ ಮಾಧವನ ಎಂಬ ಸಿನಿಮಾ ಮಾಡಲು ಹೊರಟಿದ್ದರೂ, ಸಿನಿಮಾ ಅರ್ಧದಲ್ಲಿ ನಿಂತಿತ್ತು. ಹಿರಿಯ ಕಲಾವಿದನ ಅಗಲಿಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.