ದಯವಿಟ್ಟು ಒಡೆದು ಆಳುವ ನೀತಿ ನಿಲ್ಲಿಸಿ, ಅಲ್ಲು ಅರ್ಜುನ್ ನನ್ನ ಸಿನಿಮಾದಲ್ಲಿ ನಟಿಸ್ತಾರೆ; ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಮಾತನಾಡಿ ದಕ್ಷಿಣ ಭಾರತದ ಸಿನಿಮಾ ಮತ್ತು ಬಾಲಿವುಡ್ ಎನ್ನುವ ಭಿನ್ನಾಭಿಪ್ರಾಯ ಇರಬಾರದು, ಎಲ್ಲಾ ಸಿನಿಮಾರಂಗವೂ ಒಟ್ಟಾಗಿ ಸಿನಿಮಾ ಮಾಡಬೇಕು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್(Akshay Kumar) ನಟನೆಯ ಸಾಮ್ರಾಟ್ ಪೃಥ್ವಿರಾಜ್(Samrat Prithviraj) ಸಿನಿಮಾ ರಿಲೀಸ್ ಆಗಿದ್ದು ಪ್ರಮೋಷನ್ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ದಿನ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಕೂಡ ತೆರೆಗೆ ಬಂದಿದೆ. ಹಾಗಾಗಿ ಎರಡು ಸಿನಿಮಾಗಳನ್ನು ಹೋಲಿಕೆ ಮಾಡಿ ಸೌತ್ ವರ್ಸಸ್ ಬಾಲಿವುಡ್ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ನಟ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅಕ್ಷಯ್ ಕುಮಾರ್ ದಕ್ಷಿಣ ಭಾರತದ ಸಿನಿಮಾ ಮತ್ತು ಬಾಲಿವುಡ್ ಎನ್ನುವ ಭಿನ್ನಾಭಿಪ್ರಾಯ ಇರಬಾರದು, ಎಲ್ಲಾ ಸಿನಿಮಾರಂಗವೂ ಒಟ್ಟಾಗಿ ಸಿನಿಮಾ ಮಾಡಬೇಕು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಹಿಂದಿ ಸಿನಿಮಾಗಳಿಗಿಂತ ದಕ್ಷಿಣ ಭಾರತದ ಸಿನಿಮಾಗಳು ಹೇಗೆ ಉತ್ತಮ ಕಲೆಕ್ಷನ್ ಮಾಡುತ್ತಿವೆ ಎಂದು ಹೇಳಿದ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್ ಕುಮಾರ್, ದ'ಯವಿಟ್ಟು ದೇಶದಲ್ಲಿ ಒಡೆದು ಆಳುವ ರೀತಿಯ ಸನ್ನಿವೇಶವನ್ನು ಸೃಷ್ಟಿಸಬೇಡಿ. ದಕ್ಷಿಣ ಭಾರತ ಮತ್ತು ಉತ್ತರ ಭಾರತ ಎಂದು ಕರೆಯಬೇಡಿ. ನಾವೆಲ್ಲರೂ ಒಂದೇ ಉದ್ಯಮದವರು. ಈಗ ಎಲ್ಲಾ ಚಿತ್ರರಂಗಗಳು ಸೇರಲು ಸಮಯ ಬಂದಿದೆ. ಎಲ್ಲಾ ಭಾರತೀಯ ಪ್ರೇಕ್ಷಕರಿಗಾಗಿ ಒಟ್ಟಿಗೆ ಸೇರಿ ಕೆಲಸ ಮಾಡುವ ಕಾಲ ಬಂದಿದೆ. ಶೀಘ್ರದಲ್ಲೇ ಅಲ್ಲು ಅರ್ಜುನ್ ನನ್ನ ಜೊತೆ ಕೆಲಸ ಮಾಡುತ್ತಾರೆ ಮತ್ತು ನಾನು ದಕ್ಷಿಣದ ಮತ್ತೊಬ್ಬ ನಟನೊಂದಿಗೆ ಅಭಿನಯಿಸುತ್ತೇನೆ. ಇಂದಿನಿಂದ ಅದೇ ದಾರಿಯಲ್ಲಿ ಮುನ್ನಡೆಯಬೇಕು' ಎಂದು ಹೇಳಿದ್ದಾರೆ.
ನಟ ಅಕ್ಷಯ್ ಕುಮಾರ್ ಈ ಮೊದಲು ಈ ಬಗ್ಗೆ ಮಾತನಾಡಿ ಬೇಸರ ಹೊರಹಾಕಿದ್ದರು. ಪ್ಯಾನ್ ಇಂಡಿಯಾ ಎನ್ನುವ ಪದ ಕಂಡರೆ ಸಿಟ್ಟು ಬರುತ್ತದೆ ಎಂದಿದ್ದ ಅಕ್ಷಯ್ ಕುಮಾರ್ ಒಡೆದು ಆಳುವ ನೀತಿಯನ್ನು ನಿಲ್ಲಿಸಿ ಎಂದು ಹೇಳಿದ್ದರು. ಇದೀಗ ಮತ್ತದೆ ಮಾತನ್ನು ಪುನರುಚ್ಚರಿಸಿದ್ದಾರೆ. ಅಲ್ಲದೇ ಶೀಘ್ರದಲ್ಲಿ ದಕ್ಷಿಣ ಭಾರತೀಯ ಕಲಾವಿದರ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಅಕ್ಷಯ್ ಕುಮಾರ್ ಈ ಹೇಳಿಕೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಅಕ್ಷಯ್ ಯಾವ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಮತ್ತೆ ಸೌತ್ ಸ್ಟಾರ್ ಅಬ್ಬರಕ್ಕೆ ಮಂಕಾದ ಬಾಲಿವುಡ್; ಕಮಲ್ ಹಾಸನ್ ಮುಂದೆ ಮಂಡಿಯೂರಿದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಸದ್ಯ ಪೃಥ್ವಿರಾಜ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಯಶ್ ರಾಜ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಸುಮಾರು 300 ಕೋಟಿ ರೂ. ಬೆಜಟ್ ನಲ್ಲಿ ತಯಾರಾದ ಈ ಸಿನಿಮಾ ಮೊದಲ ದಿನ 11 ಕೋಟಿ ಕಲೆಕ್ಷನ್ ಮಾಡಿದೆ. ಅಕ್ಷಯ್ ನಟನೆಯ ಪೃಥ್ವಿರಾಜ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಚಿತ್ರತಂಡಕ್ಕೆ ಭಾರಿ ನಿರಾಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಪೃಥ್ವಿರಾಜ್ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆಯಲ್ಲಿದೆ ಸಿನಿಮಾತಂಡ.
Samrat Prithviraj Twitter Review; ಅಕ್ಷಯ್ ಕುಮಾರ್ ಸಿನಿಮಾಗೆ ಫ್ಯಾನ್ಸ್ ಫಿದಾ
ಚಿತ್ರದಲ್ಲಿ ಅಕ್ಷಯ್ ಕುಮಾರ್ ರಾಜ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಮಿಂಚಿದ್ದಾರೆ. ಮಾನುಷಿಗೆ ಇದು ಮೊದಲ ಸಿನಿಮಾ. ಇನ್ನು ಈ ಸಿನಿಮಾದಲ್ಲಿ ಸಂಜಯ್ ದತ್, ಸೋನು ಸೇರಿದಂತೆ ಅನೇಕ ಕಲಾವಿದರು ಬಣ್ಣಹಚ್ಚಿದ್ದಾರೆ.